ಬ್ರೇಕಿಂಗ್ ನ್ಯೂಸ್
13-10-20 01:37 pm Mangalore Correspondent ಕ್ರೈಂ
ಮಂಗಳೂರು, ಅಕ್ಟೋಬರ್ 13: ಹಾಲಿನ ಟೆಂಪೋದಲ್ಲಿ ಗೋಮಾಂಸ ಸಾಗಿಸುತ್ತಿದ್ದ ಪ್ರಕರಣದಲ್ಲಿ ಪೊಲೀಸರು ಮಹಜರು ಪೂರ್ತಿಗೊಳಿಸಿದ್ದು ಟೆಂಪೋದಲ್ಲಿ ಒಂದು ಸಾವಿರ ಕೇಜಿಗೂ ಹೆಚ್ಚು ಗೋಮಾಂಸ ಇತ್ತೆಂದು ಪೊಲೀಸರು ಖಚಿತಪಡಿಸಿದ್ದಾರೆ. ಅಲ್ಲದೆ, ಹಾಸನದಿಂದ ಮಾಂಸವನ್ನು ತರಲಾಗುತ್ತಿತ್ತು ಎಂದು ಆರೋಪಿ ಬಾಯಿ ಬಿಟ್ಟಿದ್ದಾಗಿ ಮಾಹಿತಿ ನೀಡಿದ್ದಾರೆ.
ಹಾಲಿನ ಟೆಂಪೋದಲ್ಲಿ ಗೋಮಾಂಸ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದರು. ಬಿ.ಸಿ.ರೋಡ್ ಕಡೆಯಿಂದ ಬರುತ್ತಿದ್ದ ಹಾಲಿನ ವಾಹನವನ್ನು ಪಂಪ್ವೆಲ್ ಸರ್ಕಲ್ ಬಳಿ ನಿಲ್ಲಿಸಲು ಯತ್ನಿಸಿದ್ದು ನುಗ್ಗಿ ಬಂದ ವಾಹನವನ್ನು ಕಾರ್ಯಕರ್ತರು ಹಂಪನಕಟ್ಟೆಯಲ್ಲಿ ತಡೆದಿದ್ದರು. ಘಟನೆಯಲ್ಲಿ ಇಬ್ಬರು ಪರಾರಿಯಾಗಿದ್ದರು. ಒಬ್ಬ ಸಿಕ್ಕಿಬಿದ್ದಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು.


ಪರಿಶೀಲನೆ ವೇಳೆ ಟೆಂಪೋ ಒಳಭಾಗದಲ್ಲಿ ಗೋಣಿ ಚೀಲದಲ್ಲಿ ಅಡಗಿಸಿಟ್ಟ ಗೋವುಗಳ ಮಾಂಸ ಪತ್ತೆಯಾಗಿತ್ತು. ಇದೀಗ ಮಹಜರು ವೇಳೆ ಒಂದು ಸಾವಿರ ಕೆಜಿಗೂ ಹೆಚ್ಚು ಮಾಂಸ ಇರುವುದು ಬೆಳಕಿಗೆ ಬಂದಿದೆ.
ಅಕ್ರಮ ಗೋಸಾಗಾಟ ವಿಚಾರದಲ್ಲಿ ಪೊಲೀಸರು ನಿಗಾ ಇಟ್ಟಿರುವ ಹಿನ್ನೆಲೆಯಲ್ಲಿ ಖದೀಮರು ಹಾಲಿನ ಟೆಂಪೋವನ್ನು ಸಾಗಾಟಕ್ಕೆ ಬಳಸಿದ್ದರು. ಹಾಸನದಿಂದ ಆರೋಕ್ಯಾ ಹಾಲನ್ನು ಮಂಗಳೂರಿಗೆ ತರುವ ನೆಪದಲ್ಲಿ ಪೊಲೀಸರನ್ನು ಯಾಮಾರಿಸಲು ತಂತ್ರ ಹೂಡಿದ್ದರು. ಆದರೆ, ಈ ಬಗ್ಗೆ ಸುಳಿವು ಪಡೆದ ಬಜರಂಗದಳ ಕಾರ್ಯಕರ್ತರು ಖದೀಮರ ಜಾಲವನ್ನು ಭೇದಿಸಿದ್ದಾರೆ. ಈ ಹಿಂದೆಯೂ ಇದೇ ರೀತಿ ಹಾಲಿನ ವಾಹನದಲ್ಲಿ ಗೋಮಾಂಸ ಸಾಗಾಟ ಆಗುತ್ತಿತ್ತೇ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
The Mangalore police have found one thousand kilos of beef meat packed inside the milk van were Bajarang Dal activists have chased the van and caught it hold at Venlock Hospital, Mangalore here on 13 Oct, Tuesday, 2020
23-03-26 12:48 pm
HK News Staffer
ಇನ್ನೆರಡು ದಿನಗಳಲ್ಲಿ ಕಮರ್ಷಿಯಲ್ ಗ್ಯಾಸ್ ಪೂರೈಕೆ ಶೇ...
22-03-26 11:44 am
ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು...
21-03-26 08:29 pm
ಡಿಜಿಪಿ ರಾಮಚಂದ್ರ ರಾವ್ ಅಶ್ಲೀಲ ವಿಡಿಯೋ ಪ್ರಕರಣ ; ಎ...
21-03-26 08:25 pm
Kudremukh Fire: ಕುದುರೆಮುಖ ರಕ್ಷಿತಾರಣ್ಯದಲ್ಲಿ 25...
21-03-26 06:57 pm
23-03-26 09:46 pm
HK News Staffer
ಯುದ್ಧ ಪೀಡಿತ ಇರಾನ್ಗೆ ಕಾಶ್ಮೀರದಲ್ಲಿ ದೇಣಿಗೆ ಸಂಗ್...
23-03-26 11:33 am
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬ...
22-03-26 08:37 pm
ಮುಯ್ಯಿಗೆ ಮುಯ್ಯಿ ; ಇಸ್ರೇಲ್ ಅಣು ಸ್ಥಾವರಕ್ಕೆ ಇರಾನ...
22-03-26 03:14 pm
ಮುಸ್ಲಿಂ ರಾಷ್ಟ್ರಗಳೊಂದಿಗೆ ಸಂಘರ್ಷ ಬಯಸುವುದಿಲ್ಲ ;...
22-03-26 11:41 am
23-03-26 05:36 pm
HK News Staffer
ಸೌಜನ್ಯಾ ಕೊಲೆ ಪ್ರಕರಣದ ಮರು ತನಿಖೆ ; ರಾಜ್ಯ ಸರಕಾರ,...
23-03-26 05:13 pm
Sandesh PG, CID Case: ಮೂಡುಬಿದಿರೆ ಇನ್ಸ್ಪೆಕ್ಟರ...
23-03-26 02:24 pm
ವಿನಾಯಕ ಬಾಳಿಗಾ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದ...
23-03-26 01:11 pm
ಉಡುಪಿಯಲ್ಲಿ ರಾಜಕೀಯ ಕಾದಾಟ ; ಶಾಸಕ ಯಶ್ ಪಾಲ್ ವಿರುದ...
22-03-26 07:30 pm
23-03-26 09:44 pm
HK News Staffer
ಪಂಪ್ವೆಲ್ - ಎಕ್ಕೂರಿನಲ್ಲಿ ಆಟೋದಲ್ಲಿ ಡ್ರಗ್ಸ್ ಮಾರಾ...
23-03-26 03:08 pm
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಯಲ್ಲಿ ಭೀಕರ ಅಪಘ...
23-03-26 11:17 am
ಬೆಂಗಳೂರಲ್ಲಿ ಅಪಾಯಕಾರಿ ರೀತಿಯಲ್ಲಿ ಲ್ಯಾಂಬೋರ್ಗಿನಿ...
22-03-26 09:44 pm
ಆರು ವರ್ಷದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ ನೀಚ ಅಜ್...
20-03-26 04:09 pm