ಬ್ರೇಕಿಂಗ್ ನ್ಯೂಸ್
24-06-24 01:19 pm HK News Desk ಕ್ರೀಡೆ
ನಾರ್ತ್ ಸೌಂಡ್, ಜೂನ್ 24: ಅಮೇರಿಕವನ್ನು ಸುಲಭವಾಗಿ ಮಣಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ಹೋರಾಡಿ ಗೆದ್ದ ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್ ಟಿ 20 ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿವೆ.
ಸೋಮವಾರ ಬೆಳಗ್ಗೆ ನಡೆದ ಜಿದ್ದಾಜಿದ್ದಿನ ಸೂಪರ್ -8 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವನ್ನು ಮೂರು ವಿಕೆಟ್ ಗಳಿಂದ ಪರಾಭವಗೊಳಿಸಿದ ದಕ್ಷಿಣ ಆಫ್ರಿಕಾ ತಂಡ ಗುಂಪಿನ ಎರಡನೇ ತಂಡವಾಗಿ ಉಪಾಂತ್ಯ ತಲುಪಿತು. ಗೆಲ್ಲಲೇಬೇಕಾದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದ ದಕ್ಷಿಣ ಆಫ್ರಿಕಾ ಬಿಗು ಬೌಲಿಂಗ್ ದಾಳಿಯ ಮೂಲಕ ಗಮನ ಸೆಳೆಯಿತು.
ಹರಿಣಗಳ ಉತ್ತಮ ದಾಳಿಯ ಮುಂದೆ ಆತಿಥೇಯರು 20 ಓವರ್ಗಳಲ್ಲಿ 8 ವಿಕೆಟ್ ಗೆ 135 ರನ್ ಮಾಡಲಷ್ಟೇ ಶಕ್ತರಾದರು. ರೋಸ್ಟನ್ ಚೇಸ್(52, 42 ಎಸೆತ, 3x4, 2x6) ಮತ್ತು ಆರಂಭಿಕ ಕೈಲ್ ಮೇಯರ್ಸ್(35) ಹರಿಣಗಳ ದಾಳಿಗೆ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು. ನಿಯಂತ್ರಿತ ಬೌಲಿಂಗ್ ಪ್ರದರ್ಶನ ನೀಡಿದ ಹರಿಣಗಳಿಗೆ ಪಂದ್ಯಶ್ರೇಷ್ಠ ತಬ್ರೈಜ್ ಶಮ್ಸಿ(27/3) ಬಲ ತುಂಬಿದರು.
ಗುರಿ ಬೆನ್ನಟ್ಟಿದ ಆಫ್ರಿಕಾ ಎರಡನೇ ಓವರ್ನಲ್ಲೇ ಆರಂಭಿಕರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ್ಯಂಡ್ರೆ ರಸೆಲ್(19/2) ತಮ್ಮ ಮೊದಲ ಓವರ್ನಲ್ಲೇ ಎರಡು ವಿಕೆಟ್ ಕಬಳಿಸಿ ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸಿದರು. ಈ ಸಂದರ್ಭದಲ್ಲಿ ಸುರಿದ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾಯಿತು. ಪಂದ್ಯ ಮರಳಿ ಆರಂಭವಾದಾಗ ಹರಿಣಗಳ ಗೆಲುವಿಗೆ 17 ಓವರ್ಗಳಲ್ಲಿ123 ರನ್ ನಿಗದಿಪಡಿಸಲಾಯಿತು. ಇದನ್ನು ಬೆನ್ನಟ್ಟಿದ ಹರಿಣಗಳಿಗೆ ಅಲ್ಝರಿ ಜೋಸೆಫ್(25/2) ಮತ್ತು ರೋಸ್ಟನ್ ಚೇಸ್ (12/3) ನಿಯಂತ್ರಣ ಹೇರಿದರು. ಆದರೆ ಟ್ರಿಸ್ಟನ್ ಸ್ಟಬ್ಸ್ (29), ಹೆನ್ರಿಕ್ ಕ್ಲಾಸೆನ್ (22) ಮತ್ತು ಮಾರ್ಕೋ ಜಾನೆಸನ್(21*) ತಂಡವನ್ನು ಗೆಲುವಿನ ಹಳಿ ದಾಟಿಸಿದರು.
ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 135/8 (ಚೇಸ್ 52, ಮೇಯರ್ಸ್ 35, ಶಮ್ಸಿ 27/3)
ದಕ್ಷಿಣ ಆಫ್ರಿಕಾ 16.1 123/7(ಸ್ಟಬ್ಸ್ 29, ಕ್ಲಾಸೆನ್ 22, ಚೇಸ್ 12/3)
ಇದಕ್ಕೆ ಮೊದಲು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಮೇರಿಕಾವನ್ನು 10 ವಿಕೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ತಲುಪಿತ್ತು.
Reigning champions England qualified for the semi-finals of the T20 World Cup after hammering the United States by 10 wickets in their concluding Super Eights match in Barbados on Sunday.
13-01-26 10:13 pm
HK News Desk
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
ಉಪನ್ಯಾಸಕರ ಟಾರ್ಚರ್ ಎಂದು ಡೆಂಟಲ್ ವಿದ್ಯಾರ್ಥಿನಿ ಆತ...
13-01-26 12:57 pm
Gadag Lakkundi, Gold: ಲಕ್ಕುಂಡಿ ನಿಧಿ ಪತ್ತೆ ಜಾಗ...
12-01-26 08:20 pm
ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ 1 ಕೆಜಿಯಷ್ಟು ನಿ...
10-01-26 10:28 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
13-01-26 10:30 pm
Mangalore Correspondent
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
13-01-26 05:28 pm
HK News Desk
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm
Sharmila Death, Murder, Bangalore: ಮಂಗಳೂರಿನ ಟ...
12-01-26 01:31 pm