ಪಿಲಾರಿನಲ್ಲಿ ವೃದ್ಧೆ ಬಾವಿಗೆ ಬಿದ್ದು ಸಾವು ; ಆತ್ಮಹತ್ಯೆ ಶಂಕೆ, ಕಾಲು ಜಾರಿ ಬಿದ್ದರೆಂದು ಸರ್ಟಿಫಿಕೇಟ್ ಕೊಟ್ಟ ಕುಟುಂಬಸ್ಥರು !

17-01-22 11:12 pm       Mangalore Pillar Woman found dead in well, Family involvement suspected of Murder   ಕರಾವಳಿ

ಸೋಮೇಶ್ವರ ಗ್ರಾಮದ ಪಿಲಾರು ಶಾಲೆಯ ಬಳಿ 85 ರ ವೃದ್ಧೆಯೋರ್ವರು ಬಾವಿಗೆ ಬಿದ್ದು ಇಂದು ಮಧ್ಯಾಹ್ನ ಅಸಹಜ ಸಾವನ್ನಪ್ಪಿದ್ದು , ಕುಟುಂಬಸ್ಥರು ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೇ ಆಕಸ್ಮಿಕ ಸಾವೆಂದು ಬಿಂಬಿಸಲು ಹೊರಟಿದ್ದಾರೆ.

ಉಳ್ಳಾಲ, ಜ.17: ಸೋಮೇಶ್ವರ ಗ್ರಾಮದ ಪಿಲಾರು ಶಾಲೆಯ ಬಳಿ 85 ರ ವೃದ್ಧೆಯೋರ್ವರು ಬಾವಿಗೆ ಬಿದ್ದು ಇಂದು ಮಧ್ಯಾಹ್ನ ಅಸಹಜ ಸಾವನ್ನಪ್ಪಿದ್ದು , ಕುಟುಂಬಸ್ಥರು ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೇ ಆಕಸ್ಮಿಕ ಸಾವೆಂದು ಬಿಂಬಿಸಲು ಹೊರಟಿದ್ದಾರೆ.

ಪಿಲಾರು ಸರಕಾರಿ ಶಾಲಾ ಬಳಿಯ ದಿ.ಮಂಜಪ್ಪ ಮೂಲ್ಯ ಅವರ ಪತ್ನಿ ಕಲ್ಯಾಣಿ(85) ಬಾವಿಗೆ ಬಿದ್ದು ಮೃತಪಟ್ಟ ವೃದ್ಧೆ. ಪತಿ ಮಂಜಪ್ಪ ಅವರು 23 ವರ್ಷಗಳ ಹಿಂದೆ ಮೃತಪಟ್ಟಿದ್ದು ಕಲ್ಯಾಣಿ ಅವರು ತನ್ನ ಹಿರಿಯ ಮಗ ಉಮೇಶ್ ಅವರೊಂದಿಗೆ ಪಿಲಾರಿನ ಮನೆಯಲ್ಲಿ ವಾಸವಿದ್ದರು.


ಒಂದು ತಿಂಗಳ ಹಿಂದೆ ಕಲ್ಯಾಣಿ ಅವರು ತನ್ನ ಎರಡನೇ ಮಗ ಶಿಫಾಲಿ ಟ್ರಾವೆಲ್ಸ್ ಬಸ್ಸು ಮಾಲಕ ರಾಮಚಂದ್ರ ಅವರ ಮಂಗಳೂರಿನ ಮನೆಗೆ ನೆಲೆಸಲು ತೆರಳಿದ್ದರು. ಇಂದು ಮಧ್ಯಾಹ್ನ ಅಚಾನಕ್ಕಾಗಿ ರಾಮಚಂದ್ರ ಅವರು ತಾಯಿ ಕಲ್ಯಾಣಿ ಅವರನ್ನ ಪಿಲಾರಿನ ಮನೆಗೆ ತಂದು ಬಿಟ್ಟಿದ್ದರು. ಆನಂತರ ಕೆಲ ಹೊತ್ತಿನಲ್ಲಿ ಘಟನೆ ನಡೆದಿತ್ತು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬಾವಿಯಲ್ಲಿದ್ದ ಮೃತದೇಹವನ್ನ ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಕಲ್ಯಾಣಿ ಅವರು ಬಾವಿಗೆ ಹೇಗೆ ಬಿದ್ದರೆಂದು ನೋಡಿದ ಪ್ರತ್ಯಕ್ಷದರ್ಶಿಗಳು ಯಾರೂ ಇಲ್ಲ. ಅವರು ಬಿದ್ದು ಮೃತಪಟ್ಟ ಬಾವಿ ಆವರಣವೂ ಆಯತಪ್ಪಿ ಬೀಳದಷ್ಟು ರಕ್ಷಣಾತ್ಮಕ ಸ್ಥಿತಿಯಲ್ಲಿದೆ. ಮೃತರ ಮರಣೋತ್ತರ ಪರೀಕ್ಷೆ ವರದಿ ಬರುವ ಮೊದಲೇ ಕುಟುಂಬಸ್ಥರು ಕಲ್ಯಾಣಿ ಅವರು ನರರೋಗದಿಂದ ಬಳಲುತ್ತಿದ್ದು ದೇಹ ವಾಲಿ ಬಾವಿಗೆ ಬಿದ್ದು ಸತ್ತಿರುವುದಾಗಿ ಬಿಂಬಿಸಲು ಹೊರಟಿದ್ದಾರೆ. ದೇಹವಾಲಿ ಬಾವಿಗೆ ಬಿದ್ದಿದ್ದರೆ ಅವರ ದೇಹ ಛಿದ್ರವಾಗುವ ಸಾಧ್ಯತೆ ಇರುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

Mangalore Pillar old Woman found dead in well, Family involvement suspected of Murder