ಬ್ರೇಕಿಂಗ್ ನ್ಯೂಸ್
            
                        29-10-20 11:36 am Headline Karnataka News Network ಕ್ರೈಂ
            ಲಕ್ನೋ, ಅಕ್ಟೋಬರ್ 27 : ಅಪಹರಣಕ್ಕೆ ಒಳಗಾದ ಮೂರು ವರ್ಷದ ಬಾಲಕಿಯನ್ನು ರಕ್ಷಿಸಲು ರೈಲೊಂದು ಸುಮಾರು 260 ಕಿ.ಮೀ. ಯಾವುದೇ ನಿಲುಗಡೆ ಇಲ್ಲದೆ ನಿರಂತರವಾಗಿ ಓಡಿಸಿದ ಸಿನಿಮೀಯ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಲಲಿತಪುರದಿಂದ ಮಧ್ಯಪ್ರದೇಶದ ಭೋಪಾಲ್ ವರೆಗೆ ಈ ರೈಲು ಓಡಿದ್ದು ಒಂದೂ ತಡೆಯಿಲ್ಲದೆ ಸಾಗಿದೆ.


ಬಾಲಕಿಯ ಕುಟುಂಬದಿಂದ ದೂರು ಬಂದ ಕೂಡಲೇ ಸಕ್ರಿಯರಾದ ರೈಲ್ವೆ ಪೊಲೀಸ್ ಪಡೆ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಬಾಲಕಿಯನ್ನು ಅಪಹರಿಸಿದ ದುಷ್ಕರ್ಮಿ ರಪ್ತಿಸಾಗರ್ ಎಕ್ಸ್‌ಪ್ರೆಸ್ ರೈಲು ಹತ್ತಿರುವುದು ಗೊತ್ತಾಗಿದೆ. ತಕ್ಷಣ ಎಚ್ಚೆತ್ತುಕೊಂಡ ಆರ್ ಪಿ ಎಫ್ ಪೊಲೀಸರು ರೈಲ್ವೆ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಲಲಿತಪುರದಿಂದ ಹೊರಟ ರಪ್ತಿಸಾಗರ್ ಎಕ್ಸ್‌ಪ್ರೆಸ್ ರೈಲನ್ನು ಯಾವುದೇ ಕಾರಣಕ್ಕೂ ಕೊನೆಯ ನಿಲ್ದಾಣ ತನಕ ನಿಲ್ಲಿಸಬೇಡಿ ಎಂದು ಸೂಚನೆ ನೀಡಿದ್ದಾರೆ.
ಇದಕ್ಕೆ ಸ್ಪಂದಿಸಿದ ರೈಲ್ವೆ ಇಲಾಖೆ ರಪ್ತಿಸಾಗರ್ ಎಕ್ಸ್‌ಪ್ರೆಸ್ ರೈಲು ಸಂಚರಿಸುವ ಮಾರ್ಗವನ್ನು ಕ್ಲಿಯರ್ ಮಾಡಿದ್ದಾರೆ. ಜೊತೆಗೆ ಭೋಪಾಲ್ ಪೊಲೀಸರನ್ನು ಸಂಪರ್ಕಿಸಿ ಅಪಹರಣಕಾರನ ಬಗ್ಗೆ ಮಾಹಿತಿ ನೀಡಿದ್ದಾರೆ. ರೈಲು ಬರುವುದನ್ನೇ ಕಾಯುತ್ತಿದ್ದ ಭೋಪಾಲ್ ಪೊಲೀಸ್ ಸಿಬ್ಬಂದಿ ಆತ ರೈಲಿನಿಂದ ಇಳಿಯುತ್ತಿದ್ದಂತೆಯೇ ಬಂಧಿಸಿದೆ. ಬಾಲಕಿ ಸುರಕ್ಷಿತಳಾಗಿದ್ದು, ಆಕೆಯನ್ನು ಕುಟುಂಬದವರಿಗೆ ಒಪ್ಪಿಸಲಾಗಿದೆ.
            
            
            In a first, a train ran non-stop for around 240 kilometres from Lalitpur railway station in Uttar Pradesh till Bhopal to rescue a 3-year-old girl who had allegedly been abducted.
    
            
             04-11-25 04:38 pm
                        
            
                  
                Bangalore Correspondent    
            
                    
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
    
            
             03-11-25 01:13 pm
                        
            
                  
                HK News Desk    
            
                    
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
    
            
             04-11-25 05:06 pm
                        
            
                  
                Mangalore Correspondent    
            
                    
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
ಹಿಂದುಗಳು, ಬಿಜೆಪಿಗರೆಂದು ತಾರತಮ್ಯಗೈದರೆ ಕ್ಷೇತ್ರದ...
03-11-25 10:47 pm
ಡಿ.27 ರಂದು 9ನೇ ವರ್ಷದ ಮಂಗಳೂರು ಕಂಬಳ ; ಈ ಬಾರಿ ’ನ...
03-11-25 05:20 pm
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
    
            
             04-11-25 02:11 pm
                        
            
                  
                Mangalore Correspondent    
            
                    
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm