ಬ್ರೇಕಿಂಗ್ ನ್ಯೂಸ್
30-11-20 06:31 pm Mangalore Correspondent ಕ್ರೈಂ
ಮಂಗಳೂರು, ನ.30: ಮಹಿಳೆಯೊಬ್ಬರ ಮನೆಗೆ ನುಗ್ಗಿ, ಅಸಭ್ಯವಾಗಿ ವರ್ತಿಸಿದ್ದಲ್ಲದೆ ಪೊಲೀಸ್ ವಾರ್ತೆ ಪತ್ರಿಕೆ ಹೆಸರಲ್ಲಿ ಬ್ಲಾಕ್ ಮೇಲ್ ಮಾಡಿರುವ ಬಗ್ಗೆ ಬಜ್ಪೆ ಠಾಣೆಯಲ್ಲಿ ಮೂರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಬಗ್ಗೆ ಪೊಲೀಸ್ ವಾರ್ತೆ ಪತ್ರಿಕೆಯ ಸುಭಾಸ್ ಶೆಟ್ಟಿ, ಮನೋಜ್ ಉಳ್ಳಾಲ್ ಮತ್ತು ನಿತಿನ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ನ.26ರಂದು ಈ ಮೂವರು ಮರವೂರಿನ ಮನೆಗೆ ಐ ಟ್ವೆಂಟಿ ಕಾರಿನಲ್ಲಿ ತೆರಳಿದ್ದು, ಅಲ್ಲಿ ದಿವ್ಯ ಎಂಬ ಹುಡುಗಿಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಆಬಳಿಕ ಮೊಬೈಲಿನಲ್ಲಿ ಫೋಟೊ ತೆಗೆದು, ನಾವು ಮೀಡಿಯಾದವರು. ನಿಮ್ಮಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ. ಈ ಬಗ್ಗೆ ನಾವು ಪೊಲೀಸ್ ವಾರ್ತೆ ಪತ್ರಿಕೆಯಲ್ಲಿ ಮತ್ತು ಸ್ಟೇಟ್ ಚಾನಲಿನಲ್ಲಿ ಹಾಕುವುದಾಗಿ ಬೆದರಿಸಿದ್ದಾರೆ. ಆಬಳಿಕ ಒಂದು ಲಕ್ಷ ರೂ. ಕೊಟ್ಟರೆ ಸುದ್ದಿ ಹಾಕುವುದಿಲ್ಲ ಎಂದು ಹೇಳಿ ಹಣದ ಬೇಡಿಕೆ ಮುಂದಿಟ್ಟಿದ್ದಾರೆ.
ಕೊನೆಗೆ, 15 ಸಾವಿರ ರೂ.ವನ್ನು ಮನೆಯವರು ಕೊಟ್ಟಿದ್ದಾರೆ. ಉಳಿದ ಹಣವನ್ನು ಆಮೇಲೆ ಕೊಡುವುದಾಗಿ ಹೇಳಿದ್ದಾರೆ. ಆದರೆ, ಮರುದಿನ ಮನೋಜ್ ಮತ್ತು ನಿತಿನ್ ಮನೆಯವರಿಗೆ ಫೋನ್ ಮಾಡಿ, ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರು. ಈ ಬಗ್ಗೆ ಮಹಿಳೆ, ಫೋನ್ ಮಾಡಿ ಹಣ ಕೇಳುತ್ತಿರುವ ಬಗ್ಗೆ ಕರೆಯನ್ನು ರೆಕಾರ್ಡ್ ಮಾಡಿದ್ದರು. ಹಣ ಕೊಡದಿದ್ದರೆ ಚಾನೆಲ್ನಲ್ಲಿ ಸುದ್ದಿ ಹಾಕಿಸುತ್ತೇನೆ ಎಂದು ಬೆದರಿಕೆ ಒಡ್ಡಿದ್ದರಿಂದ ಮಹಿಳೆ ಹೆದರಿದ್ದರು.
ಆಬಳಿಕ ಮಹಿಳೆ ಮತ್ತು ಪತಿ ಚಂದ್ರಶೇಖರ್ ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಮೂವರ ಹೆಸರು ನಮೂದಿಸಿದ್ದು, ಬ್ಲಾಕ್ ಮೇಲ್ ವಿಚಾರದಲ್ಲಿ ವಿವರವಾಗಿ ದೂರು ತಿಳಿಸಿದ್ದಾರೆ. ಸುಭಾಸ್ ಶೆಟ್ಟಿ ಮತ್ತು ಆತನ ಮೂವರು ಸಹಚರರು ಈಗ ತಲೆಮರೆಸಿಕೊಂಡಿದ್ದಾರೆ. ಬಜ್ಪೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
The Bajpe Police have registered Blackmail and Extortion case against Journalist Police Varthe Subhas Shetty, Manoj Ullal and Nitin.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm