ಬ್ರೇಕಿಂಗ್ ನ್ಯೂಸ್
08-10-20 07:02 pm Bangalore Correspondent ಕ್ರೈಂ
ಬೆಂಗಳೂರು, ಅಕ್ಟೋಬರ್ 8: ಐಸಿಸ್ ಉಗ್ರರ ಜೊತೆಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಇಬ್ಬರು ಉಗ್ರರನ್ನು ರಾಷ್ಟ್ರೀಯ ತನಿಖಾ ದಳ ಬಂಧಿಸಿದೆ. ಅಹ್ಮದ್ ಅಬ್ದುಲ್ ಸಿದರ್ (40) ಮತ್ತು ಇರ್ಫಾನ್ ನಾಸಿರ್(33) ಬಂಧಿತರು. ಅಬ್ದುಲ್ ನಾಸಿರ್ ನನ್ನು ತಮಿಳುನಾಡಿನ ರಾಮನಾಥಪುರಂನಲ್ಲಿ ಬಂಧಿಸಿದ್ದರೆ, ಮತ್ತೊಬ್ಬ ಆರೋಪಿ ಇರ್ಫಾನ್ ನಾಸಿರ್ನನ್ನು ಬೆಂಗಳೂರಿನ ಫ್ರೇಜರ್ ಟೌನ್ನಲ್ಲಿ ಬಂಧಿಸಲಾಗಿದೆ.
ಅಹ್ಮದ್ ಅಬ್ದುಲ್ ಸಿದರ್, ಚೆನ್ನೈನ ಬ್ಯಾಂಕ್ ಒಂದರಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿದ್ದ. ಇರ್ಫಾನ್ ನಾಸಿರ್, ಬೆಂಗಳೂರಿನಲ್ಲಿ ಅಕ್ಕಿ ವ್ಯಾಪಾರ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಉಗ್ರರು ಬೆಂಗಳೂರು ಕೇಂದ್ರೀಕರಿಸಿ ಕಾರ್ಯಾಚರಣೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಎನ್ಐಎಗೆ ಐಸಿಸ್ ಸಂಪರ್ಕದ ಸುಳಿವು ಲಭಿಸಿತ್ತು. ಇತ್ತೀಚೆಗೆ ಬೆಂಗಳೂರು ಮೂಲದ ಡಾ.ಅಬ್ದುರ್ ರೆಹಮಾನ್ ಎಂಬಾತನನ್ನು ಬಂಧಿಸಿದ್ದ ವೇಳೆ, ಆತ ಆರೋಪಿಗಳ ಸುಳಿವು ನೀಡಿದ್ದ. 2014ರಲ್ಲಿ ಡಾ.ಅಬ್ದುರ್ ರೆಹಮಾನ್ ಜೊತೆಗೆ ಇವರೂ ಪ್ರಯಾಣಿಸಿದ್ದರು ಎಂದು ಮಾಹಿತಿ ಸಿಕ್ಕಿತ್ತು.
ಈ ಕುರಿತಂತೆ ಇನ್ನಷ್ಟು ತನಿಖೆ ನಡೆಸಿದ ವೇಳೆ, ಬೆಂಗಳೂರಿನಲ್ಲಿ ಖುರಾನ್ ಸರ್ಕಲ್ ಎಂದು ಗ್ರೂಪ್ ಮಾಡಿಕೊಂಡು ಯುವಕರನ್ನು ಸಿರಿಯಾದ ಐಸಿಸ್ ನೆಟ್ವರ್ಕ್ ಸೇರುವಂತೆ ಪ್ರೇರೇಪಣೆ ನೀಡುತ್ತಿದ್ದರು ಎನ್ನುವುದು ಬೆಳಕಿಗೆ ಬಂದಿದೆ. ಅಲ್ಲದೆ, ಇವರಿಬ್ಬರು ಹಿಜ್ಬ್-ಉತ್-ತಾಹಿರ್ ಎಂಬ ಉಗ್ರ ಸಂಘಟನೆಯ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. ಇದರ ಜೊತೆಯಲ್ಲೇ, ತಮ್ಮ ತಂಡದ ಸದಸ್ಯರು ಹಾಗೂ ಗುಂಪುಗಳ ಮೂಲಕ ಹಣ ಸಂಗ್ರಹ ಕಾರ್ಯದಲ್ಲಿ ಸಕ್ರಿಯರಾಗಿದ್ದರು.
ಅಹ್ಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸಿರ್ ಮನೆಗಳಲ್ಲಿ ಎನ್ಐಎ ಶೋಧ ಕಾರ್ಯ ನಡೆಸಿದೆ. ಗುರುಪ್ಪನ ಪಾಳ್ಯ ಹಾಗೂ ಫ್ರೇಜರ್ ಟೌನ್ ನಿವಾಸದಲ್ಲಿ ಶೋಧ ಕಾರ್ಯಾಚರಣೆ ವೇಳೆ ಧಾರ್ಮಿಕ ಭಾವನೆ ಪ್ರಚೋದಿಸುವ ಲೇಖನಗಳು, ವಿದ್ಯುನ್ಮಾನ ಉಪಕರಣಗಳು ಲಭ್ಯವಾಗಿದ್ದು, ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
NIA arrests two suspected IS terrorists, Ahamed Abdul Cader, 40, and Irfan Nasir, 33, from Bengaluru
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 01:47 pm
Mangalore Correspondent
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm