ಬ್ರೇಕಿಂಗ್ ನ್ಯೂಸ್
03-10-22 11:13 pm Sinchana N R ಕಾಲೇಜು ಕ್ಯಾಂಪಸ್
ಶಿಕ್ಷಣವು ಇಂದು ಮಾನವನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆತನ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣ ದಾರಿದೀಪವಾಗಿದೆ. ಶಿಕ್ಷಣದಿಂದಲೇ ಮಾನವನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಆದರೆ, ಇಂದಿನ ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎನ್ನುವಂತದ್ದು ಮುಂದುವರಿದು ಶಿಕ್ಷಣ ಕ್ಷೇತ್ರದ ಮೇಲೆಯೂ ಅಪಾರ ಪರಿಣಾಮ ಬೀರಿದೆ. ಇದರಿಂದಾಗಿ ನಾವು ಪುಸ್ತಕದಿಂದ ಕೇವಲ ಓದಿ ತಿಳಿದುಕೊಳ್ಳುವ ವಿಷಯಗಳನ್ನು ದೃಶ್ಯ ಮಾಧ್ಯಮಗಳ ಮೂಲಕ ನೋಡಿ ತಿಳಿದುಕೊಳ್ಳುವಂತಹ ಸಾಮರ್ಥ್ಯವನ್ನು ಪಡೆದುಕೊಂಡಿದ್ದೇವೆ.
‘ದೇಶ ಸುತ್ತಿ ನೋಡು, ಕೋಶ ಓದಿ ನೋಡು’ ಎನ್ನುವ ಗಾದೆಯಂತೆ, ನೈಜ ಅನುಭವವನ್ನು ಪಡೆಯಲು ಕಲಿಕಾ ವಿಷಯಗಳಿಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಮ್ಮ ಜ್ಞಾನವನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಪಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದಂತೆ ನನ್ನ ಸ್ವತಃ ಅನುಭವವೆಂದರೆ... ನಾನು ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ನಮ್ಮ ಜೀವಶಾಸ್ತ್ರ ಉಪನ್ಯಾಸಕಿ ವಾರಿಜಾ ಅವರು ನಮಗೆ ಮಾನವನ ದೇಹದ ಅಂಗಗಳ ಬಗ್ಗೆ ಬೋಧಿಸುತ್ತಿದ್ದ ಸಂದರ್ಭದಲ್ಲಿ ಅದೇ ವಿಷಯದ ಕುರಿತು ಮತ್ತಷ್ಟು ಜ್ಞಾನವನ್ನು ನೀಡಲು ನಿಟ್ಟೆ ವೈದ್ಯಕೀಯ ಕಾಲೇಜು ಮೂಡಬಿದ್ರೆಯಲ್ಲಿರುವ ಪ್ರಯೋಗಾಲಯಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿ ಮಾನವನ ದೇಹದ ಒಳ ಅಂಗಗಳು ಹಾಗೂ ಅವುಗಳ ಕ್ರಿಯೆಯ ಕುರಿತು ಮಾಹಿತಿ ನೀಡಿದರು. ಇದರಿಂದಾಗಿ ಶಿಕ್ಷಣದಲ್ಲಿ ಉಪನ್ಯಾಸ ವಿಧಾನಕ್ಕೂ, ನೈಜವಾಗಿ ನೋಡಿ ಕಲಿಯುವುದಕ್ಕೂ ಎಷ್ಟು ವ್ಯತ್ಯಾಸವಿದೆ ಎಂದು ನಾವು ತಿಳಿದುಕೊಂಡೆವು.
ಹಾಗಾಗಿ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಯೂ ಸಹ ವಿದ್ಯಾರ್ಥಿಗಳಿಗೆ ನೈಜ ಅನುಭವವನ್ನು ನೀಡುವ ಮೂಲಕ ಶಿಕ್ಷಣ ನೀಡಿದರೆ ಅವರ ಜ್ಞಾನವನ್ನು ಉನ್ನತೀಕರಿಸಬಹುದಾಗಿದೆ. ಶಿಕ್ಷಕರು ಕಲಿಕಾ ವಿಷಯಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳನ್ನು ತಾರಾಲಯಗಳು, ಪ್ರಯೋಗಾಲಯಗಳು, ಪ್ರಾಣಿ-ಸಂಗ್ರಹಾಲಯಗಳು, ಪಕ್ಷಿಧಾಮಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಬಹುದು.
ಇವುಗಳಲ್ಲದೆ ಪ್ರಾಚೀನ ವಸ್ತುಗಳು, ನಾಣ್ಯಗಳು ಯುದ್ಧೋಪಕರಣಗಳು, ಸಲಕರಣೆಗಳು, ಯಂತ್ರಗಳು ಇತ್ಯಾದಿಗಳನ್ನು ನಾವು ನಮ್ಮ ಹತ್ತಿರದ ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವ ಮೂಲಕ ತಿಳಿದುಕೊಳ್ಳಬಹುದು.
