ಬ್ರೇಕಿಂಗ್ ನ್ಯೂಸ್
13-04-23 01:00 pm Source: news18 ಕ್ರೀಡೆ
ಐಪಿಎಲ್ 17ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ತಂಡವನ್ನು (CSK vs RR)ಎದುರಿಸಿತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ 20 ಓವರ್ಗಳಲ್ಲಿ 8 ವಿಕೆಟ್ಗೆ 175 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿಗದಿತ 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ 3 ರನ್ಗಳಿಂದ ಸೋಲನ್ನಪ್ಪಿತು.
ಆದರೆ ಈ ಪಂದ್ಯವು ಐಪಿಎಲ್ನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಈ ವರ್ಷದಲ್ಲಿ ಒಂದು ಪಂದ್ಯದ ಲೈವ್ ವೀಕ್ಷಣೆಯ ದಾಖಲೆಯನ್ನು ನಿರ್ಮಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಹೌದು, 2ನೇ ಬ್ಯಾಟಿಂಗ್ ಮಾಡಿದ ಚೆನ್ನೈ ತಂಡದ ಪರ ಧೋನಿ ಬ್ಯಾಟಿಂಗ್ಗೆ ಆಗಮಿಸುವಾಗ ಐಪಿಎಲ್ 2023ರ ಲೈವ್ ಸ್ಟ್ರೀಮಿಂಗ್ನ್ನು ಜಿಯೋ ಸಿನಿಮಾದಲ್ಲಿ 1.5 ಕೋಟಿ ವೀಕ್ಷಣೆ ಪಡೆಯುತ್ತಿತ್ತು.
ಆದರೆ ಧೋನಿ ಕ್ರೀಸ್ಗೆ ಬಂದ ನಂತರ ಅದೆಲ್ಲಿಯೂ ಕೊನೆಯ 20 ಓವರ್ ವೇಳೆಗೆ ಈ ವೀಕ್ಷಣೆ ಬರೋಬ್ಬರಿ 2.2 ಕೋಟಿಗೆ ತಲುಪುವ ಮೂಲಕ ಈ ಸೀಸನ್ನಲ್ಇ ಅತಿ ಹೆಚ್ಚು ವೀಕ್ಷಣೆ ಪಡೆದ ಪಂದ್ಯ ಎಂಬ ದಾಖಲೆ ನಿರ್ಮಿಸಿದೆ.
ಇದಕ್ಕೂ ಮುನ್ನ ಲಕ್ನೋ ವಿರುದ್ಧ ಆರ್ಸಿಬಿ ಪಂದ್ಯದಲ್ಲಿ ಫಾಫ್ ಡುಪ್ಲೇಸಿಸ್ ಮತ್ತು ಗ್ಲೇನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಮಾಡುವಾಗ ಬರೋಬ್ಬರಿ 1.8 ಕೋಟಿ ವೀಕ್ಷಣೆ ಪಡೆಯುವ ಮೂಲಕ ಅಗ್ರಸ್ಥಾನದಲ್ಲಿತ್ತು. ಇದೀಗ ಈ ದಾಖಲೆಯನ್ನು ಚೆನ್ನೈ ಪಂದ್ಯ ಮುರಿದಿದೆ.
ಇನ್ನು, ವಿರಾಟ್ ಕೊಹ್ಲಿ ಸಹ ಬ್ಯಾಟಿಂಗ್ ಮಾಡುವ ವೇಳೆ 1.5 ಕೋಟಿ ವೀಕ್ಷಣೆ ಪಡೆಯುವ ಮೂಲಕ 4ನೇ ಅತಿ ಹೆಚ್ಚು ವೀಕ್ಷಣೆ ಪಡೆದ ಪಮದ್ಯ ಎಂಬ ಖ್ಯಾತಿಗೆ ಪಾತ್ರವಾಗಿದೆ. ಒಟ್ಟಾರೆಯಾಗಿ ಧೋನಿ ಆಗಮನದ ವೇಳೆ ಜಿಯೋ ಸಿನಿಮಾದಲ್ಲಿ ವೀಕ್ಷಣೆ ಹೆಚ್ಚುತ್ತಿದೆ.
ಧೋನಿ ಆಗಮನದ ವೇಳೆ ಈ ಬಾರಿ ಜಿಯೋ ಸಿನಿಮಾ ವೀಕ್ಷಣೆ ದಾಖಲೆಯ ಮೇಲೆ ದಾಖಲೆ ಸೃಷ್ಟಿಸುತ್ತಿದೆ. ಕಳೆದ ಕೋಲ್ಕತ್ತಾ ಪಂದ್ಯದ ವೇಳೆ ಧೋನಿ ಅಬ್ಬರದ 2 ಸಿಕ್ಸ್ ಸಿಡಿಸುವ ವೇಳೆ 1.7 ಕೋಟಿ ಹಾಗೂ ಮೊದಲ ಪಂದ್ಯದ ವೇಳೆ 1.7 ಕೋಟಿ ವೀಕ್ಷಣೆ ಪಡೆದಿತ್ತು.
highest viewership on jiocinema for ipl 2023 csk vs rr match.
10-05-25 10:40 pm
HK News Desk
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
10-05-25 11:05 pm
HK News Desk
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
India and Pakistan, Ceasefire: ಮೂರೇ ದಿನದಲ್ಲಿ...
10-05-25 08:28 pm
India-Pakistan war: ಭಾರತ - ಪಾಕಿಸ್ತಾನ ತಕ್ಷಣದಿಂ...
10-05-25 07:25 pm
Indian Military, Pakistan : ತನ್ನ ಮೂರು ವಾಯುನೆಲ...
10-05-25 01:58 pm
10-05-25 07:10 pm
Mangalore Correspondent
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm