ಬ್ರೇಕಿಂಗ್ ನ್ಯೂಸ್
13-09-20 08:03 pm Mangalore Reporter ಕರಾವಳಿ
ಮಂಗಳೂರು, ಸೆಪ್ಟಂಬರ್ 13: ರಾಜ್ಯದಲ್ಲಿ ಅತಿ ಹೆಚ್ಚು ಆದಾಯ ಬರುವ ದೇಗುಲ ಎಂದೇ ಖ್ಯಾತಿ ಪಡೆದಿರುವ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆಯಿಂದ ಎಲ್ಲ ಸೇವೆಗಳು ಭಕ್ತರಿಗೆ ತೆರೆದುಕೊಳ್ಳಲಿದೆ. ಆದರೆ ಸೇವೆಗಳನ್ನು ಮಿತಿಗೊಳಿಸಿದ್ದು ಭಕ್ತರ ಆಕ್ಪೇಪಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಎಲ್ಲ ಮುಜರಾಯಿ ಮತ್ತು ಖಾಸಗಿ ದೇವಸ್ಥಾನಗಳಲ್ಲಿ ಈ ತಿಂಗಳ ಆರಂಭದಿಂದಲೇ ಪೂಜೆ, ಸೇವೆ, ಪ್ರಸಾದಕ್ಕೆ ಸರಕಾರ ಅವಕಾಶ ನೀಡಿತ್ತು. ಆದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತ್ರ ಅಧಿಕಾರಿಗಳ ಕೊರತೆ ನೆಪದಲ್ಲಿ ಸೇವೆಗಳಿಗೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಅಲ್ಲಿಗೆ ಬರುವ ಸಾವಿರಾರು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲ್ಲ ಕಡೆ ಸೇವೆಗಳು ಆರಂಭಗೊಂಡಿದ್ದರೆ ಕುಕ್ಕೆಯಲ್ಲಿ ಮಾತ್ರ ಯಾಕೆ ನಿರ್ಬಂಧ ಎನ್ನುವ ಪ್ರಶ್ನೆ ಮುಂದಿಟ್ಟಿದ್ದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪ ಸಂಸ್ಕಾರ ಸೇವೆ, ಆಶ್ಲೇಷ ಬಲಿ ಸೇವೆಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಅದನ್ನು ಪುನರ್ ಆರಂಭಿಸಲು ಒತ್ತಾಯ ಕೇಳಿಬಂದಿತ್ತು.
ಭಕ್ತರ ಒತ್ತಾಯಕ್ಕೆ ಮಣಿದ ದೇಗುಲದ ಆಡಳಿತಾಧಿಕಾರಿಗಳು ಸೆ.14ರಿಂದ ಅಧಿಕೃತವಾಗಿ ಸರ್ಪ ಸಂಸ್ಕಾರ ಮತ್ತು ಆಶ್ಲೇಷ ಬಲಿ ಸೇವೆಗಳಿಗೆ ಅವಕಾಶ ನೀಡಿದೆ. ಆದರೆ, ಕೊರೊನಾ ನಿರ್ಬಂಧ ಹಿನ್ನೆಲೆಯಲ್ಲಿ ದಿನಕ್ಕೆ ಕೇವಲ 30 ಸರ್ಪ ಸಂಸ್ಕಾರ ಸೇವೆಗಳನ್ನು ನಡೆಸಲು ಮಾತ್ರ ಅವಕಾಶ ನೀಡಲಾಗಿದೆ. ದಿನ ಒಂದರಲ್ಲಿ ಹಿಂದೆಲ್ಲಾ 180ರಿಂದ 210 ಸರ್ಪ ಸಂಸ್ಕಾರ ಸೇವೆ ನಡೆಸಲಾಗುತ್ತಿತ್ತು. ಕಳೆದ ಆರು ತಿಂಗಳಿನಿಂದ ಸೇವೆಗಳು ಬಂದ್ ಆಗಿದ್ದರಿಂದ ಈಗ ಬುಕ್ಕಿಂಗ್ ಆದ ಸೇವೆಗಳೇ ಬಹಳಷ್ಟಿದೆ. ಹೀಗಾಗಿ ದಿನದಲ್ಲಿ 30ಕ್ಕಿಂತ ನೂರು ಆದರೂ ಮಾಡಲು ಅವಕಾಶ ನೀಡಬೇಕಿತ್ತು ಎಂಬ ಮಾತು ಕೇಳಿಬಂದಿದೆ.
ಅನಧಿಕೃತ ಸೇವೆಗಳಿಗೆ ರಹದಾರಿ ?
ಈಗಾಗ್ಲೇ ದೇವಸ್ಥಾನದಲ್ಲಿ ಅಧಿಕೃತ ಸೇವೆಗಳು ಇಲ್ಲದಿದ್ದರೂ ದೇವಸ್ಥಾನದ ಹೊರಗಡೆ ಪ್ರತ್ಯೇಕವಾಗಿ ಸೇವೆಗಳನ್ನು ನಡೆಸಲಾಗುತ್ತಿತ್ತು ಅನ್ನೋ ವಿಚಾರ ಅಲ್ಲಿನ ಸ್ಥಳೀಯರಿಂದ ಕೇಳಿಬರುತ್ತಿದೆ. ಖಾಸಗಿಯಾಗಿ ಅರ್ಚಕರು ಭಕ್ತರನ್ನು ಕರೆದೊಯ್ದು ಸೇವೆಗಳನ್ನು ಮಾಡಿಸುತ್ತಿದ್ದರು. ಅದಕ್ಕಾಗಿ ಭಾರೀ ಮೊತ್ತವನ್ನೂ ಪಡೆಯುತ್ತಿದ್ದರು ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಅಧಿಕಾರಿಗಳಿಗೂ ಸುದ್ದಿ ಮುಟ್ಟಿಸಿದ್ದಾರೆ ಎನ್ನಲಾಗ್ತಿದೆ. ಅದೇ ಕಾರಣವೋ ಏನೋ, ಈಗ ದಿಢೀರ್ ಆಗಿ ಸೇವೆಗಳನ್ನು ನಡೆಸಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಆದರೆ, ದೇವಸ್ಥಾನದಲ್ಲಿ ಸೇವೆಗಳಿಗಾಗಿ ಪ್ರತ್ಯೇಕ ಯಾಗಶಾಲೆ, ಭೋಜನ ಶಾಲೆ ಇದ್ದು ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸೇವೆಗಳನ್ನು ನಡೆಸಲು ಅವಕಾಶ ಇರುವಾಗ ದಿನದಲ್ಲಿ 30 ಮಂದಿಗೆ ಮಾತ್ರ ಸೀಮಿತಗೊಳಿಸಿರುವುದು ಅನಧಿಕೃತ ಸೇವೆಗಳಿಗೆ ವೇದಿಕೆ ಕಲ್ಪಿಸಿದಂತಾಗಲ್ಲವೇ ಎನ್ನುವ ಮಾತನ್ನು ಸ್ಥಳೀಯ ಭಕ್ತರು ಕೇಳುತ್ತಿದ್ದಾರೆ.
ಭಕ್ತರಿಗಿಲ್ಲ ಊಟದ ವ್ಯವಸ್ಥೆ
ಕಟೀಲು, ಕೊಲ್ಲೂರು, ಧರ್ಮಸ್ಥಳಗಳಲ್ಲಿ ಭಕ್ತರಿಗೆ ಊಟದ ವ್ಯವಸ್ಥೆ ಆರಂಭಗೊಂಡಿದ್ದರೂ ಕುಕ್ಕೆಯಲ್ಲಿ ಅನ್ನಪ್ರಸಾದಕ್ಕೆ ಅಧಿಕಾರಿಗಳು ಇನ್ನೂ ಅವಕಾಶ ಕೊಟ್ಟಿಲ್ಲ. ಇದರಿಂದ ಭಕ್ತರನ್ನು ಸುಲಿಗೆ ಮಾಡಲು ಮತ್ತೊಂದು ಅವಕಾಶ ಕೊಟ್ಟಂತಾಗಿದೆ ಎನ್ನುವ ಮಾತೂ ಕೇಳಿಬಂದಿದೆ. ಸರ್ಪ ಸಂಸ್ಕಾರ ಸೇವೆ ನಡೆಸುವ 30 ಕುಟುಂಬಗಳಿಗೆ ಮಾತ್ರ ಊಟ, ಉಪಹಾರದ ವ್ಯವಸ್ಥೆ ಮಾಡಲಾಗಿದೆ.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
20-12-25 01:51 pm
HK News Desk
ಮರಳುಗಾಡಿನ ನಗರಿ ದುಬೈ, ಅಬುಧಾಬಿಯಲ್ಲಿ ಭಾರೀ ಗಾಳಿ-...
19-12-25 02:40 pm
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
20-12-25 01:09 pm
Mangalore Correspondent
ಇಂಟರ್ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಮಂಗಳೂ...
19-12-25 09:46 pm
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm