ಕ್ಷಯರೋಗಿ ಯುವತಿ ಮೇಲೆ ಐಸಿಯುನಲ್ಲೇ ಅತ್ಯಾಚಾರ ; ಅಮಾನುಷ ಕೃತ್ಯ ಬೆಳಕಿಗೆ

29-10-20 12:19 pm       Headline Karnataka News Network   ಕ್ರೈಂ

ಆಸ್ಪತ್ರೆಗೆ ದಾಖಲಾಗಿದ್ದ 21 ವರ್ಷ ವಯಸ್ಸಿನ ಕ್ಷಯರೋಗಿ ಯುವತಿ ಮೇಲೆ, ಸಿಬ್ಬಂದಿಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಗುರುಗಾಂವ್ ನಲ್ಲಿ ನಡೆದಿದೆ.

ಗುರುಗಾಂವ್, ಅಕ್ಟೋಬರ್ 29 : ಆಸ್ಪತ್ರೆಗೆ ದಾಖಲಾಗಿದ್ದ 21 ವರ್ಷ ವಯಸ್ಸಿನ ಕ್ಷಯರೋಗಿ ಯುವತಿ ಮೇಲೆ, ಸಿಬ್ಬಂದಿಯೇ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ನಡೆದಿದೆ. ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಯುವತಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಆಸ್ಪತ್ರೆಯ ಹೊರಗುತ್ತಿಗೆ ನೌಕರ ಕೃತ್ಯ ಎಸಗಿದ್ದಾನೆ. 

ರೋಗಿಗೆ ಪ್ರಜ್ಞೆ ಬಂದ ಬಳಿಕ ಘಟನೆ ಬಗ್ಗೆ ಕೈಬರಹದ ಪತ್ರದ ಮೂಲಕ ತಂದೆಗೆ ವಿವರಿಸಿದ್ದಾಳೆ. ಬಳಿಕ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಾಗಿದೆ. ಅಕ್ಟೋಬರ್ 21ರಂದು ಯುವತಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿದ್ದು, ಅಕ್ಟೋಬರ್ 27ರಂದು ಯುವತಿಗೆ ಪ್ರಜ್ಞೆ ಬಂದಿತ್ತು. ಸಂತ್ರಸ್ತೆ ಯುವತಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. 

ಉಸಿರಾಟದ ತೊಂದರೆ ಹಿನ್ನೆಲೆಯಲ್ಲಿ ಮಹೇಂದ್ರಗಢದ ಈ ಯುವತಿಯನ್ನು ಗುರ್ ಗಾಂವ್ ನಗರದ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕ್ಷಯರೋಗದಿಂದ ಉಂಟಾಗಿದ್ದ ಕಾರಣ ಆಸ್ಪತ್ರೆಯ ಖಾಸಗಿ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಆರೋಪಿಯ ಹೆಸರು ವಿಕಾಸ್ ಎಂದು ಸಂತ್ರಸ್ತೆ ಹೇಳಿದ್ದು, ಆತ ವೈದ್ಯಕೀಯೇತರ ಹೊರಗುತ್ತಿಗೆ ಸಿಬ್ಬಂದಿಯಾಗಿದ್ದ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ್ದು, ವಾರ್ಡ್‌ ಸಿಬ್ಬಂದಿಯನ್ನು ಪ್ರಶ್ನಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.

A 21-year-old tuberculosis patient has alleged she was sexually assaulted while on ventilator support in the ICUof Fortis Hospital in Gurugram.