ಬ್ರೇಕಿಂಗ್ ನ್ಯೂಸ್
30-09-22 09:55 pm HK News Desk ಕ್ರೈಂ
ಬೆಳಗಾವಿ, ಸೆ.30 : ತನ್ನ ಪ್ರಿಯಕರನ ಜೊತೆ ಮದುವೆಯಾಗಲು ಅಡ್ಡಿಯಾಗಿದ್ದಕ್ಕೆ ಮಗಳೇ ತನ್ನ ತಂದೆಯನ್ನು ತಾಯಿ ಮತ್ತು ಪ್ರಿಯತಮನ ಜೊತೆ ಸೇರಿ ಕೊಲೆಗೈದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸುಧೀರ್ ಕಾಂಬಳೆ ಹತ್ಯೆ ಪ್ರಕರಣವನ್ನು ಭೇದಿಸಿದ ಪೊಲೀಸರು, ಆತನ ಪತ್ನಿ, ಮಗಳು ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಸೆ.17 ರಂದು ಕೊಲೆ ಘಟನೆ ನಡೆದಿತ್ತು. ಪತ್ನಿ ರೋಹಿಣಿ ಕಾಂಬಳೆ, ಪುತ್ರಿ ಸ್ನೇಹಾ ಕಾಂಬಳೆ, ಸ್ನೇಹಾಳ ಪ್ರಿಯಕರ ಪುಣೆ ಮೂಲದ ಅಕ್ಷಯ ವಿಠಕರ್ (25) ಬಂಧಿತರು. ಕೊಲೆಗೂ ಮುನ್ನ ಆರೋಪಿಗಳು ರವಿಚಂದ್ರನ್ ಅಭಿನಯದ ದೃಶ್ಯಂ ಸಿನಿಮಾ ನೋಡಿದ್ದರು. ದೃಶ್ಯಂ ಸಿನಿಮಾ ಮಾದರಿಯಲ್ಲಿ ಸಾಕ್ಷ್ಯಗಳ ನಾಶಕ್ಕಾಗಿ ಮತ್ತು ಕೊಲೆ ಕೃತ್ಯ ನಡೆಸಿ ಪಾರಾಗಲು ಸಂಚು ಹೂಡಿದ್ದರು. ಆದರೆ ಪೊಲೀಸರ ಕರಾರುವಾಕ್ ತನಿಖೆಯ ಮುಂದೆ ತಾಯಿ, ಮಗಳು ಹೂಡಿದ್ದ ಸ್ಕೆಚ್ ಬಯಲಾಗಿದೆ.
ಪತ್ನಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿ
ಸುಧೀರ್ ಕಾಂಬಳೆ ಪತ್ನಿ ರೋಹಿಣಿಗೆ ನಿತ್ಯ ಮಾನಸಿಕ ಕಿರುಕುಳ ನೀಡ್ತಿದ್ದ ಎನ್ನುವ ಆರೋಪಗಳಿದ್ದವು. ಇದರಿಂದ ಮಾನಸಿಕವಾಗಿ ಖಿನ್ನಳಾಗಿದ್ದ ರೋಹಿಣಿ ಪುತ್ರಿ ಸ್ನೇಹಾ ಮುಂದೆ ಅಳಲು ತೋಡಿಕೊಂಡಿದ್ದಳು. ಈ ನಡುವೆ, ಪುಣೆಯಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡ್ತಿದ್ದ ಸ್ನೇಹಾಗೆ ಹೋಟೆಲ್ ರಿಸೆಪ್ಷನಿಸ್ಟ್ ಆಗಿದ್ದ ಅಕ್ಷಯ್ ಪರಿಚಯ ಆಗಿತ್ತು. ಅಕ್ಷಯ -ಸ್ನೇಹಾ ನಡುವೆ ಪರಿಚಯ ಬಳಿಕ ಪ್ರೇಮಕ್ಕೆ ತಿರುಗಿತ್ತು. ಆದರೆ ಇವರ ಪ್ರೀತಿಗೆ ತಂದೆ ನಿರಾಕರಿಸಿದ್ದು ಯಾವುದೇ ಕಾರಣಕ್ಕೂ ಆತನನ್ನು ಮದುವೆಯಾಗಲು ಬಿಡಲ್ಲ ಎಂದಿದ್ದರು.
ತಾಯಿಗೆ ಕಿರುಕುಳ ನೀಡುತ್ತಿದ್ದ ತಂದೆ ತನ್ನ ಬಾಳಿಗೂ ಕೊಳ್ಳಿ ಇಡುತ್ತಾನೆಂದು ಮಗಳು ಸ್ನೇಹಾ ಪುಣೆಯಲ್ಲಿದ್ದುಕೊಂಡೇ ಪ್ರಿಯಕರನ ಜೊತೆ ಸೇರಿ ತಂದೆಯ ಕೊಲೆಗೆ ಸ್ಕೆಚ್ ಹಾಕಿದ್ದಳು. ಅದರಂತೆ, ಸೆಪ್ಟೆಂಬರ್ 15 ರಂದು ಬೆಳಗಾವಿಗೆ ಬಂದಿದ್ದ ಅಕ್ಷಯ ವಿಠಕರ, ಸ್ನೇಹಾ ತಾಯಿ ರೋಹಿಣಿಯನ್ನು ರಹಸ್ಯವಾಗಿ ಭೇಟಿಯಾಗಿದ್ದ. ಬೆಳಗಾವಿ ಹೊರವಲಯದಲ್ಲಿ ಇವರು ಜೊತೆ ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು. ಸೆಪ್ಟೆಂಬರ್ 16ರಂದು ತನ್ನ ಎರಡು ಮಕ್ಕಳ ಜೊತೆ ರೋಹಿಣಿ ಮನೆಯ ನೆಲಮಹಡಿಯ ಕೊಠಡಿಯಲ್ಲಿ ಮಲಗಿದ್ದಳು. ಮನೆಯ ಮೇಲ್ಮಹಡಿಯ ರೂಮ್ನಲ್ಲಿ ಗಂಡ ಸುಧೀರ್ ಮಲಗಿದ್ದ. ಸೆಪ್ಟೆಂಬರ್ 17ರ ಬೆಳಗಿನ ಜಾವ ಹಿಂಬದಿ ಬಾಗಿಲಿನಿಂದ ಮನೆಗೆ ನುಗ್ಗಿದ್ದ ಅಕ್ಷಯ್, ರೋಹಿಣಿ ಜೊತೆಗೂಡಿ ಸುಧೀರ್ ಕಾಂಬಳೆಯನ್ನು ಹತ್ಯೆ ಮಾಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದ ಸುಧೀರ್ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಲಾಗಿತ್ತು.
ಘಟನೆಯ ಬಳಿಕ ಏನೂ ಆಗಿಲ್ಲ ಎಂಬಂತೆ ಅಕ್ಷಯ್ ಪುಣೆಗೆ ವಾಪಸ್ ಆಗಿದ್ದ. ಆದರೆ, ರೋಹಿಣಿ ಫೋನ್ ಕರೆಗಳನ್ನು ಆಧರಿಸಿ ಪೊಲೀಸರು ತನಿಖೆ ನಡೆಸಿದಾಗ ಕೊಲೆಯ ಹಿಂದಿನ ರಹಸ್ಯಗಳು ತೆರೆದುಕೊಂಡಿದ್ದವು.
Belagavi Daughter along with her mother and lover kills own father who was into real estate for opposing love marriage. The plot was done watching Dhrushyam movie.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am