ಬ್ರೇಕಿಂಗ್ ನ್ಯೂಸ್
13-11-20 04:56 pm Mangalore Correspondent ಕ್ರೈಂ
ಪುತ್ತೂರು, ನವೆಂಬರ್ 13: ಮುಸ್ಲಿಂ ಯುವಕನೊಬ್ಬ ಹಿಂದು ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಯುವತಿಯ ಸ್ನೇಹ ಸಂಪಾದಿಸಿ ಆಕೆಯೊಂದಿಗೆ ಧರ್ಮಸ್ಥಳ ಸೇರಿ ಸುತ್ತಾಡಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕಡಬ ತಾಲೂಕು ಮರ್ದಾಳ ಗ್ರಾಮದ ಪಾಲೆತ್ತಡ್ಕ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರು ಬದಲಾಯಿಸಿ ಕೌಶಿಕ್ ಯಾನೆ ಸಂಜು ಎಂಬ ಹೆಸರಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ. ಅಲ್ಲದೆ, ತನಗೆ ತಂದೆ, ತಾಯಿ ಇಲ್ಲದಿದ್ದು, ಯಾರಾದ್ರೂ ಗೆಳಯರಾಗುವವರು ಫ್ರೆಂಡ್ ರಿಕ್ವೆಸ್ಟ್ ಕಳಿಸುವಂತೆ ಕೇಳಿಕೊಂಡಿದ್ದ. ಅಲ್ಲದೆ, 20ರಿಂದ 25 ವರ್ಷದ ಒಳಗಿನ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟನ್ನೂ ಕಳಿಸಿದ್ದ. ಈ ವೇಳೆ, ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯೊಬ್ಬಳು ಕನೆಕ್ಟ್ ಆಗಿದ್ದು, ವಾಟ್ಸಪ್ ನಂಬರ್ ಪಡೆದು ಇಬ್ಬರೂ ಚಾಟಿಂಗ್ ಆರಂಭಿಸಿದ್ದರು. ಆನಂತರ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಯುವತಿಯೂ ಹುಚ್ಚು ಮಾತಿಗೆ ಮರುಳಾಗಿದ್ದಾಳೆ.



ಇತ್ತೀಚೆಗೆ ನವೆಂಬರ್ 1ರಂದು ಹುಡುಗಿ ತನ್ನ ಹೆತ್ತವರ ಸಮ್ಮತಿ ಪಡೆದು, ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆತುಂಬ ಕುಂಕುಮ ಪ್ರಸಾದ ಹಾಕ್ಕೊಂಡಿದ್ದ ಕೌಶಿಕ್ ಯಾನೆ ಅಬ್ದುಲ್ಲ ಹುಡುಗಿ ಜೊತೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದ. ಬಳಿಕ ಈ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದಲ್ಲದೆ, ತಾನು ಅಪ್ಪಟ ಹಿಂದು ಎನ್ನುವಂತೆ ಹುಡುಗಿ ಮುಂದೆ ನಿರೂಪಿಸಲು ಹೋಗಿದ್ದಾನೆ. ಆದರೆ, ಫೇಸ್ಬುಕ್ ನಲ್ಲಿ ಹೀಗೆ ನಾಮ ಹಾಕ್ಕೊಂಡು ಫೋಟೋ ಹಾಕಿದ್ದನ್ನು ಗಮನಿಸಿದ ಆತನ ಮುಸ್ಲಿಂ ಸಮುದಾಯದ ಯುವಕರು ಆಕ್ಷೇಪಿಸಿದ್ದಾರೆ. ಈ ವೇಳೆ, ಅಬ್ದುಲ್ ರಜಾಕನ ವಾಸ್ತವ ಹೊರಗೆ ಬಂದಿದ್ದು ಹುಡುಗಿಯೂ ತಾನು ಮೋಸ ಹೋಗಿರುವುದನ್ನು ಅರಿತಿದ್ದಾಳೆ.
ಮನೆಯಲ್ಲಿ ಹೊಸ ಹುಡುಗ ಸಂಪರ್ಕ ಆಗಿದ್ದನ್ನು ಹೇಳಿಕೊಂಡು ತಿರುಗಿದ್ದ ಹುಡುಗಿಗೆ ಮುಸ್ಲಿಂ ಹುಡುಗನ ನಾಟಕ ಅರಿವಾಗಿದ್ದು, ಸುಳ್ಳು ಹೇಳಿ ವಂಚಿಸಿರುವ ವಿಚಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪುತ್ತೂರು ಭಾಗದಲ್ಲಿ ಈ ವಿಚಾರ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಕೂಡ ಲವ್ ಜಿಹಾದಿ ಕೃತ್ಯದ ಒಂದು ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಅಬ್ದುಲ್ ರಜಾಕ್ ಫೇಸ್ಬುಕ್ ನಲ್ಲಿ ಇನ್ನೂ ಹಲವು ಖಾತೆಗಳನ್ನು ಹೊಂದಿರುವುದು ಬಹಿರಂಗವಾಗಿದ್ದು, ಕನಕರಾಜು ಹೆಸರಲ್ಲಿ ಅಕೌಂಟ್ ಹೊಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹುಡುಗ- ಹುಡುಗಿ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.
Puttur Muslim Boy Fakes himself as Hindu to win the heart of Girl on Facebook for Marriage. Later he was exposed and a case has been registered in Uppinangady Police Station. The boy is identified as Abdul Razak (25), son of Sheikh Ismail, resident of Palathadka House in Mardhala, Bantra village, Kadaba taluk
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am