ಬ್ರೇಕಿಂಗ್ ನ್ಯೂಸ್
04-10-20 02:47 pm Headline Karnataka News Network ಕ್ರೈಂ
ಮಂಗಳೂರು, ಅಕ್ಟೋಬರ್. 04 : ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಮಯ ನೋಡಿಕೊಂಡು ಮನೆಗೆ ನುಗ್ಗಿ ಚಿನ್ನಾಭರಣ ಕಳವುಗೈದ ಮೂವರು ಮಹಿಳೆಯರನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಹಾಸನ ಜಿಲ್ಲೆಯ ಹೊಳೆ ನರಸೀಪುರದ ಶಿವಗಾಮಿ(37), ಮಂಜು(26), ಲಚುಮಿ(30) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಶಿವಬಾಗ್ ನ ತಾರೆತೋಟದ ಬಳಿ ಸೆಪ್ಟೆಂಬರ್ 13 ರಂದು ರೂಪಾ ಎಂಬವರು ಮಧ್ಯಾಹ್ನ ಹೊತ್ತಿಗೆ ಮಕ್ಕಳ ಜೊತೆ ಅಂಗಡಿಗೆ ತೆರಳಿದ್ದರು. ಸ್ವಲ್ಪ ಹೊತ್ತಿನಲ್ಲಿ ಮರಳಿ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಮನೆಯಲ್ಲಿದ್ದ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 18 ,000 ನಗದು ಕಳವಾಗಿತ್ತು. ಬಳಿಕ ರೂಪಾ, ಕದ್ರಿ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮೂವರು ಮಹಿಳಾ ಕಳ್ಳಿಯರನ್ನು ಬಂಧಿಸಿದ್ದಾರೆ.
ಅಪರಾಧಿಗಳಿಂದ ಕಳವಾಗಿದ್ದ ಚಿನ್ನಾಭರಣ ಹಾಗೂ ಕಳವು ಮಾಡಲು ಉಪಯೋಗಿಸಿದ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ವಿಕಾಸ್ ಕುಮಾರ್, ಉಪ ಪೊಲೀಸ್ ಆಯುಕ್ತ ಅರುನಂಶಗಿರಿ, ಉಪ ಪೊಲೀಸ್ ಆಯುಕ್ತ ಅಪರಾಧ ಹಾಗೂ ಸಂಚಾರ ವಿಭಾಗ ವಿನಯ್ ಗಾವಂಕರ್, ಸಹಾಯಕ ಪೊಲೀಸ್ ಆಯುಕ್ತ ಎಂ ಜಗದೀಶ್, ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕರಾದ ಸವಿತೃ ತೇಜ ಪಿ.ಡಿ, ಪಿ ಎಸ್ ಐ ಅನಿತಾ ನಿಕ್ಕಂ, ಪಿ ಎಸ್ ಐ ಜ್ಞಾನಶೇಕರ್, ಎ ಎಸ್ ಐ ಶಶಿಧರ್ ಶೆಟ್ಟಿ ಜನಾರ್ಧನ ನಾಯ್ಕ್ ಮತ್ತು ಸಿಬ್ಬಂದಿಗಳಾದ ಜಯಾನಂದ, ಉಮೇಶ್ ಕೊಟ್ಟಾರಿ, ಆಶಿತ್, ದಿನೇಶ್, ರಾಘವೇಂದ್ರ, ನಾಗರಾಜ, ದೇವಿ ಪ್ರಸಾದ್, ಪ್ರಮೀಳಾ ರವರು ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 05:38 pm
Mangalore Correspondent
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
Kudupu Murder Case, SDPI, Ravindra Nayak: ಗುಂ...
30-04-25 11:07 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am