ಬ್ರೇಕಿಂಗ್ ನ್ಯೂಸ್
24-10-20 12:31 pm Mangalore Correspondent ಕ್ರೈಂ
ಮಂಗಳೂರು, ಅಕ್ಟೋಬರ್ 24: ಅತ್ತ ಮಹಾನಗರ ಪಾಲಿಕೆ ಹೊರ ರಾಜ್ಯದ, ಹೊರ ಜಿಲ್ಲೆಗಳ ಬೀಫ್ ಮಾಂಸ ತಂದು ಮಾರುವಂತಿಲ್ಲ ಎಂದು ಸೂಚನೆ ಕೊಟ್ಟಿರುವಾಗಲೇ ಕುದ್ರೋಳಿ ಕಸಾಯಿಖಾನೆಯಲ್ಲಿ ಹೊರಗಿನಿಂದ ತರುತ್ತಿದ್ದ ದನದ ಮಾಂಸ ಪತ್ತೆಯಾಗಿದೆ.
ಟಾಟಾ ಏಸ್ ವಾಹನದಲ್ಲಿ ಎರಡು ಕ್ವಿಂಟಾಲ್ ನಷ್ಟು ದನದ ಮಾಂಸವನ್ನು ತರಲಾಗಿದೆ. ವಾಹನದಲ್ಲಿ ಮಾಂಸ ತರುತ್ತಿದ್ದ ಮಾಹಿತಿ ತಿಳಿದ ಬಜರಂಗದಳ ಕಾರ್ಯಕರ್ತರು ಬೆನ್ನಟ್ಟಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ, ಟಾಟಾ ಏಸ್ ವಾಹನ ತಪ್ಪಿಸಿಕೊಂಡು ಬಂದು ಕುದ್ರೋಳಿ ಕಸಾಯಿಖಾನೆಗೆ ನುಗ್ಗಿದೆ.
ಈ ಬಗ್ಗೆ ಬಜರಂಗದಳ ಕಾರ್ಯಕರ್ತರು, ಬಂದರು ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಕಸಾಯಿಖಾನೆಯಲ್ಲಿ ಪರಿಶೀಲಿಸಿದಾಗ, ಟಾಟಾ ಏಸ್ ವಾಹನದಲ್ಲಿ ಮಾಂಸ ಪತ್ತೆಯಾಗಿದ್ದು ಮಾಂಸ ಸಹಿತ ವಾಹನವನ್ನು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ. ಅದರಲ್ಲಿದ್ದ ಚಾಲಕ ಪರಾರಿಯಾಗಿದ್ದಾನೆ.
ಮಹಾನಗರ ಪಾಲಿಕೆಯಿಂದ ಅಕ್ರಮ ಗೋಹತ್ಯೆ ತಡೆಯುವ ಸಲುವಾಗಿ ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 20 ಬೀಫ್ ಸ್ಟಾಲ್ ಗಳಿದ್ದು ಎಲ್ಲದಕ್ಕೂ ಮಂಗಳೂರಿನ ಅಧಿಕೃತ ಕುದ್ರೋಳಿ ಕಸಾಯಿಖಾನೆಯಿಂದಲೇ ಮಾಂಸ ಪಡೆಯಬೇಕು. ಹೊರ ಜಿಲ್ಲೆಗಳಿಂದ ಮಾಂಸ ತಂದು ಮಾಡುವಂತಿಲ್ಲ. ಜೊತೆಗೆ ಕಸಾಯಿಖಾನೆಯಿಂದ ಮಾಂಸ ಪಡೆದಿದ್ದಕ್ಕೆ ಸೂಕ್ತ ರಶೀದಿ, ದಾಖಲಾತಿ ಇಟ್ಟುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಪಾಲಿಕೆಯ ಈ ಕ್ರಮದಿಂದಾಗಿ ಒಂದು ಹಂತಕ್ಕೆ ಅಕ್ರಮ ಗೋಸಾಗಾಟ ಮತ್ತು ಗೋಮಾಂಸ ಸಾಗಾಟಕ್ಕೆ ಬ್ರೇಕ್ ಬೀಳಬಹುದೆಂಬ ನಿರೀಕ್ಷೆಯಿದೆ.
A tempo van that was illegally transporting about 2 quintals of beef meat was held by Bunder police at Kudroli after Bajarang Dal Activities informed the cops here on Saturday 24 October 2020.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm