ಬ್ರೇಕಿಂಗ್ ನ್ಯೂಸ್
21-08-22 01:40 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 20: ತಾನೊಂದು ಬಗೆದರೆ ವಿಧಿಯೊಂದು ಬಗೆಯುತ್ತೆ ಎನ್ನುತ್ತಾರೆ. ಹೌದು.. ಕೆಲವೊಮ್ಮೆ ನಾವು ಏನೇ ಲೆಕ್ಕ ಹಾಕಿದ್ರೂ ಬೇರೆಯದ್ದೇ ಆಗುತ್ತದೆ. ಆಕೆಯೂ ಅಷ್ಟೇ, ತನ್ನ ಗಂಡನನ್ನೇ ಕೊಲೆ ಮಾಡುವುದಕ್ಕೆ ಪ್ರಿಯಕರನ ಜೊತೆ ಸೇರಿ ಪ್ಲಾನ್ ಹಾಕಿದ್ದಳು. ಆದರೆ ಆಗಿದ್ದು ಮಾತ್ರ ಬೇರೆಯೇ.. ಗಂಡನನ್ನು ಕೊಲ್ಲಲು ಸುಪಾರಿ ಕೊಟ್ಟಿದ್ದರೂ, ಆಕೆ ಬಚಾವಾಗಿದ್ದ. ಇತ್ತ ಪ್ರಿಯಕರ ಪೊಲೀಸರಿಗೆ ಹೆದರಿ ಸುಸೈಡ್ ಮಾಡಿಕೊಂಡಿದ್ದ. ಪ್ರೀತಿ ಕೊಂದ ಕೊಲೆಗಾತಿ ಜೈಲು ಸೇರಿದ್ದಾಳೆ.
ಬೆಂಗಳೂರು ನಗರದ ಪೀಣ್ಯದಲ್ಲಿ ವಿಲಕ್ಷಣ ಘಟನೆ ನಡೆದಿದ್ದು, ಗಂಡನ ಕೊಲೆಗೆ ಸುಪಾರಿ ನೀಡಿದ್ದ ಮಹಿಳೆ ಅನುಪಲ್ಲವಿ, ಆಕೆಯ ತಾಯಿ ಅಮ್ಮಾಜಮ್ಮ, ನಾಗರಾಜ್, ಹರೀಶ್ ಹಾಗೂ ಮುಗಿಲನ್ ಎಂಬವರನ್ನ ಪೊಲೀಸರು ಬಂಧಿಸಿದ್ದಾರೆ. ಅನುಪಲ್ಲವಿ ಎಂಟು ವರ್ಷಗಳ ಹಿಂದೆ ನವೀನ್ ಕುಮಾರ್ ಎಂಬಾತನನ್ನ ಮದುವೆಯಾಗಿದ್ದಳು. ಸಂಸಾರದ ಸಾಫಲ್ಯ ಎನ್ನುವಂತೆ ಇಬ್ಬರು ಮಕ್ಕಳೂ ಆಗಿದ್ದರು. ಆದರೆ ಈ ನಡುವೆ ಅನುಪಲ್ಲವಿ, ಗಂಡನಿಲ್ಲದ ಹೊತ್ತಲ್ಲಿ ಬರುತ್ತಿದ್ದ ಹಿಮವಂತ ಎಂಬ ಯುವಕ ಬೀಸಿದ್ದ ಹಾಡಿನ ಪಲ್ಲವಿಗೆ ಸೂರೆಯಾಗಿದ್ದಳು. ನವೀನ ಹಳೆಯದಾದ, ಹೊಸಬನೇ ಹೊಸತನ ಕೊಡ್ತಾನೆ ಎಂದು ಲೆಕ್ಕಹಾಕಿದ ಅನುಪಲ್ಲವಿ, ಕ್ಯಾಬ್ ಡ್ರೈವರ್ ಆಗಿ ಹೊರಗೆ ಹೋಗುತ್ತಿದ್ದ ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ್ದಳು. ಈ ಬಗ್ಗೆ ತನ್ನ ತಾಯಿ ಅಮ್ಮಾಜಮ್ಮ ಜೊತೆಗೆ ಚರ್ಚಿಸಿ, ಹಿಮವಂತನೂ ಸೇರಿಕೊಂಡು ನವೀನನಿಗೆ ಉಪಾಯದಿಂದ ಇತಿಶ್ರೀ ಹಾಡಲು ನಿರ್ಧರಿಸಿದ್ದರು.
ಕೊಲೆಗೆ ಸುಪಾರಿ ಪಡೆದ ಬೆಂಗಳೂರಿನವರೇ ಆದ ನಾಗರಾಜ್ ಹಾಗೂ ಹರೀಶ್ ಎಂಬಿಬ್ಬರು ಕ್ಯಾಬ್ ಡ್ರೈವರ್ ಆಗಿದ್ದ ನವೀನ್ ಕುಮಾರ್ ನನ್ನು ಟ್ರಿಪ್ ಹೊಗೋಣ ಎಂದು ತಮಿಳುನಾಡಿಗೆ ಕರೆದೊಯ್ದಿದ್ದಾರೆ. ಕೊಲೆ ಮಾಡೋಕೆ ಬಂದಿದ್ದರೂ, ಕ್ಯಾಬಲ್ಲಿ ಜೊತೆಗೇ ಹೋಗುತ್ತಾ ಆತನ ಕತೆಗಳನ್ನು ಕೇಳುತ್ತಾ ಮನಸ್ಸು ಮುರಿದುಕೊಂಡಿದ್ದರು. ಕೊನೆಗೆ ಕೊಲೆ ಮಾಡೋದಕ್ಕೆ ಭಯವಾಗಿ ಹರೀಶ್ ಮತ್ತು ನಾಗರಾಜ್ ಬೆಂಗಳೂರಿಗೆ ವಾಪಸ್ಸಾಗಿದ್ದರು. ಆದರೆ, ಕೊಲೆ ಮಾಡೋದಾಗಿ ಸುಪಾರಿ ಹಣ ಪಡೆದಿದ್ದರಿಂದ ಯುವಕರಿಬ್ಬರು, ತಮಗೆ ವಹಿಸಿದ್ದ ಕೊಲ್ಲುವ ಕೆಲಸವನ್ನು ಮತ್ತಿಬ್ಬರು ತಮಿಳಿಗರಿಗೆ ವಹಿಸಿದ್ದರು.
ತಮಿಳುನಾಡಿನ ಮುಗಿಲನ್ ಹಾಗೂ ಕಣ್ಣನ್ ಎಂಬವರು ಕೊಲೆ ಮಾಡುತ್ತೇವೆಂದು ಮತ್ತೆ ನವೀನ್ ಕಾರಿನಲ್ಲೇ ಕುಳಿತು ಬೆನ್ನತ್ತಿದ್ದರು. ಆದರೆ ಅವರು ಕೂಡ ನವೀನನ್ನು ಕೊಲ್ಲುವುದಕ್ಕೆ ಮನಸ್ಸಾಗದೆ, ಜೊತೆಗೇ ಎಣ್ಣೆ ಕುಡಿದು ತೇಗಿದ್ದಾರೆ. ಅದಲ್ಲದೆ, ಕುಡಿದು ಟೈಟಾಗಿ ಮಲಗಿದ್ದ ನವೀನ್ ಮೈಮೇಲೆ ಟೊಮ್ಯಾಟೋ ಸಾಸ್ ಹಾಕಿ, ರಕ್ತ ಬಂದಿರುವಂತೆ ತೋರಿಸಿ ಕೊಲೆ ಮಾಡಿ ಮುಗಿಸಿರುವುದಾಗಿ ಫೋಟೊ ತೆಗೆದು ಅನುಪಲ್ಲವಿ ಮತ್ತು ಆಕೆಯ ಪ್ರಿಯಕರನಿಗೆ ವಾಟ್ಸಾಪ್ ಮಾಡಿದ್ದಾರೆ. ಇತ್ತ ನವೀನ್ ಕತೆ ಮುಗೀತು ಅಂತ ತಿಳಿಯುತ್ತಲೇ ಅನುಪಲ್ಲವಿ, ಪೊಲೀಸ್ ಠಾಣೆಗೆ ತೆರಳಿ ಗಂಡ ನಾಪತ್ತೆಯಾಗಿದ್ದಾಗಿ ದೂರು ನೀಡಿದ್ದಳು. ಪೊಲೀಸರು ವಿಚಾರಣೆ ಆರಂಭಿಸಿದ್ದನ್ನು ತಿಳಿಯುತ್ತಲೇ ಇನ್ನು ನಾನೇ ಸಿಕ್ಕಿ ಬೀಳುತ್ತೇನೆಂದು ಭಯಕ್ಕೊಳಗಾದ ಪ್ರಿಯಕರ ಹಿಮವಂತ ಮಾಡಿದ್ದುಣ್ಣೋ ಮಹಾರಾಯ ಅನ್ನುವಂತೆ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾನೆ.
ಇತ್ತ ನಾಪತ್ತೆ ದೂರು ಪಡೆದು ಪೀಣ್ಯ ಪೊಲೀಸರು ಹುಡುಕಾಡುತ್ತಿದ್ದರೆ, ವಾರದ ನಂತರ ನವೀನ್ ದಿಢೀರ್ ಆಗಿ ಪೊಲೀಸರಿಗೆ ಪತ್ತೆಯಾಗಿದ್ದ. ಪೊಲೀಸರು ನಾಪತ್ತೆ ವಿಚಾರದ ಬಗ್ಗೆ ಕೇಳುತ್ತಲೇ ತನಗೆ ತಿಳಿದಿರುವುದನ್ನು ನವೀನ್ ಅವರಿಗೆ ತಿಳಿಸಿದ್ದಾನೆ. ಇದನ್ನು ಗುಪ್ತವಾಗಿಟ್ಟ ಪೊಲೀಸರು, ಗಂಡ ನಾಪತ್ತೆಯೆಂದು ನಾಟಕ ಮಾಡ್ತಿದ್ದ ಅನುಪಲ್ಲವಿಯನ್ನ ಠಾಣೆಗೆ ಕರೆದು ಡ್ರಿಲ್ ಮಾಡಿದ್ದಾರೆ. ಪೊಲೀಸರ ಛಡಿಯೇಟು ಬೀಳುತ್ತಲೇ ಕತರ್ನಾಕ್ ಮಹಿಳೆ ನಿಜ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. ಸುಪಾರಿ ಪಡೆದು ಕೊಲೆ ಮಾಡಲು ತೆರಳಿದ್ದ ನಾಲ್ವರು ಸೇರಿ ತಾಯಿ, ಮಗಳನ್ನು ಪೊಲೀಸರು ಜೈಲು ಕಂಬಿಯೊಳಕ್ಕೆ ತಳ್ಳಿದ್ದಾರೆ. ತುಂಬು ಸಂಸಾರಕ್ಕೆ ಹುಳಿ ಹಿಂಡಿದ್ದ ಮಹಿಳೆ ಪ್ರೀತಿ ಕೊಂದ ಕೊಲೆಗಾತಿ ಅನ್ನೋ ರೀತಿ ಜೈಲು ಸೇರಿದ್ದಾಳೆ.
The Peenya police have arrested a homemaker, her mother, and three of her associates for allegedly plotting to kill her husband, to live with her paramour.The accused have been identified as Anupallavi, her mother Ammajamma, and the supari killers Harish, Mugilan, and Nagaraj. Another accused identified as Kannan is absconding and efforts are on to track him down, a police officer, said.According to the police, Anupallavi had an affair with a businessman identified as Himavanth and allegedly decided to eliminate her husband, Ravikumar, a cab driver .
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm