ಬ್ರೇಕಿಂಗ್ ನ್ಯೂಸ್
26-10-20 07:34 pm Mangalore Reporter ಕ್ರೈಂ
ಮಂಗಳೂರು, ಅಕ್ಟೋಬರ್ 26: ತುಳು ಚಿತ್ರನಟ, ಫೈನಾನ್ಸ್ ಮಾಡಿಕೊಂಡಿದ್ದ ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ತಿರುವು ಸಿಕ್ಕಿದೆ. ಕೊಲೆಯಾದ ದಿವಸ ಆತ ಉಳಿದುಕೊಂಡಿದ್ದ ಭಂಡಾರಿಬೆಟ್ಟಿನ ಫ್ಲ್ಯಾಟ್ ನಲ್ಲಿ ಒಂದು ಕೋಟಿ ರೂಪಾಯಿ ನಗದು ಇತ್ತು. ಅಲ್ಲದೆ, ಸುರೇಂದ್ರನ ಮೈಯಲ್ಲಿ ಒಂದು ಕೇಜಿಯಷ್ಟು ಬಂಗಾರ ಇತ್ತು. ಕೊಲೆಯ ಬಳಿಕ ಹಣ ಮತ್ತು ಬಂಗಾರ ನಾಪತ್ತೆಯಾಗಿದ್ದು ಕೊಲೆ ಆರೋಪಿಗಳೇ ಕದ್ದಿರಬೇಕೆಂದು ಶಂಕಿಸಿ ಸುರೇಂದ್ರ ಬಂಟ್ವಾಳ್ ತಾಯಿ ರಾಧಾ ಮತ್ತು ತಮ್ಮ ಚಂದ್ರಹಾಸ್ ಎಸ್ಪಿಗೆ ದೂರು ನೀಡಿದ್ದಾರೆ.
ಬಂಟ್ವಾಳ ಪೊಲೀಸರು ಎಫ್ಐಆರ್ ನಲ್ಲಿ ನಗದು ಮತ್ತು ಬಂಗಾರ ನಾಪತ್ತೆಯಾಗಿರುವ ವಿಚಾರವನ್ನು ಸೇರಿಸಿಲ್ಲ. ಈ ಬಗ್ಗೆ ಪೊಲೀಸರಿಗೆ ನಾವು ಮನವಿ ಮಾಡಿದ್ದರೂ, ಎಫ್ಐಆರ್ ನಲ್ಲಿ ಸೇರಿಸಿಕೊಂಡಿಲ್ಲ. ಇದರ ಬಗ್ಗೆ ಎಸ್ಪಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾಗಿ ಸುರೇಂದ್ರನ ತಾಯಿ ರಾಧಾ ತಿಳಿಸಿದ್ದಾರೆ.
ಅಲ್ಲದೆ, ಸತೀಶ್ ಕುಲಾಲ್ ಒಬ್ಬನೇ ಈ ಕೃತ್ಯ ಮಾಡಿಲ್ಲ. ಇದರ ಹಿಂದೆ ಪ್ರಭಾವಿಗಳು ಬಹಳಷ್ಟು ಮಂದಿ ಇದ್ದಾರೆ. ಕೊಲೆಯ ಬಳಿಕ ಚಿನ್ನ ಮತ್ತು ನಗದನ್ನು ಕದ್ದುಕೊಂಡು ಹೋಗಿದ್ದಾರೆ. ಫ್ಲ್ಯಾಟಿನಲ್ಲಿ ಒಂದು ಕೋಟಿ ನಗದು ಇದ್ದ ಬಗ್ಗೆ ಕೊಲೆಯಾಗುವ ಮೂರು ದಿನ ಮೊದಲು ನನ್ನಲ್ಲಿ ಹೇಳಿಕೊಂಡಿದ್ದ. ಹಣ ಮತ್ತು ಚಿನ್ನಕ್ಕಾಗಿ ಈ ಕೊಲೆ ನಡೆದಿದ್ದಾಗಿ ಅನಿಸುತ್ತಿದೆ ಎಂದು ರಾಧಾ ಹೇಳಿದ್ದಾರೆ.

ಈ ಬಗ್ಗೆ ದ.ಕ. ಎಸ್ಪಿ ಲಕ್ಷ್ಮೀಪ್ರಸಾದ್ ಅವರನ್ನು ಸಂಪರ್ಕಿಸಿದಾಗ, ಹಣ ಮತ್ತು ಬಂಗಾರದ ಬಗ್ಗೆ ಆರಂಭದಲ್ಲಿ ದೂರು ನೀಡುವಾಗ ಹೇಳಿರಲಿಲ್ಲ. ಹಾಗಾಗಿ ಎಫ್ಐಆರ್ ನಲ್ಲಿ ಸೇರಿಸಿಕೊಂಡಿರಲಿಲ್ಲ. ಈಗ ಪ್ರಕರಣದ ತನಿಖೆ ಮುಂದುವರಿದಿದ್ದು, ಅಗತ್ಯ ಬಿದ್ದಲ್ಲಿ ಸೇರಿಸಿಕೊಳ್ಳುತ್ತೇವೆ. ಸದ್ಯದಲ್ಲೇ ಪ್ರಕರಣದ ವಿವರವನ್ನು ನೀಡಲಿದ್ದೇವೆ ಎಂದು ಹೇಳಿದ್ದಾರೆ.
ಬಂಟ್ವಾಳ ಪೊಲೀಸರಿಂದ ಸಿಕ್ಕ ಮಾಹಿತಿ ಪ್ರಕಾರ, ಹಣ, ಬಂಗಾರ ಏನೆಲ್ಲಾ ಸಿಕ್ಕಿತ್ತು, ಎಲ್ಲವನ್ನೂ ಕೋರ್ಟಿಗೆ ಒಪ್ಪಿಸಲಿದ್ದೇವೆ. ಅದರಲ್ಲಿ ಎಷ್ಟಿತ್ತು. ಎಷ್ಟು ಬಂಗಾರ ಇತ್ತು ಎನ್ನೋದು ನಮಗೆ ಗೊತ್ತಿಲ್ಲ. ಆರೋಪಿಗಳನ್ನು ವಿಚಾರಣೆ ಮಾಡುತ್ತಿದ್ದೇವೆ. ಹಲವು ವಿಚಾರಗಳು ಹೊರಬಂದಿವೆ. ಐದಾರು ತಂಡಗಳು ಸೇರಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಕೊಲೆಗೆ ಯಾರು ಬೆಂಬಲ ಕೊಟ್ಟಿದ್ದರು. ಯಾರಾದ್ರೂ ಸುಪಾರಿ ಕೊಟ್ಟಿದ್ದರೇ ಇವೆಲ್ಲ ವಿಚಾರದ ಬಗ್ಗೆ ಆರೋಪಿಗಳ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.
Radha, mother of Surendra Bantea and brother Chandrahas have alleged that Surendra had one crore rupees cash in the Bhandaribettu flat and he had about a kilogram of gold ornaments on his body which are missing and that he was eliminated with an eye on these things.
10-05-26 01:04 pm
HK News Staffer
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
12ನೇ ಶತಮಾನದ ಕಾಕತೀಯರ ಕಾಲದ ಪ್ರಾಚೀನ ಶಿವ ದೇಗುಲ ಧ್...
08-05-26 08:05 pm
ಕಲಬುರಗಿ ಪೊಲೀಸರ ‘ಆಪರೇಷನ್ ಭರವಸೆ’ ಸಕ್ಸಸ್; 2 ತಿಂಗ...
08-05-26 12:21 pm
IPS Ramachandra Rao: ಸರ್ಕಾರಿ ಕಚೇರಿಯಲ್ಲೇ ತುಂಟಾ...
07-05-26 03:10 pm
10-05-26 12:26 pm
HK News Staffer
ತಮಿಳುನಾಡನ್ನು ದೇವರೇ ಕಾಪಾಡಬೇಕು ; ಟಿವಿಕೆ ಗ್ಯಾರಂಟ...
09-05-26 12:06 pm
ಭಾರತದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ; ಶತ್ರುರಾಷ್ಟ...
09-05-26 11:14 am
ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆ...
08-05-26 06:45 pm
ದ್ರಾವಿಡರ ನಾಡಲ್ಲಿ ದಳಪತಿ ವಿಜಯ್ ಸರ್ಕಾರ್ ! ಮ್ಯಾಜಿ...
08-05-26 06:38 pm
09-05-26 11:51 pm
Mangalore Correspondent
ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ...
09-05-26 02:15 pm
ಮನೆ ಕಳ್ಳತನ ತಡೆಗೆ ಉಡುಪಿ ಪೊಲೀಸರ ಹೊಸ ಹೆಜ್ಜೆ ; “ಲ...
09-05-26 02:13 pm
Kuthar, Mangalore, UT Khader: ಕುತ್ತಾರಿನಲ್ಲಿ ಕ...
08-05-26 10:33 pm
ಸುತ್ತಿ ಬಳಸಿ ಓಡಾಟಕ್ಕೆ ಬೀಳಲಿದೆ ಬ್ರೇಕ್ ; ಮಂಗಳೂರು...
08-05-26 09:05 pm
09-05-26 10:29 pm
HK News Desk
ಉಪ್ಪಿನಂಗಡಿಯಲ್ಲಿ ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕ...
09-05-26 09:50 pm
ಸಾಲ ಕೊಟ್ಟ ಮಹಿಳೆಯ ಜೀವ ತೆಗೆದ ಕಟುಕರು; ಅಪಘಾತದ ನಾಟ...
09-05-26 08:29 pm
ಆರೋಪಿಯಿಂದಲೇ ಲಂಚ ; ಒಂದು ಲಕ್ಷ ಪಡೆಯುತ್ತಿದ್ದಾಗ ಗು...
09-05-26 06:42 pm
ಸ್ನಾನಕ್ಕೆ ತೆರಳಿದ್ದ ಸ್ನೇಹಿತೆಯರು ನದಿಯಲ್ಲಿ ಮುಳುಗ...
09-05-26 09:54 am