ಬ್ರೇಕಿಂಗ್ ನ್ಯೂಸ್
15-10-20 09:47 am Headline Karnataka News Network ಕ್ರೈಂ
ಹರಿಯಾಣ,ಅಕ್ಟೋಬರ್. 15 : 35 ವರ್ಷದ ಮಹಿಳೆಯೊಬ್ಬರನ್ನ ಆಕೆಯ ಪತಿ ಕಳೆದ ಸುಮಾರು ಒಂದೂವರೆ ವರ್ಷದಿಂದ ಟಾಯ್ಲೆಟ್ನಲ್ಲಿ ಬಂಧಿಸಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್ ಜಿಲ್ಲೆಯ ರಿಶ್ಪುರ್ನಲ್ಲಿ ಈ ಘಟನೆ ನಡೆದಿದೆ.
ಮೂರು ಮಕ್ಕಳ ತಾಯಿಯಾದ ಮಹಿಳೆ ಗಬ್ಬುನಾರುವ ಟಾಯ್ಲೆಟ್ನಲ್ಲಿ ಶಕ್ತಿಹೀನರಾಗಿದ್ದ ಬಿದ್ದಿದ್ದರು. ಮಹಿಳೆಯನ್ನ ಬಂಧನದಲ್ಲಿಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಜನಿ ಗುಪ್ತಾ, ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಆಕೆಯನ್ನ ನಿನ್ನೆ ರಕ್ಷಣೆ ಮಾಡಿದ್ದಾರೆ. ಮೊದಲಿಗೆ ಮಹಿಳೆಯನ್ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಸೋದರ ಸಂಬಂಧಿಯ ಮನೆಗೆ ಕಳಿಸಲಾಗಿದೆ.

ಮಹಿಳೆ ದಯಾನೀಯ ಸ್ಥಿತಿಯಲ್ಲಿದ್ದರು, ಆಕೆಯನ್ನ ಕಳೆದ ಒಂದೂವರೆ ವರ್ಷದಿಂದ ಈ ಚಿಕ್ಕ ಟಾಯ್ಲೆಟ್ನಲ್ಲೇ ಇರಿಸಲಾಗಿತ್ತು ಅಂತ ತನಿಖೆಯಿಂದ ತಿಳಿದುಬಂದಿದೆ. ಆಕೆ ಶಕ್ತಿಹೀನರಾಗಿದ್ರು. ನಡೆಯುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ. ನಾವು ಊಟ ಕೊಟ್ಟಾಗ ಒಮ್ಮೆಲೆ 8 ಚಪಾತಿ ತಿಂದರು. ಬಂಧನದಲ್ಲಿದ್ದಾಗ ಮಹಿಳೆಗೆ ಸರಿಯಾಗಿ ಊಟ-ನೀರು ಕೂಡ ಕೊಟ್ಟಿಲ್ಲ ಎಂದು ರಜನಿ ಗುಪ್ತಾ ಹೇಳಿದ್ದಾರೆ.
ಮಹಿಳೆಗೆ 17 ವರ್ಷಗಳ ಹಿಂದೆ ನರೇಶ್ ಕುಮಾರ್ ಎಂಬಾತನ ಜೊತೆ ವಿವಾಹವಾಗಿದ್ದು, ದಂಪತಿಗೆ 15 ವರ್ಷದ ಪುತ್ರಿ ಹಾಗೂ 13 ಮತ್ತು 11 ವರ್ಷದ ಇಬ್ಬರು ಪುತ್ರರಿದ್ದಾರೆ. ನರೇಶ್ ತನ್ನ ಪತ್ನಿಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾನೆ. ಆದ್ರೆ ಮಹಿಳೆ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ರು, ಎಲ್ಲಾ ಕುಟುಂಬ ಸದಸ್ಯರನ್ನ ಗುರುತಿಸಿದ್ರು. ಮಹಿಳೆಗೆ ಮಾನಸಿಕ ಕಾಯಿಲೆಯ ಚಿಕಿತ್ಸೆ ಕೊಡಿಸಿರುವ ಯಾವುದೇ ದಾಖಲೆ ಒದಗಿಸುವಲ್ಲಿ ಪತಿ ವಿಫಲನಾಗಿದ್ದಾನೆ ಎಂದು ಗಪ್ತಾ ಹೇಳಿದ್ದಾರೆ.
ಈ ಸಂಬಂಧ ಐಪಿಸಿ ಸೆಕ್ಷನ್ 498ಎ ಹಾಗೂ 342 ಅಡಿ ಪ್ರಕರಣ ದಾಖಲಿಸಿ ಪತಿ ನರೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
A woman who was allegedly locked inside a toilet for over a year by her husband was rescued by Women Protection&Child Marriage Prohibition Officer in Panipat.
16-06-26 12:26 pm
HK News Staffer
ಧರ್ಮಸ್ಥಳದ ಬುರುಡೆ ಕೇಸಿಗೆ ಬಿಗ್ ಟ್ವಿಸ್ಟ್ ; ಎಸ್ಐಟ...
12-06-26 12:02 pm
ಪದತ್ಯಾಗದ ತರಾತುರಿಯಲ್ಲೇ ಸಿದ್ದರಾಮಯ್ಯ ಕುರುಬ ಸಮುದಾ...
11-06-26 08:31 pm
ಹಳಸಿತೇ ಜಮೀರ್ - ಸಿದ್ದು ಸ್ನೇಹ ಸಂಬಂಧ? ನಿಮ್ಮ ಆಪ್ತ...
11-06-26 07:36 pm
ಮಗು ಕರುಣಿಸಿದ ಪ್ರಕರಣ; ಕೊನೆಗೂ ರಾಜಿ ಸಂಧಾನಕ್ಕಿಳಿದ...
11-06-26 01:53 pm
15-06-26 11:18 am
HK News Staffer
ಬಿರಿಯಾನಿ ಹೆಸರಲ್ಲಿ ಮಹಿಳೆಯ ಮಾನ ಕಳೆದ ಟೆಕ್ಕಿ! ತಮಾ...
14-06-26 09:46 pm
ಸಹಕಾರಿ ಬ್ಯಾಂಕುಗಳಲ್ಲಿ ಸರ್ವಾಧಿಕಾರಕ್ಕೆ ಬ್ರೇಕ್ !...
14-06-26 07:17 pm
ಅಸ್ಸಾಂನಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಆಧಾರ್ ಕಾರ್ಡ...
14-06-26 04:49 pm
ಕೇರಳದಲ್ಲಿ ಜೂನ್ 15ರಿಂದ 'ಪ್ರಿಯದರ್ಶಿನಿ' ಉಚಿತ ಬಸ್...
14-06-26 01:08 pm
16-06-26 11:35 am
HK News Staffer
ಧರ್ಮಸ್ಥಳ ಬುರುಡೆ ಪ್ರಕರಣ ; ಗಿರೀಶ್ ಮಟ್ಟಣ್ಣನವರ್,...
15-06-26 04:52 pm
ಅಂಬಾನಿ ಕುಟುಂಬದ ಗುರೂಜಿ ಜೊತೆ ಕೊಲ್ಲೂರು ಮೂಕಾಂಬಿಕೆ...
14-06-26 09:47 pm
ದ.ಕ. ಜಿಲ್ಲೆಯ 14 ಪ್ರಮುಖ ರಸ್ತೆ ಅಭಿವೃದ್ದಿ ಕಾಮಗಾರ...
14-06-26 02:37 pm
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್:...
13-06-26 05:28 pm
16-06-26 08:32 pm
HK News Staffer
SIT Car Accident: ಎಸ್ಐಟಿ ಎಸ್ಪಿ ಸೈಮನ್ ಪ್ರಯಾಣಿಸ...
16-06-26 05:10 pm
Chandrashekhar, Belthangady: ಬೆಳ್ತಂಗಡಿ ಸರ್ಕಾರ...
16-06-26 02:34 pm
ಉಳ್ಳಾಲ ; ಸ್ನಾನಕ್ಕೆಂದು ಕೋಣೆಗೆ ತೆರಳಿದ್ದ ಪಿಯುಸಿ...
16-06-26 10:33 am
ಮಕ್ಕಳ ಕಣ್ಣೆದುರೇ ತಾಯಿಯ ಬರ್ಬರ ಹತ್ಯೆ! ಬೆಟ್ಟಿಂಗ್...
15-06-26 09:21 pm