ವಸ್ತು ಸಂಗ್ರಹಾಲಯವು ಅಪರೂಪವಾಗಿ ಕಾಣ ಸಿಗುವ ವಸ್ತುಗಳ ಸಂಗ್ರಹವಾಗಿದ್ದು ಇಲ್ಲಿ ಐತಿಹಾಸಿಕ, ವೈಜ್ಞಾನಿಕ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದಂತಹ ಉಪಕರಣಗಳನ್ನು ಸಂಗ್ರಹಿಸಿ ಅವುಗಳನ್ನು ಜನರಿಗೆ ಪ್ರದರ್ಶಿಸಲು ಇರುವಂತಹ ಸ್ಥಳವಾಗಿದೆ.
ಆಧುನಿಕ ಶಿಕ್ಷಣದಲ್ಲಿ ವಸ್ತು ಸಂಗ್ರಹಾಲಯದ ಮಹತ್ವ
ಶಿಕ್ಷಣ ಕ್ಷೇತ್ರದಲ್ಲಿ ವಸ್ತು ಸಂಗ್ರಹಾಲಯವು ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ವಸ್ತು ಸಂಗ್ರಹಾಲಯಕ್ಕೆ ಕರೆದುಕೊಂಡು ಹೋಗಿ ಪಾಠ ವಿಷಯಕ್ಕೆ ಸಂಬಂಧಿಸಿದಂತಹ ವಸ್ತುಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುವುದರಿಂದ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟವನ್ನು ಉನ್ನತೀಕರಣಗೊಳಿಸುವುದರ ಜೊತೆಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಮೂಡಿಸಬಹುದು ಹಾಗೂ ಅವರು ನೋಡಿದಂತಹ ವಸ್ತು ವಿಷಯಗಳ ಕುರಿತು ಅನುಭವಗಳನ್ನು ಕೇಳಿದಾಗ ಅವರೆಷ್ಟು ಜ್ಞಾನ ಸಂಪಾದಿಸಿಕೊಂಡಿದ್ದಾರೆಂದು ತಿಳಿದುಕೊಳ್ಳಬಹುದು. ವಸ್ತು ಸಂಗ್ರಹಾಲಯವು ಹಲವಾರು ಮಾದರಿ ವಸ್ತುಗಳನ್ನು ಸಂಗ್ರಹಿಸುವ ಮೂಲಕ ಮುಂದಿನ ತಲೆಮಾರಿನ ಯುವಜನತೆಗೆ ಆ ವಸ್ತುಗಳ ಮಹತ್ವದ ಕುರಿತು ಅರಿವು ಮೂಡಿಸುತ್ತದೆ.
ನಾನು ಮ್ಯೂಸಿಯಂಗೆ ಭೇಟಿ ನೀಡಿದ ಕ್ಷಣ
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿ.ಇಡಿ ಕಲಿಯುತ್ತಿದ್ದ ಸಂದರ್ಭದಲ್ಲಿ ನಾನು ನನ್ನ ಸಹಪಾಠಿಗಳೊಂದಿಗೆ ಅಲೋಶಿಯಸ್ ಮ್ಯೂಸಿಯಂಗೆ ಭೇಟಿ ನೀಡಿದಾಗ ಅಲ್ಲಿದ್ದಂತಹ ತುಳುನಾಡಿನ ಸಂಸ್ಕೃತಿಯ ನಾಗಾರಾಧನೆ, ಪ್ರಾಚೀನ ದೇವರ ವಿಗ್ರಹಗಳು, ಲೋಹದ ವಸ್ತುಗಳು, ಸಂಗೀತೋಪಕರಣಗಳು, ರಾಜರುಗಳು ಬಳಸುತ್ತಿದ್ದ ಯುದ್ಧೋಪಕರಣಗಳು, ಕೃಷಿಯಲ್ಲಿ ಬಳಸುತ್ತಿದ್ದ ಉಪಕರಣಗಳು ಹಾಗೂ ಪುಸ್ತಕಗಳು ಮಾತ್ರವಲ್ಲದೆ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಣಿಗಳ ಅಸ್ಥಿಪಂಜರ ಹಾಗೂ ಕಪ್ಪೆಯಂತಹ ಜೀವಿಗಳ ಮಾದರಿಯನ್ನು ಮತ್ತು ಮಂಗಳೂರಿಗೆ ಬಂದ ಮೊದಲ ಕಾರನ್ನು ಕೂಡ ಅಲ್ಲಿ ಗಮನಿಸಿದೆನು. ಇದನ್ನೆಲ್ಲ ಗಮನಿಸಿದ ನಂತರ, ನಾನು ಒಬ್ಬ ಶಿಕ್ಷಕಿಯಾಗಿ, ವಿದ್ಯಾರ್ಥಿಗಳಿಗೆ ಕೇವಲ ಬೋಧಿಸುವುದರಿಂದ ಅವರ ಜ್ಞಾನ ಅಭಿವೃದ್ಧಿಪಡಿಸುವ ಬದಲಾಗಿ ನೈಜ ಅನುಭವವನ್ನು ನೀಡುವ ಮೂಲಕ ಅವರ ಜ್ಞಾನದ ಮಟ್ಟವನ್ನು ಉನ್ನತಿಕರಿಸಬಹುದೆಂದು ಮನವರಿಕೆ ಮಾಡಿಕೊಂಡನು.
ಈ ನಿಟ್ಟಿನಲ್ಲಿ ನಾವು ಆಧುನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಧಾನಗಳ ರೀತಿಯಲ್ಲಿ ಬೋಧನೆ ಮಾಡಿದಾಗ ಮಾತ್ರ ವಿದ್ಯಾರ್ಥಿಗಳ ಜ್ಞಾನವನ್ನು ಬೆಳೆಸುವ ಕೆಲಸ ಮಾಡಬಹುದು. ಹಾಗೆ ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳಿಂದಲೂ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಬಹುದಾದರೂ ಅವುಗಳಿಂದಾಗುವ ಕೆಡುಕುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವುದು ಅನಿವಾರ್ಯ. ಆದರೆ ನಾವೇ ವಿದ್ಯಾರ್ಥಿಗಳನ್ನು ಇತರ ಪ್ರಮುಖ ಸ್ಥಳಗಳಿಗೆ ಕರೆದುಕೊಂಡು ಹೋಗುವ ಮೂಲಕ ನೈಜ ಅನುಭವವನನ್ನಾಧರಿಸಿದ ಜ್ಞಾನವನ್ನು ನೀಡಬಹುದು ಎಂಬುದು ನನ್ನ ಆಶಯ.
- ಸಿಂಚನ ಎನ್. ಆರ್.
ದ್ವಿತೀಯ ಬಿ.ಇಡಿ, ಸಂತ ಅಲೋಶಿಯಸ್ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು
Article by Sinchana N R about advanced learning and importance of collective heritage, offering a great way to get to know the history of a particular area.
13-10-25 10:09 pm
HK News Desk
ಸಚಿವನಾಗಿ ಆದಾಯ ಮೂಲಕ್ಕೆ ಕತ್ತರಿ ; ನಟನೆಗೆ ಮರಳಲಿದ್...
13-10-25 03:54 pm
ಶಾಲಾ ಮೈದಾನ, ಪಾರ್ಕ್ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ...
13-10-25 12:51 pm
DK Shivakumar, MLA Munirathna, CM Siddaramaia...
12-10-25 08:59 pm
D.K. Shivakumar, MLA Munirathna, RSS: ಮುನಿರತ್...
12-10-25 08:05 pm
13-10-25 10:37 pm
HK News Desk
Kerala, IT professional dead, RSS members: ಆರ...
13-10-25 05:31 pm
ಪಾಕಿಸ್ತಾನದ ಸೇನಾ ಔಟ್ ಪೋಸ್ಟ್ ಮೇಲೆ ಅಫ್ಘಾನ್ ಭೀಕರ...
12-10-25 10:19 pm
Afghan Foreign Minister, Amir Khan Muttaqi: ಮ...
11-10-25 12:52 pm
ವೆನಿಜುವೆಲಾದ ಉಕ್ಕಿನ ಮಹಿಳೆ ಮಾರಿಯೋ ಮಚಾಡೋಗೆ ನೊಬೆಲ...
10-10-25 10:37 pm
13-10-25 07:47 pm
Udupi Correspondent
ಆರೆಸ್ಸೆಸ್ ಸೇವಾ ಚಟುವಟಿಕೆ ತಿಳಿಯದ ಪ್ರಿಯಾಂಕ ಖರ್ಗೆ...
13-10-25 04:33 pm
Honey Bees Attack in Puttur: ಪುತ್ತೂರು ; ಹೆಜ್ಜ...
12-10-25 09:53 pm
ಪುತ್ತೂರಿಗೆ ಬಂದಿದ್ದ ಇಬ್ಬರು ಯುವತಿಯರು ದಿಢೀರ್ ನಾಪ...
12-10-25 06:53 pm
Uchila Fire, Mangalore: ಹೊತ್ತಿ ಉರಿದ ಉಚ್ಚಿಲದ ಗ...
12-10-25 05:46 pm
13-10-25 10:04 pm
Mangalore Correspondent
Mangalore, Loan Fraud, Fake Gold: ಆತ್ಮಶಕ್ತಿ ಸ...
12-10-25 03:52 pm
Udupi, Karkala, Youth suicide: ಖಾಸಗಿ ವಿಡಿಯೋ ಮ...
10-10-25 09:48 pm
Bangalore Caste Census, Fight: ಜಾತಿಗಣತಿ ಸಮೀಕ್...
10-10-25 07:43 pm
ಆಭರಣ ಪಾಲಿಶಿಂಗ್ ಸೋಗಿನಲ್ಲಿ ಮಹಿಳೆಯ ಸರ ಪಡೆದು 14 ಗ...
09-10-25 05:30 pm