ಬ್ರೇಕಿಂಗ್ ನ್ಯೂಸ್
09-12-22 10:17 pm Bangalore Correspondent ಕ್ರೈಂ
ಬೆಂಗಳೂರು, ಡಿ.9 : ಸಿಗರೇಟ್ ಹಣ ಕೇಳಿದ್ದಕ್ಕೆ ಪುಡಿ ರೌಡಿಗಳ ಗುಂಪು ಬೇಕರಿಯೊಂದರಲ್ಲಿ ದಾಂಧಲೆ ನಡೆಸಿದ್ದು ಅಲ್ಲಿನ ಸಿಬಂದಿಗೆ ಯತ್ವಾತದ್ವಾ ಹಲ್ಲೆ ನಡೆಸಿದ್ದಾರೆ. ಬೆಂಗಳೂರಿನ ಕುಂದಲಹಳ್ಳಿ ಗೇಟ್ ಬಳಿಯ ಬ್ರಹ್ಮಲಿಂಗೇಶ್ವರ ಬೇಕರಿಯಲ್ಲಿ ಡಿ.8ರ ರಾತ್ರಿ ಘಟನೆ ನಡೆದಿದ್ದು ಎಚ್ ಎಎಲ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇಬ್ಬರು ಯುವಕರು ಬೇಕರಿಯಲ್ಲಿ ಮೂರು ಸಿಗರೇಟ್ ಪಡೆದಿದ್ದರು. ಸಿಬಂದಿ ಸಿಗರೇಟ್ ಕೊಟ್ಟು ಹಣ ಕೇಳಿದ್ದಾರೆ. ಹಣ ಕೇಳಿದ್ದಕ್ಕೆ ಬೇಕರಿ ಹುಡುಗರಿಗೆ ಮತ್ತೊಂದಷ್ಟು ಯುವಕರು ಸ್ಥಳಕ್ಕೆ ಬಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಮನಸೋ ಇಚ್ಚೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಹಲ್ಲೆಗೆ ಒಳಗಾದವರು ಉಡುಪಿ ಜಿಲ್ಲೆಯ ಬೈಂದೂರು ಮೂಲದ ಹುಡುಗರು ಎನ್ನಲಾಗಿದೆ.
ಪುಡಿ ರೌಡಿಗಳ ಪುಂಡಾಟ ತಿಳಿಯುತ್ತಿದ್ದಂತೆ ದಕ್ಷಿಣ ಕನ್ನಡ, ಉಡುಪಿ ಮೂಲದ ವ್ಯಾಪಾರಿಗಳು, ಉದ್ಯಮಿಗಳು ಎಚ್ ಎ ಎಲ್ ಠಾಣೆ ಮುಂದೆ ಜಮಾಯಿಸಿದ್ದಾರೆ. 50ಕ್ಕೂ ಹೆಚ್ಚು ಜನರು ಠಾಣೆ ಎದುರು ಪ್ರತಿಭಟನೆಗೆ ಮುಂದಾಗಿದ್ದರು. ಠಾಣೆ ಬಳಿ ಆಗಮಿಸಿದ ಕರವೇ ಅಧ್ಯಕ್ಷ ಪ್ರವೀಣ್ ಶೆಟ್ಟಿ ಪೊಲೀಸರ ಜೊತೆ ಚರ್ಚೆ ನಡೆಸಿದ್ದಾರೆ. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆಗೊಳಗಾದ ನವೀನ್, ಪ್ರಜ್ವಲ್, ನಿತಿನ್ ಹೆಚ್ ಎ ಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಯುವಕರು, ಸಿಗರೇಟ್ ಕೇಳಿ, ಧಣಿ ಎಲ್ಲಿ ಅಂತ ಕೇಳಿದ್ದಾರೆ. ಹೊರಗಡೆ ಹೋಗಿದ್ದಾಗಿ ತಿಳಿಸಿದ್ದೆವು. ಮೂರು ಸಿಗರೇಟ್ ಪಡೆದಿದ್ದಕ್ಕೆ ಹಣ ಕೇಳಿದ್ದೆವು. ಸ್ವಲ್ಪ ಹೊತ್ತಿನ ಬಳಿಕ ಬೇರೆ ಒಂದಷ್ಟು ಮಂದಿಯನ್ನು ಕರೆದು ಹಲ್ಲೆ ನಡೆಸಿದ್ದಾರೆ. ಯಾರೆಂದು ಪರಿಚಯ ಇಲ್ಲ. ಅವರನ್ನು ಮೊದಲ ಬಾರಿ ನೋಡಿದ್ದು ಎಂದು ತಿಳಿಸಿದ್ದಾರೆ.
ದಾಂಧಲೆ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸರಿಗೆ ಸೂಚಿಸಿದ್ದಾರೆ. ಘಟನೆ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದ್ದಾರೆ.
Goons brutally thrash Bakery employees of #Udupi, #Byndoor for asking for cigarette money near #Kundalahalligate in #Bangalore #BreakingNews pic.twitter.com/oLBWIvH7Bx
— Headline Karnataka (@hknewsonline) December 9, 2022
Bangalore Goons attack Udupi Byndoor youths after asking for cigarette money near Kundalahalli gate. The video of this has gone viral on social media.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am