ಬ್ರೇಕಿಂಗ್ ನ್ಯೂಸ್
09-11-20 10:46 am Udupi Correspondent ಕ್ರೈಂ
ಉಡುಪಿ, ನವೆಂಬರ್ 09 : ಯುವತಿಯನ್ನ 13 ವರ್ಷ ಪ್ರೀತಿ ನೆಪದಲ್ಲಿ ಸಂಬಂಧ ಬೆಳೆಸಿಕೊಂಡಿದ್ದ ಯುವಕನೊಬ್ಬ ಮದುವೆಯ ದಿನವೇ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ.
ಮಣಿಪಾಲ ಮೂಲದ ಮಮತಾ ಮತ್ತು ಪರ್ಕಳದ ಗಣೇಶ್ ಅವರ ಸುದೀರ್ಘ ಕಾಲದ ಪ್ರೇಮ ಕಥೆಯಿದು. ಹ್ಯಾಂಗ್ಯೋ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ನಡುವೆ 13 ವರ್ಷದ ಹಿಂದೆ ಪ್ರೇಮಾಂಕುರವಾಗಿತ್ತು ಈ ಅವಧಿಯಲ್ಲಿ ಇಬ್ಬರ ನಡುವೆ ದೈಹಿಕ ಸಂಪರ್ಕ ಬೆಳೆದಿದ್ದು ಮದುವೆಯಾಗುವುದಾಗಿ ನಂಬಿಸಿ ಯುವಕ 13 ವರ್ಷ ದಿನ ದೂಡಿದ್ದಾನೆ. ಈ ಮಧ್ಯೆ, ಎರಡು ಬಾರಿ ಅಬಾರ್ಷನ್ ಕೂಡ ಮಾಡಿಸಿದ್ದಾನೆ.
ಆದರೆ, ಇತ್ತೀಚೆಗೆ ಬೇರೆ ಹುಡುಗಿಯ ಜೊತೆ ಮದುವೆಯಾಗಲು ಮುಂದಾಗಿದ್ದ ಗಣೇಶ್, ನವೆಂಬರ್ ನಾಲ್ಕಕ್ಕೆ ಮದುವೆ ಮಹೂರ್ತ ಫಿಕ್ಸ್ ಮಾಡಿದ್ದಾನೆ. ಈ ವಿಚಾರ ಪ್ರೀತಿಸಿದ ಮಮತಾಳಿಗೆ ಗೊತ್ತಾಗಿ, ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಂತೆ ಗಣೇಶ್, ಪ್ಲೇಟ್ ಚೇಂಜ್ ಮಾಡಿದ್ದು ನವೆಂಬರ್ ಆರಕ್ಕೆ ಪ್ರೀತಿಸಿದ ಮಮತಾಳನ್ನೇ ಮದುವೆಯಾಗುವುದಾಗಿ ಗಣೇಶ್ ಒಪ್ಪಿಕೊಂಡಿದ್ದ.
ಹೀಗಾಗಿ, ಮದುವೆಯ ಸಂಭ್ರಮದಲ್ಲಿ ಯುವತಿ ಮಮತಾ ಕಡೆಯವರು ಎಲ್ಲ ಶಾಸ್ತ್ರಗಳನ್ನು ಮುಗಿಸಿದ್ದರು. ಯುವತಿ, ಮದರಂಗಿ ಮುಗಿಸಿಕೊಂಡು ದಿಬ್ಬಣ ಶಾಸ್ತ್ರದಲ್ಲಿ ಮದುವೆ ಮಂಟಪಕ್ಕೂ ಬಂದಿದ್ದಾಳೆ. ಆದರೆ ಯುವಕ ಗಣೇಶ್ ಆಗಲೀ, ಆತನ ಕಡೆಯವರಾಗಲೀ ಬರಲಿಲ್ಲ. ಯುವಕ ಮತ್ತೆ ಕೈಕೊಟ್ಟಿದ್ದು ಗೊತ್ತಾಗಿ ಯುವತಿಗೆ ಆಕಾಶವೇ ಕುಸಿದು ಬಿದ್ದಂತಾಗಿದೆ. ಬಳಿಕ ಯುವತಿ ಆಕ್ರೋಶಗೊಂಡು ಯುವಕನ ಮನೆ, ಸಂಬಂಧಿಕರ ಮನೆಯನ್ನೆಲ್ಲ ಜಾಲಾಡಿದ್ದಾಳೆ. ಯುವಕ ಒಂದು ದಿನ ಕಳೆದರೂ ಸಿಗದಿದ್ದಾಗ ಆತನ ಮನೆಯ ಮುಂದೆ ಪ್ರತಿಭಟನೆ ಕುಳಿತಿದ್ದಾಳೆ. ಜೀವನದ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾಳೆ. 13 ವರ್ಷದ ಪ್ರೀತಿಯ ನಾಟಕಕ್ಕೆ ತಿಲಾಂಜಲಿ ಇತ್ತ ಯುವಕ ಗಣೇಶ್ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
A Udupi couple were involved in a love affair for 13 years. But the groom has escaped on the day of the wedding after making the girl pregnant. Now the girl's family is searching for the missing groom.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm