ಬ್ರೇಕಿಂಗ್ ನ್ಯೂಸ್
24-08-22 05:31 pm HK News Desk ಕ್ರೈಂ
ಹೈದರಾಬಾದ್, ಆಗಸ್ಟ್ 24: ಸೈಬರ್ ಕಳ್ಳರು ವಂಚನೆಗೆ ಯಾವೆಲ್ಲ ಟ್ರಿಕ್ಸ್ ಬಳಸುತ್ತಾರೆ ಅನ್ನೋದನ್ನು ಊಹಿಸೋದಕ್ಕೂ ಆಗಲ್ಲ. ಆಂಧ್ರಪ್ರದೇಶದಲ್ಲಿ ಒಬ್ಬರು ಮಹಿಳೆ ಕೇವಲ ವಾಟ್ಸಪ್ ಲಿಂಕ್ ಒತ್ತಿದ ಮಾತ್ರಕ್ಕೆ ಬ್ಯಾಂಕಲ್ಲಿದ್ದ ಖಾತೆಯ ಹಣವನ್ನೆಲ್ಲ ಕಳಕೊಂಡಿದ್ದಾರೆ ಅನ್ನುವ ಸುದ್ದಿ ಬಂದಿದೆ.
ಮದನಪಲ್ಲಿ ನಗರದ ರೆಡ್ಡೆಪ್ಪನಾಯ್ಡು ಕಾಲನಿಯ ನಿವಾಸಿ ವರಲಕ್ಷ್ಮಿ ಹಣ ಕಳಕೊಂಡವರು. ತನ್ನ ಮೊಬೈಲಿಗೆ ಬಂದಿದ್ದ ವಾಟ್ಸಪ್ ಲಿಂಕನ್ನು ಒತ್ತಿದ್ದರು. ಅಪರಿಚಿತ ನಂಬರಿಂದ ಬಂದಿದ್ದ ಮೆಸೇಜ್ ಲಿಂಕನ್ನು ಒತ್ತಿದ ಕೆಲವೇ ಹೊತ್ತಿನಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 21 ಲಕ್ಷ ರೂಪಾಯಿ ಹೋಗಿದೆ ಎಂದು ಸೈಬರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ನಿವೃತ್ತ ಶಿಕ್ಷಕಿಯೂ ಆಗಿರುವ ವರಲಕ್ಷ್ಮಿ ತನ್ನ ಖಾತೆಯಿಂದ ಹಣ ಹೋಗಿರುವ ಬಗ್ಗೆ ಮೆಸೇಜ್ ಬಂದಾಗಲೇ ಸಂಶಯ ಬಂದಿತ್ತು. ಕೂಡಲೇ ಬ್ಯಾಂಕ್ ಸಿಬಂದಿಗೆ ಮಾಹಿತಿ ನೀಡಿದ್ದಾರೆ. ಖಾತೆಯಲ್ಲಿದ್ದ ಹಣ ಖಾಲಿಯಾಗಿತ್ತು. ಆನಂತರ, ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಸೈಬರ್ ಕಳ್ಳರು ವೈರಸ್ ಇರುವ ಲಿಂಕನ್ನು ವಾಟ್ಸಪ್ ಗೆ ಕಳಿಸುತ್ತಾರೆ. ಅದರಲ್ಲಿರುವ ವೈರಸ್ ಮೊಬೈಲನ್ನು ಹ್ಯಾಕ್ ಮಾಡಿ, ಅದರಲ್ಲಿ ಇರುವ ಎಲ್ಲ ಮಾಹಿತಿಗಳನ್ನೂ ಕದಿಯುತ್ತದೆ. ಬ್ಯಾಂಕ್ ಖಾತೆಗಳು ಹೆಚ್ಚಿನವು ಮೊಬೈಲ್ ಲಿಂಕ್ ಆಗಿರುವುದರಿಂದ ಅದರಿಂದ ಹಣ ಕಳವು ಮಾಡಿದ್ದಾರೆ ಎನ್ನಲಾಗುತ್ತಿದೆ. ವಾಟ್ಸಪ್ ಲಿಂಕ್ ಜಾಲದ ಮೂಲಕ ಹಣ ಕಳವು ಮಾಡುತ್ತಿರುವುದು ಈಗ ಹೆಚ್ಚುತ್ತಿದೆಯಂತೆ.
ಅಧಿಕೃತ ಅಲ್ಲದ ವಾಟ್ಸಪ್ ಲಿಂಕ್ ಒತ್ತಬೇಡಿ
ವಾಟ್ಸಪ್ ಲಿಂಕ್ ಮೂಲಕ ಸೈಬರ್ ಹ್ಯಾಕರ್ ಕನ್ನ ಹಾಕಿದರೆ, ಅದನ್ನು ಪತ್ತೆ ಮಾಡುವುದು ತುಂಬ ಕಷ್ಟ ಎನ್ನುತ್ತಿದ್ದಾರೆ, ಹೈದರಾಬಾದ್ ಪೊಲೀಸರು. ಈ ಬಗ್ಗೆ ಜನರೇ ಜಾಗ್ರತೆ ವಹಿಸಬೇಕು ಎನ್ನುತ್ತಿದ್ದಾರೆ. ಅದಕ್ಕಾಗಿ ಅಪರಿಚಿತರ ಕಡೆಯಿಂದ ಬರುವ ಯಾವುದೇ ಮೆಸೇಜ್ ಲಿಂಕ್ ಗಳನ್ನು ಒತ್ತಬಾರದು. ಅದರಲ್ಲೂ ಡಾಟ್ ಕಾಮ್ ಅಥವಾ ಡಾಟ್ ಇನ್ ನಿಂದ ಕೊನೆಯಾಗುವ ಲಿಂಕ್ ಅಲ್ಲದೇ ಇದ್ದರೆ ಅಂಥವನ್ನು ಮುಟ್ಟಲೇಬಾರದು ಎನ್ನುತ್ತಾರೆ. ಅಧಿಕೃತ ಅಲ್ಲದ ವೆಬ್ ಸೈಟ್ ಲಿಂಕ್ ಒತ್ತಬಾರದು. ಹಣಕಾಸು ವ್ಯವಹಾರದ ಲಿಂಕ್ ಇದ್ದರೂ, ಅವನ್ನು ಒತ್ತಬಾರದು. ಅದಕ್ಕಾಗಿ ಅಪರಿಚಿತರು ಕಳುಹಿಸುವ ವಾಟ್ಸಪ್ ಲಿಂಕ್ ಒತ್ತೋಕೂ ಮುನ್ನ ಎರಡೆರಡು ಬಾರಿ ಯೋಚನೆ ಮಾಡಬೇಕು ಎಂದು ಪೊಲೀಸರು ಸಲಹೆ ನೀಡುತ್ತಾರೆ.
Another day, and here's yet another WhatsApp scam. Online fraud cases have seen significant growth in the last few years, especially due to the pandemic when people were dependent on the Internet for almost everything. Most scammers use WhatsApp, used by millions of users, to trick users and steal their hard-earned money. The latest online fraud incident comes from Andhra Pradesh, where a retired teacher was tricked and hackers managed to steal lakhs of money. And this happened through WhatsApp.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm