ಅರ್ಕುಳ ; ತಾಯಿ, ಇಬ್ಬರು ಮಕ್ಕಳ ಜೊತೆ ನಾಪತ್ತೆ

28-10-20 01:17 pm       Mangalore Correspondent   ಕ್ರೈಂ

ತಾಯಿ, ತನ್ನ ಇಬ್ಬರು ಮಕ್ಕಳ ಜೊತೆ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು, ಅಕ್ಟೋಬರ್ 28 : ತಾಯಿ, ತನ್ನ ಇಬ್ಬರು ಮಕ್ಕಳ ಜೊತೆ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು ತಾಲೂಕಿನ ಅರ್ಕುಳ ಗ್ರಾಮದ ವಳಚ್ಚಿಲ, ನವಜ್ಯೋತಿನಗರ ಎಂಬಲ್ಲಿಯ ನಿವಾಸಿಗಳಾದ ರೇಖಾ ಪಿರೇರಾ (39), ತನ್ನ ಇಬ್ಬರು ಮಕ್ಕಳಾದ ಡೇಲಿಶಾ ಅನ್ನಾ ಪಿರೇರಾ (15), ಡೆಲ್ಸನ್ ರಾಲ್ಪ್ ಪಿರೇರಾ (10) ಜೊತೆಗೆ ಅಕ್ಟೋಬರ್ 21 ರಂದು ಮನೆಯಿಂದ ಹೊರಗೆ ಹೋದವರು ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆ (ತಾಯಿ)ಯ ಚಹರೆ ಇಂತಿದೆ. ಹೆಸರು-ರೇಖಾ ಪಿರೇರಾ,  ಪ್ರಾಯ - 39 ವರ್ಷ, ಎತ್ತರ- 4.6, ಎಣ್ಣೆಗಪ್ಪು ಮೈ ಬಣ್ಣ, ಕೊರಳಲ್ಲಿ ಚಿನ್ನದ ಚೈನ್ ಧರಿಸಿರುತ್ತಾರೆ. ಮಾತನಾಡುವ ಭಾಷೆ - ಕೊಂಕಣಿ, ಕನ್ನಡ, ತುಳು. ಕಾಣೆಯಾದವರ ಬಗ್ಗೆ ಮಾಹಿತಿ ದೊರಕಿದಲ್ಲಿ ಪೊಲೀಸ್ ಉಪನಿರೀಕ್ಷಕರು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 0824-2220535, 0824-2220814, 0824-2220801, 22212108 ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Mother and Two children who are residents of Arkula, Valachil are missing. A missing case has been registered at Kankandy Rural Police Station.