ಬ್ರೇಕಿಂಗ್ ನ್ಯೂಸ್
06-09-20 10:57 pm Headline Karnataka News Network ಕರಾವಳಿ
ಮಂಗಳೂರು, ಸಪ್ಟೆಂಬರ್ 06: ಶಿಕ್ಷಕ ಕೇವಲ ಪಠ್ಯ ಪುಸ್ತಕಕಕ್ಕೆ ಸೀಮಿತವಾಗುವುದಲ್ಲ. ಪಠ್ಯೇತರವಾಗಿಯೂ ಶಿಷ್ಯ ಸಂಬಂಧವನ್ನು ಜೀವನಪೂರ್ತಿ ಮುಂದುವರಿಸುವಂತಹ ಮಧುರ ಬಾಂಧವ್ಯ ಬೆಳೆಸಿದಾಗ ಶಿಕ್ಷಕರ ಜೀವನ ಸಾರ್ಥಕವಾಗುತ್ತದೆ ಎಂದು ಕಾನತ್ತಡ್ಕ ಶ್ರೀ ಕೃಷ್ಣ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ಕಾನ ಈಶ್ವರ ಭಟ್ ಹೇಳಿದರು.
ಅವರು ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ವಿಟ್ಲ ರಾಜಧಾನಿ ಜ್ಯುವೆಲ್ಲರ್ಸ್ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಮಾತನಾಡಿದರು.
ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆಯ ಶಿಕ್ಷಕರಾದ ಕಾನ ಈಶ್ವರ ಭಟ್, ಪಂಬತ್ತಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಅಬ್ಬೊಕ್ಕರೆ ಬ್ಯಾರಿ ಕರೋಪಾಡಿ, ವಿಟ್ಲ ಸಂತರೀಟಾ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಜೂಲಿಯಾನಾ ಮೇರಿ ಲೋಬೋ ಮಂಗಳಪದವು ಅವರನ್ನು ಶಿಕ್ಷಕರ ದಿನಾಚರಣೆ ಪ್ರಯುಕ್ತ ಸನ್ಮಾನಿಸಲಾಯಿತು. ರಾಜಧಾನಿ ಜ್ಯುವೆಲ್ಲರ್ಸ್ ಮಾಲಕರಾದ ತಾನಾಜಿ ಬಾಬರ್ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಶುಭ ಹಾರೈಸಿದರು. ಶಾಲೆಯಿಂದ ನಿರ್ಗಮಿಸಿ ಪ್ರೌಢಶಾಲೆಗೆ ತೆರಳುತ್ತಿರುವ ಹಿರಿಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಉಕ್ಕುಡ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಶೀದ್ ವಿಟ್ಲ ಮಾತನಾಡಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರು, ಅವರ ತಂದೆಗೆ ಅರ್ಚಕರಾಗಬೇಕೆಂಬ ಮನಸ್ಸಿತ್ತು. ಆದರೆ ರಾಧಾಕೃಷ್ಣನ್ ಅವರಿಗೆ ಶಿಕ್ಷಕರಾಗಬೇಕೆಂಬ ಹುಮ್ಮಸ್ಸು. ಈ ವಿಚಾರದಲ್ಲಿ ತಂದೆ ಸೋತರು. ಸರ್ವಪಳ್ಳಿ ರಾಧಾಕೃಷ್ಣನ್ ಶಿಕ್ಷಕರಾದ ಕಾರಣ ನಾವಿಂದು ಶಿಕ್ಷಕರ ದಿನವನ್ನು ಆಚರಿಸುತ್ತಿದ್ದೇವೆ ಎಂದರು. ಉಕ್ಕುಡ ಪಬ್ಲಿಕ್ ಸ್ಕೂಲ್ ಪ್ರಭಾರ ಮುಖ್ಯ ಶಿಕ್ಷಕರಾದ ಆಯಿಷತಿಲ್ ಆರಿಫಾ, ಶಿಕ್ಷಕರಾದ ದಿವ್ಯಶ್ರೀ, ಜ್ಯೋತ್ಸ್ನಾ, ಆಬಿದಾ, ರಶೀದಾ ಬೇಗಮ್, ಪವಿತ್ರ ಹಾಗೂ ಶಿಕ್ಷಕೇತರ ಸಿಬ್ಬಂದಿ ಪರಮೇಶ್ವರಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಟಿ.ಎಚ್.ಎಂ.ಎ., ಕಾರ್ಯದರ್ಶಿ ಹನೀಫ್ ಕುದ್ದುಪದವು, ಕೋಶಾಧಿಕಾರಿ ಅನ್ವರ್ ಉಕ್ಕುಡ, ಸಂಚಾಲಕ ಅಬೂಬಕರ್ ಟೆಲಿಫೋನ್, ಉಪಾಧ್ಯಕ್ಷ ಅಬ್ಬಾಸ್ ಕಲ್ಲಂಗಳ, ಜೊತೆ ಕಾರ್ಯದರ್ಶಿ ಮುನೀರ್ ದರ್ಬೆ, ಸದಸ್ಯ ಸಿದ್ದೀಕ್ ಆಲಂಗಾರು, ಉಕ್ಕುಡ ಬದ್ರಿಯಾ ಜುಮಾ ಮಸೀದಿ ಕೋಶಾಧಿಕಾರಿ ಅಬ್ದುಲ್ ರಹಿಮಾನ್ ಹಾಜಿ ಕೇಪು, ಅಬ್ದುರಹ್ಮಾನ್ ದರ್ಬೆ, ಅಬೂಬಕರ್ ಮೆಹರಾಜ್, ಡಿ.ಕೆ. ಅಬ್ದುಲ್ ಖಾದರ್, ಮಹಮೂದ್ ಕಾನತ್ತಡ್ಕ, ಹಮೀದ್ ಜಿಸ್ತಿಯಾ, ರಿಝ್ವಾನ್ ಉಕ್ಕುಡ, ಹಸನ್ ಕಲ್ಲಂಗಳ, ಅಲಾಮ್ ಜಿಸ್ತಿಯಾ ಉಪಸ್ಥಿತರಿದ್ದರು. ಆಯಿಷತಿಲ್ ಆರಿಫಾ ಸ್ವಾಗತಿಸಿ ನಿರೂಪಿಸಿದರು. ಹಳೆ ವಿದ್ಯಾರ್ಥಿಗಳಾದ ಶೈಮಾ ಆಲಂಗಾರು, ಝುಬೈರಾ ಆಲಂಗಾರು, ಮೆಹಶೂಫ ಉಕ್ಕುಡ ಪ್ರಾರ್ಥಿಸಿದರು.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm