ಪಿಲಾರಿನಲ್ಲೀಗ ಭಾರೀ ಸರ್ಪಗಳ ಹಾವಳಿ ; ಹಿಡಿಯಲು ಹೋದ ಮಾಜಿ ಯೋಧನಿಗೆ ಕಡಿದ ನಾಗ ಸರ್ಪ, ಅಪಾಯದಿಂದ ಪಾರು 

10-01-22 10:24 pm       Mangalore Correspondent   ಕರಾವಳಿ

ಸೋಮೇಶ್ವರ ಗ್ರಾಮದ ಪಿಲಾರಿನಲ್ಲೀಗ ಸರ್ಪಗಳ ಹಾವಳಿ ಶುರುವಾಗಿದ್ದು ಮನೆಗೆ ಬಂದ ಸರ್ಪವನ್ನ ಹಿಡಿಯಲು ಹೋದ ಮಾಜಿ ಯೋಧನಿಗೆ ಹಾವು ಕಡಿದ ಘಟನೆ ನಡೆದಿದೆ.  

Photo credits : Headline Karnataka

ಉಳ್ಳಾಲ, ಜ.10 : ಸೋಮೇಶ್ವರ ಗ್ರಾಮದ ಪಿಲಾರಿನಲ್ಲೀಗ ಸರ್ಪಗಳ ಹಾವಳಿ ಶುರುವಾಗಿದ್ದು ಮನೆಗೆ ಬಂದ ಸರ್ಪವನ್ನ ಹಿಡಿಯಲು ಹೋದ ಮಾಜಿ ಯೋಧನಿಗೆ ಹಾವು ಕಡಿದ ಘಟನೆ ನಡೆದಿದೆ.  

ಸೋಮೇಶ್ವರ ಗ್ರಾಮದ ಪಿಲಾರು ನಿವಾಸಿ ಮಾಜಿ ಯೋಧ ಸದಾನಂದ ಗಟ್ಟಿ ಯಾನೆ ಬಾಬು ಗಟ್ಟಿ ಎಂಬವರು ಹಾವಿಂದ ಕಡಿತಕ್ಕೊಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೋಮೇಶ್ವರ ಗ್ರಾಮದ ಪಿಲಾರು ಮಹಾಲಕ್ಮೀ ಮಂದಿರ ಬಳಿಯ ದಿವಂಗತ ಪೊಲೀಸ್ ತ್ಯಾಂಪಣ್ಣ ಶೆಟ್ಟಿ ಅವರ ಜಮೀನಿನ ಪೊದೆಗಳನ್ನ ಕಡಿದು ಜೆಸಿಬಿ ಯಂತ್ರದ ಮೂಲಕ ಸಮತಟ್ಟುಗೊಳಿಸಲಾಗಿದೆ. ಅನೇಕ ವರುಷಗಳಿಂದ ಇದ್ದ ಪೊದೆಗಳನ್ನ ಏಕಾಏಕಿ ಕಡಿದು ಸಮತಟ್ಟುಗೊಳಿಸಿದ ಪರಿಣಾಮ ಅಲ್ಲಿದ್ದ ಬೃಹದಾಕಾರದ ಸರ್ಪಗಳು ದಿಕ್ಕಾಪಾಲಾಗಿ ನೆರೆಹೊರೆಯ ಮನೆಗಳ ಆವರಣಕ್ಕೆ ಹೊಕ್ಕುತ್ತಿವೆ. 

ಇಂದು ಮಧ್ಯಾಹ್ನ ಸದಾನಂದ ಗಟ್ಟಿ ಅವರ ಮನೆ ಆವರಣಕ್ಕೆ ಬೃಹತ್ ಸರ್ಪ ಹೊಕ್ಕಿದ್ದು ಗಟ್ಟಿ ಅವರು ಅದನ್ನ ಹಿಡಿದು ಗೋಣಿ ಚೀಲದಲ್ಲಿ ಹಾಕಿದ್ದಾರೆ. ಈ ನಡುವೆ ಸರ್ಪವು ಗಟ್ಟಿ ಅವರ ಬೆರಳಿಗೆ ಕಡಿದಿದ್ದು ಕೂಡಲೇ ಅವರನ್ನ ಮಂಗಳೂರಿನ ಪಾಧರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಭಾರತೀಯ ಸೇನೆಯಲ್ಲಿ ಪಳಗಿದ್ದ ಸದಾನಂದ ಗಟ್ಟಿ ಅವರು ಈ ಮೊದಲೂ ಅನೇಕ ವಿಷಕಾರಿ ಸರ್ಪಗಳನ್ನ ಹಿಡಿದು ಕಾಡಿಗೆ ಬಿಟ್ಟಿದ್ದರು. ಆದರೆ ಇಂದು ಸರ್ಪವನ್ನು ಹಿಡಿಯಲು ಹೋದ ಗಟ್ಟಿ ಅವರಿಗೆ ಸರ್ಪ ಕಡಿದಿದೆ. 

ಹಳೆಯ ಪೊದೆಗಳನ್ನ ಕಡಿದು ಸಮತಟ್ಟುಗೊಳಿಸಿದ ಕಾರಣ ಈಗಾಗಲೇ ಪರಿಸರದಲ್ಲಿ ನಾಲ್ಕೈದು ಸರ್ಪಗಳು ದಿಕ್ಕಿಲ್ಲದೆ ಹರಿದಾಡುತ್ತಿದ್ದು ಇನ್ನಷ್ಟು ಸರ್ಪಗಳು ಬರುವ ಸಾಧ್ಯತೆಗಳಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಇಂದು ಮಧ್ಯಾಹ್ನ ಮಾಜಿ ಯೋಧ ಸದಾನಂದ ಗಟ್ಟಿ ಅವರಿಗೆ ಹಾವು ಕಡಿದ ನಂತರ ಅದೇ ಪರಿಸರದ ಮನೆಗಳ ಆವರಣಗಳಲ್ಲಿ ನಾಲ್ಕು ಸರ್ಪಗಳು ಕಾಣ ಸಿಕ್ಕಿವೆ.

CLICK FOR VIDEO

Mangalore poisonous Snake bites man while catching in Pillar. Someshwar Resident X Military Man Sadanada Shetty was the man who was bitten by snake. He has been admitted to Fr Mullers Hospital in the city.