ಬಂಟ್ವಾಳ ; ಬೈಕ್, ಚಪ್ಪಲಿ ಸೇತುವೆ ಮೇಲಿಟ್ಟು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ 

19-01-22 12:20 pm       Mangalore Correspondent   ಕರಾವಳಿ

ಬೈಕ್, ಚಪ್ಪಲಿ, ಮೊಬೈಲ್ ಅನ್ನು ನೇತ್ರಾವತಿ ಸೇತುವೆ ಮೇಲಿಟ್ಟು ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಂಟ್ವಾಳ, ಜ.19 : ಬೈಕ್, ಚಪ್ಪಲಿ, ಮೊಬೈಲ್ ಅನ್ನು ನೇತ್ರಾವತಿ ಸೇತುವೆ ಮೇಲಿಟ್ಟು ವ್ಯಕ್ತಿಯೊಬ್ಬ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಕಾರಾಜೆ ನಿವಾಸಿ ಜಲೀಲ್ ( 55) ಮೃತ ವ್ಯಕ್ತಿ. ಇವರು ಮಂಗಳವಾರ ರಾತ್ರಿ 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಲ್ಲಿ ಬೈಕ್, ಚಪ್ಪಲಿ ಹಾಗೂ ಮೊಬೈಲ್ ಕಂಡಿದೆ. ಇದನ್ನು ಕಂಡು ಯಾರೋ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದು ಸ್ಥಳೀಯರು ನದಿಯಲ್ಲಿ ಹುಡುಕಾಟ ನಡೆಸಿದ್ದಾರೆ.‌

ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ ಮಾಹಿತಿ ಪಡೆದು ವಿಚಾರಿಸಿದಾಗ ಕಾರಾಜೆ ನಿವಾಸಿ ಜಲೀಲ್ ಎಂದು ಪತ್ತೆಯಾಗಿತ್ತು. ಆದರೆ, ತಡ ರಾತ್ರಿವರೆಗೂ ಮೃತ ದೇಹ ಪತ್ತೆಯಾಗಿರಲಿಲ್ಲ. ಗುರುವಾರ ಮುಂಜಾನೆ ಸ್ಥಳೀಯ ಈಜುಗಾರ ಸತ್ತಾರ್ ಹಾಗೂ ಮೊಹಮ್ಮದ್ ನದಿಯಲ್ಲಿ ಶೋಧ ನಡೆಸಿದ್ದು ಜಲೀಲ್​ ಶವ ಪತ್ತೆಯಾಗಿದೆ. ಘಟನೆ ಕುರಿತು ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Manglaore suicide, Man jumps from Netravathi bridge in Bantwal. Tuesday last night around 11 PM he was seen jumping from the bridge. The deceased has been identified as Jalil (55).