ಬ್ರೇಕಿಂಗ್ ನ್ಯೂಸ್
07-11-20 11:45 am Mangalore Correspondent ಕ್ರೈಂ
ಉಳ್ಳಾಲ, ನವೆಂಬರ್ 07: ಇಲ್ಲಿನ ಬಗಂಬಿಲ ರಸ್ತೆಯಲ್ಲಿ ಯುವತಿಯ ಸರ ಕಳವು ನಡೆಸಿದ ಆರೋಪಿಯನ್ನು ಮೂರೇ ಗಂಟೆಗಳಲ್ಲಿ ಎಸಿಪಿ ನೇತೃತ್ವದ ಉಳ್ಳಾಲ ಹಾಗೂ ಕೊಣಾಜೆ ಪೊಲೀಸರ ತಂಡ ದೇರಳಕಟ್ಟೆಯಲ್ಲಿ ಬಂಧಿಸಿದ್ದಾರೆ.
ಕೇರಳದ ಕಣ್ಣೂರು ಮೂಲದ ಸುಲ್ತಾನ್ (28) ಬಂಧಿತ ಆರೋಪಿ. ದೇರಳಕಟ್ಟೆಯಲ್ಲಿರುವ ಹೊಟೇಲೊಂದರಲ್ಲಿ ಕೆಲಸಕ್ಕಿದ್ದ ಈತ ಕಳವು ಕೃತ್ಯದಲ್ಲಿ ಭಾಗಿಯಾಗಿದ್ದಾನೆ. ಬಗಂಬಿಲ ಎಂಬಲ್ಲಿ ನಿನ್ನೆ ಸಂಜೆ ಕೆಲಸ ಮುಗಿಸಿ ಮನೆ ಕಡೆಗೆ ತೆರಳುತ್ತಿದ್ದ ನಿಶಾ ಎಂಬವರ ಕುತ್ತಿಗೆಯಿಂದ ಒಂದು ಪವನ್ ಬೆಲೆಬಾಳುವ ಚಿನ್ನದ ಸರವನ್ನು ಬುಲೆಟ್ ಬೈಕಿನಲ್ಲಿ ಬಂದಿದ್ದ ಆರೋಪಿ ಸುಲ್ತಾನ್ ಕಳವು ನಡೆಸಿದ್ದ. ಈತನ ಕಳವು ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಅಲ್ಲಲ್ಲಿ ಬಂದೋಬಸ್ತ್ ನಡೆಸಿ ತಪಾಸಣೆ ಆರಂಭಿಸಿದ್ದರು. ಕೊಣಾಜೆ ಠಾಣಾ ಕ್ರೈಂ ತಂಡದ ಸಹಕಾರವನ್ನು ಪಡೆದು ತಪಾಸಣೆ ಆರಂಭಿಸಿದಾಗ ಸಿಸಿಟಿವಿಯಲ್ಲಿ ಸೆರೆಸಿಕ್ಕ ಬುಲೆಟ್ ಮತ್ತು ಆರೋಪಿಯ ಟೀಶಟ್೯ ಆಧಾರದಲ್ಲಿ, ಆರೋಪಿ ಬಾರ್ ಒಳಗಡೆ ಪ್ರವೇಶಿಸುತ್ತಿದ್ದಂತೆ ಸೆರೆ ಹಿಡಿದು ಬಂಧಿಸಿದ್ದಾರೆ.
ಯುವತಿ ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದ ಸಂದರ್ಭದಲ್ಲೇ ಆರೋಪಿಯನ್ನು ಸೆರೆ ಹಿಡಿದ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಕಾರ್ಯಾಚರಣೆಯಲ್ಲಿ ಎಸಿಪಿ ರಂಜಿತ್ ನೇತೃತ್ವದಲ್ಲಿ ಉಳ್ಳಾಲ ಠಾಣಾಧಿಕಾರಿ ಸಂದೀಪ್, ಪಿಎಸ್ ಐ ಗಳಾದ ಶಿವಕುಮಾರ್, ಪ್ರದೀಪ್ ಹಾಗೂ ಕ್ರೈಂ ತಂಡ ಮತ್ತು ಕೊಣಾಜೆ ಠಾಣೆಯ ಪಿಎಸ್ ಐ ಶರಣಪ್ಪ ಭಂಡಾರಿ ನೇತೃತ್ವದ ಕ್ರೈಂ ತಂಡ ಭಾಗವಹಿಸಿತ್ತು.
ಇದನ್ನೂ ಓದಿ: ಕುಂಪಲ ; ಬುಲೆಟ್ ನಲ್ಲಿ ಬಂದ ಯುವಕನಿಂದ ಯುವತಿಯ ಚಿನ್ನದ ಸರಗಳ್ಳತನ !
The Ullal and Konje police have succeeded in arresting a chain snatcher in just three hours of him committing crime at Kumpala. The arrested has been identified as Sulthan (28) from Kannur.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm