ಬ್ರೇಕಿಂಗ್ ನ್ಯೂಸ್
03-09-22 02:03 pm HK News Desk ಕ್ರೈಂ
ಭೋಪಾಲ್, ಸೆ.3: ತಾನು ದೊಡ್ಡ ರೌಡಿಯೆಂದು ಪ್ರಸಿದ್ಧಿಗೆ ಬರಬೇಕು, ಕನ್ನಡದ ಸಿನಿಮಾ ಕೆಜಿಎಫ್ ಹೀರೋ ರೀತಿ ಹೈಲೈಟ್ ಆಗಬೇಕೆಂಬ ಹುಚ್ಚು ಆಸೆ ಬೆಳೆಸಿಕೊಂಡ 19 ವರ್ಷ ಯುವಕನೊಬ್ಬ ನಾಲ್ವರು ಸೆಕ್ಯುರಿಟಿ ಗಾರ್ಡ್ಗಳನ್ನು ಕೊಂದು ಹಾಕಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಶಿವಪ್ರಸಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಹಲವರ ಹತ್ಯೆಗೆ ಸ್ಕೆಚ್ ಹಾಕಿದ್ದಾಗಲೇ ಬಲೆಗೆ ಬಿದ್ದಿದ್ದಾನೆ. ಹಂತಕನ ಮುಂದಿನ ಟಾರ್ಗೆಟ್ ಪೊಲೀಸರೇ ಆಗಿದ್ದರು. ಕೆಜಿಎಫ್ ಚಿತ್ರದ ಹೀರೊ ಮಾದರಿಯಲ್ಲಿ ಪ್ರಸಿದ್ಧಿ ಪಡೆಯುವುದಕ್ಕಾಗಿ ಸರಣಿ ಕೊಲೆ ಕೃತ್ಯ ಎಸಗಿದ್ದಾಗಿ ಆರೋಪಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿ ಶಿವಪ್ರಸಾದ್, ಕೊಲೆಗೈದ ವ್ಯಕ್ತಿಯೊಬ್ಬನಲ್ಲಿದ್ದ ಮೊಬೈಲನ್ನು ಕದ್ದು ತಾನೇ ಬಳಸಿಕೊಂಡಿದ್ದು ಮುಳುವಾಗಿ ಪರಿಣಮಿಸಿತ್ತು. ಕೊಲೆ ಕೇಸಿನಲ್ಲಿ ತನಿಖೆ ಶುರು ಹಚ್ಚಿದ್ದ ಪೊಲೀಸರು ಫೋನ್ ಟ್ರ್ಯಾಕ್ ಮಾಡಿದಾಗ, ಆರೋಪಿಯ ಜಾಡು ಸಿಕ್ಕಿದ್ದು ಬಂಧಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ಗಳು ಮಲಗಿರುತ್ತಿದ್ದಾಗ ಶಿವಪ್ರಸಾದ್ ಅವರನ್ನು ಸುಲಭದಲ್ಲಿ ಹೊಡೆದು ಕೊಲ್ಲುತ್ತಿದ್ದ. ಸಾಗರ್ ಜಿಲ್ಲೆಯಲ್ಲಿ ಮೂವರು, ಭೋಪಾಲ್ನಲ್ಲಿ ಒಬ್ಬನನ್ನು ಇದೇ ರೀತಿ ಹತ್ಯೆ ಮಾಡಿದ್ದಾನೆ. ಈ ಪೈಕಿ ಒಂದು ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಆರೋಪಿಯು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ನಡೆಸಿ, ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿದ್ದ. ಆನಂತರ ತನ್ನನ್ನು ಯಾರೂ ನೋಡಿಲ್ಲ ಎಂಬುದನ್ನು ಖಾತ್ರಿ ಪಡಿಸಿ ಪರಾರಿಯಾಗಿದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಮುಂದಿನ ದಿನಗಳಲ್ಲಿ ಪೊಲೀಸರನ್ನೇ ಹತ್ಯೆ ಮಾಡಲು ಯೋಚಿಸಿದ್ದಾಗಿ ಆರೋಪಿ ಶಿವಪ್ರಸಾದ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ತಾನು ಪ್ರಸಿದ್ಧಿ ಹೊಂದಬೇಕು ಎಂಬ ಒಂದೇ ಕಾರಣಕ್ಕೆ ರಾತ್ರಿ ಹೊತ್ತು ನಿದ್ರೆ ಮಂಪರಿನಲ್ಲಿರುತ್ತಿದ್ದ ಸೆಕ್ಯುರಿಟಿ ಗಾರ್ಡ್ಗಳನ್ನ ಕಲ್ಲು, ಕಬ್ಬಿಣದ ರಾಡ್, ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡುತ್ತಿದ್ದ. ಯಾರೊಬ್ಬರನ್ನೂ ಲೂಟಿ ಮಾಡಿಲ್ಲ. ಅವನ ಉದ್ದೇಶ ಕೊಲೆ ಮಾಡುವುದಷ್ಟೇ ಆಗಿತ್ತು. ನಾಲ್ಕು ಕೊಲೆಯಾದ್ರೂ ಹೆಸರು ಬಂದಿಲ್ಲ ಅಂತ ಮುಂದಿನ ಟಾರ್ಗೆಟ್ ಪೊಲೀಸರನ್ನೇ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.
On Friday, the Madhya Pradesh Police arrested a 19-year-old alleged serial killer for reportedly murdering four security guards in their sleep. According to NDTV, the accused, Shivprasad Dhurve, was inspired by the Kannada blockbuster film KGF and wanted to become famous.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am