ಬ್ರೇಕಿಂಗ್ ನ್ಯೂಸ್
23-10-20 03:26 pm Bangalore Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 23: ಹಣ ಡಬಲ್ ಮಾಡಿಕೊಡುತ್ತೇವೆಂದು ಹೇಳಿ ವಂಚಿಸತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧಿಸಿ ಹೈದರಾಬಾದ್ ಮೂಲದ ಹತ್ತು ಜನರನ್ನು ಚಿತ್ರದುರ್ಗದಲ್ಲಿ ಬಂಧಿಸಲಾಗಿದೆ.
ವಿಜಯಕುಮಾರ್ (45), ಎಸ್.ಮಧುಸೂದನ್(42), ಪುಲ್ಲಪ್ಪ (43), ಎಂ.ಕಿರಣ್ (44), ಜಿ.ಪದ್ಮ (45), ಸೂರ್ಯಭಾಸ್ಕರ್ (45), ಸುಧಾಕರ್ (38), P. ಮುಧು (35), ಶಿವರಾತ್ರಿ ವೆಂಕಣ್ಣ (40), ಪ್ರಕಾಶ್ ಬಾಬು (60) ಬಂಧಿತ ಆರೋಪಿಗಳಾಗಿದ್ದು ಎರಡು ಲಾಡ್ಜ್ ಗಳಲ್ಲಿ ಇದ್ದುಕೊಂಡು ಅಮಾಯಕರನ್ನು ಮರುಳು ಮಾಡಿ ಹಣ ದೋಚುತ್ತಿದ್ದರು.

500 ರೂಪಾಯಿಗೆ 1000 ರೂ. ಕೊಡುತ್ತೇವೆ ಎಂದು ನಂಬಿಸುತ್ತಿದ್ದ ತಂಡ, ನೋಟಿನ ಆಕಾರದ ಕಪ್ಪು ಬಣ್ಣದ ಪೇಪರ್ ಮೇಲೆ 500, 2000 ಮೌಲ್ಯದ ನೋಟು ಇಟ್ಟು ನಕಲಿ ಪ್ರಿಂಟ್ ಹೊಡೆಯುತ್ತಿದ್ದರು. ಅದೇ ಮಾದರಿಯ ನಕಲಿ ನೋಟುಗಳನ್ನು ಜನರಿಗೆ ನೀಡುತ್ತಿದ್ದರು. ಖದೀಮರು ಕಪ್ಪು ಹಣ ಡಬ್ಲಿಂಗ್ ಮಾಡಿಕೊಡಲು 15% ಕಮಿಷನ್ ಕೂಡ ಪಡೆಯುತ್ತಿದ್ದರು ಎಂದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
2000 ರೂ. ಮೌಲ್ಯದ ಪಿಂಕ್ ನೋಟು ಕೊಡುವುದಾಗಿಯೂ ಜನರನ್ನು ನಂಬಿಸುತ್ತಿದ್ದರು. ಒಂದು ನೋಟಿಗೆ ಎರಡು ನೋಟ್ ಪಡೆಯುವ ಆಮಿಷಕ್ಕೆ ಬಲಿಯಾದ ಅದೆಷ್ಟೋ ಮಂದಿ ಈ ಜಾಲದಲ್ಲಿ ಹಣ ಹೂಡಿಕೆ ಮಾಡಿದ್ದರು. ಇದಕ್ಕಾಗಿ ಪಿಂಕ್ ಮತ್ತು ಗ್ರೀನ್ ಎಂಬ ಕೋಡ್ ವರ್ಡ್ ಇಟ್ಟುಕೊಂಡು ಮನಿ ಡಬ್ಲಿಂಗ್ ಜಾಲ ಮಾಡಲಾಗುತ್ತಿತ್ತು.

ಖಚಿತ ಮಾಹಿತಿ ಆಧರಿಸಿ, ಚಿತ್ರದುರ್ಗ ಎಸ್ಪಿ ಜಿ. ರಾಧಿಕಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಸ್ಥಳೀಯ ಮಹಿಳೆಯರು, ವೃದ್ಧರನ್ನೂ ತೊಡಗಿಸಿಕೊಂಡು ಹೈದರಾಬಾದ್ ಮೂಲದ ತಂಡ ಈ ಜಾಲ ನಿರ್ವಹಣೆ ಮಾಡುತ್ತಿತ್ತು.
Ten persons have been arrested in Money Doubling case by Bangalore City police. It is said this gang were cheating the innocents in the name of money doubling.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 07:46 pm
HK News Staffer
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm