ಬ್ರೇಕಿಂಗ್ ನ್ಯೂಸ್
24-05-21 06:00 pm Mangalore Correspondent ಕರಾವಳಿ
ಉಳ್ಳಾಲ, ಮೇ 24: ಪ್ರಸಿದ್ಧ ಕಾರಣಿಕ ಕ್ಷೇತ್ರ ಕೊಂಡಾಣ ಶ್ರೀ ಪಿಲಿಚಾಮುಂಡಿ, ಬಂಟ, ಮುಂಡತ್ತಾಯ ದೈವಸ್ಥಾನದ ಆಡಳಿತದ ಒಳಗಿನ ತಕರಾರು ಮತ್ತೆ ಬೀದಿಗೆ ಬಂದಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೈವಸ್ಥಾನದ ಆಡಳಿತಕ್ಕೆ ಇತ್ತೀಚೆಗೆ ಸಮಿತಿ ನೇಮಕವಾಗಿದ್ದರೂ, ಆನುವಂಶಿಕ ಮೊಕ್ತೇಸರನೆಂಬ ನೆಲೆಯಲ್ಲಿ ಪ್ರತ್ಯೇಕ ವ್ಯಕ್ತಿ ಕಾರುಬಾರು ನಡೆಸುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕೊಂಡಾಣ ದೈವಸ್ಥಾನದ ನೂತನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರು, ಸ್ವಾತಂತ್ರ್ಯ ಪೂರ್ವದ 1931ರಿಂದಲೂ ಕೊಂಡಾಣ ದೈವಸ್ಥಾನ ಹಿಂದು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಟ್ಟಿದೆ. ಆದರೆ, ಕ್ಷೇತ್ರದ ಆರ್ ಟಿಸಿ ದಾಖಲೆಯಾಗಲೀ, ಭಂಡಾರಮನೆಯ ಸೊತ್ತಿನ ವಿಚಾರವಾಗಲೀ ಆಡಳಿತದ ಕೈಯಲ್ಲಿ ಸ್ಪಷ್ಟವಾಗಿ ಇಲ್ಲ. ಹಿಂದಿನ ಕಾಲದಲ್ಲಿ ದೈವಸ್ಥಾನಕ್ಕೆ 35 ಎಕ್ರೆ ಜಾಗ ಇತ್ತು. ಈಗ 99 ಸೆಂಟ್ ಮಾತ್ರ ಇದೆ. ಹಿಂದಿನ ಆಡಳಿತ ಸಮಿತಿ ಬರ್ಖಾಸ್ತು ಆದ ಸುದೀರ್ಘ ಅವಧಿಯ ಬಳಿಕ ಎರಡು ತಿಂಗಳ ಹಿಂದೆ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಹೀಗಿದ್ದರೂ, ಈ ಜಾಗಕ್ಕಾಗಲೀ, ವ್ಯವಸ್ಥಾಪನಾ ಸಮಿತಿಗಾಗಲೀ ಸಂಬಂಧಪಡದ ಮುತ್ತಣ್ಣ ಶೆಟ್ಟಿ ಎಂಬ ವ್ಯಕ್ತಿ ತಾನೇ ಅನುವಂಶಿಕ ಗುರಿಕಾರರೆಂದು ಹೇಳಿಕೊಂಡು ವ್ಯವಸ್ಥಾಪನಾ ಸಮಿತಿಯ ನಿರ್ಣಯಗಳನ್ನು ಉಲ್ಲಂಘಿಸಿ ಕ್ಷೇತ್ರದ ಸಂಪ್ರದಾಯಗಳಿಗೆ ಅಪಚಾರ ಎಸಗುತ್ತಿದ್ದಾರೆ. ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸರಿಗೆ ಮತ್ತು ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಬಾರಿ ಕೊರೊನಾ ಕಾರಣದಿಂದ ನಿಂತು ಹೋಗಿದ್ದ ಜಾತ್ರೆಗೆ ಪರ್ಯಾಯವಾಗಿ ಈ ಬಾರಿ ಹೆಚ್ಚುವರಿ ಕಟ್ಟೆ ಜಾತ್ರೆಯನ್ನು ಮಾರ್ಚ್ ತಿಂಗಳ 27 ರಂದು ನಡೆಸಿದ್ದೇವೆ. ಕ್ಷೇತ್ರದ ಬಂಡಿ ಕೊಟ್ಯವನ್ನು ನೂತನವಾಗಿ ನಿರ್ಮಿಸಿದ್ದು , ಸ್ಥಳಾಂತರಕ್ಕಾಗಿ ದೈವದ ನುಡಿಯನ್ನು ನೇಮ ನಡೆಯುವ ಸಂದರ್ಭದಲ್ಲಿ ಭಿನ್ನವಿಸಿಕೊಳ್ಳಲಾಗಿತ್ತು. ಆಗ ಏಕಾಏಕಿ ಮುತ್ತಣ್ಣ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷನಾದ ತನ್ನನ್ನು ಏಕ ವಚನದಲ್ಲಿ ಅವಮಾನಿಸಿದ್ದರು. ಆ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿತ್ತು. ಎಪ್ರಿಲ್ 27 ರಂದು ಶ್ರೀ ಕ್ಷೇತ್ರದಲ್ಲಿ ಜರಗುವ ವಾರ್ಷಿಕ ನಾಗತಂಬಿಲ ಸೇವೆಗೆ ವ್ಯವಸ್ಥಾಪನಾ ಸಮಿತಿಯಿಂದ ಪೂಜಾ ಸಾಮಾಗ್ರಿಗಳನ್ನು ತಂದು ವ್ಯವಸ್ಥೆ ಮಾಡಲಾಗಿತ್ತು. ವರ್ಷಂಪ್ರತಿ ಬರುವ ಅರ್ಚಕರು ಹಾಗೂ ಸಮಿತಿಯವರು, ಊರವರು ಬರುವ ಮೊದಲೇ ಮುತ್ತಣ್ಣ ಶೆಟ್ಟಿ ತಾವು ಕರೆದುಕೊಂಡು ಬಂದ ಅರ್ಚಕರಲ್ಲಿ ಅದೇ ಸಾಮಗ್ರಿಗಳನ್ನು ಉಪಯೋಗಿಸಿ ಪೂಜೆ ಮಾಡಿಸಿರುವುದು ಸರಕಾರ ನೇಮಿಸಿದ ವ್ಯವಸ್ಥಾಪನಾ ಸಮಿತಿಗೆ ಮಾಡಿರುವ ದ್ರೋಹವಾಗಿದ್ದು ಆ ಬಗ್ಗೆಯೂ ದೂರು ದಾಖಲು ಮಾಡಿದ್ದೇವೆ. ಸಂಬಂಧಪಟ್ಟ ಧಾರ್ಮಿಕ ಇಲಾಖೆಗಳಿಗೂ ದೂರು ನೀಡಿದ್ದರೂ ಯಾವುದೇ ಶಿಸ್ತು ಕ್ರಮ ನಡೆದಿಲ್ಲ ಎಂದು ಕೃಷ್ಣ ಶೆಟ್ಟಿ ತಾಮಾರ್ ಹೇಳಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ದಾಖಲೆ ಪ್ರಕಾರ, ಇಲ್ಲಿ ಯಾವುದೇ ಆನುವಂಶಿಕ ಮೊಕ್ತೇಸರ ಎಂಬ ಹುದ್ದೆ ಇಲ್ಲ. ಭಂಡಾರಮನೆಯ ಕೀಲಿ ಕೈಯನ್ನು ಹತ್ತು ವರ್ಷಗಳ ಹಿಂದೆ ಜಾಗದ ಮಾಲೀಕರಾದ ಸಂಪಕ್ಕ ಶೆಡ್ತಿಯವರು ಅಂದಿನ ಅಧ್ಯಕ್ಷ ದೇವಾನಂದ ಶೆಟ್ಟಿಯವರಿಗೆ ಭಂಡಾರ ಮನೆಯಲ್ಲಿ ಪ್ರಾರ್ಥನೆಯೊಂದಿಗೆ ನೀಡಿದ್ದು , ಸಮಿತಿ ಬದಲಾಗುತ್ತಿದ್ದ ಹಾಗೆ ಧಾರ್ಮಿಕ ಇಲಾಖೆಯಿಂದ ನೂತನ ಸಮಿತಿಗೆ ನೀಡಿರುತ್ತಾರೆ. ಹಳೆಯ ಬೀಗಗಳನ್ನು ಬದಲಾಯಿಸುವ ಬಗ್ಗೆಯೂ ಧಾರ್ಮಿಕ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದರು. ಅದರಂತೆ ಮೇ 14 ರಂದು ಸಂಕ್ರಮಣ ದಿವಸ, ಅರ್ಚಕ ನಾರಾಯಣ ಮೂಲ್ಯರು ಪೂಜೆ ಮುಗಿಸಿದ ಮೇಲೆ ಸ್ವತಃ ಅರ್ಚಕರೇ ಬೀಗ ಹಾಕಿರುತ್ತಾರೆ. ಎರಡು ದಿನ ಕಳೆದು ಆ ಬೀಗದ ಮೇಲೆ ಮುತ್ತಣ್ಣ ಶೆಟ್ಟಿ ಬೇರೆ ಬೀಗವನ್ನು ಹಾಕಿದ್ದು 22 ರಂದು ಬೆಳಗ್ಗೆ ಗಣಹೋಮದ ಸಂದರ್ಭದಲ್ಲಿ ಗಮನಕ್ಕೆ ಬಂದಿದೆ. ಕೊರೊನಾ ಕಾರಣದಿಂದ ನಿಲ್ಲಿಸಲ್ಪಟ್ಟ ಜಾತ್ರೆಗೆ ಬದಲಾಗಿ ಹೋಮ ನಡೆಸಲು ಸಿದ್ಧತೆ ಮಾಡಲಾಗಿತ್ತು. ಅರ್ಚಕರಾದ ಕಾರಂತರು ಮತ್ತು ಸಮಿತಿಯವರು ಹೊರಭಾಗದಲ್ಲಿ ಪ್ರಾರ್ಥನೆ ನಡೆಸಿ ಬಂದಿರುತ್ತಾರೆ. ಮೇ 23 ರಂದು ಬೇರೆ ಅರ್ಚಕರನ್ನು ಕರೆದುಕೊಂಡು ಬಂದು ಇದೇ ಮುತ್ತಣ್ಣ ಶೆಟ್ಟಿ ವ್ಯವಸ್ಥಾಪನಾ ಸಮಿತಿ ಹಾಕಿದ ಬಾಗಿಲ ಬೀಗವನ್ನು ಒಡೆದು ಅಕ್ರಮವಾಗಿ ಪ್ರವೇಶಿಸಿ ಪೂಜೆ ನೆರವೇರಿಸಿದ್ದು ಈ ಬಗ್ಗೆಯೂ ಉಳ್ಳಾಲ ಠಾಣೆಯಲ್ಲಿ ದೂರು ದಾಖಲು ನೀಡಲಾಗಿದೆ ಎಂದು ದೂರಿದರು.
ಮುತ್ತಣ್ಣ ಶೆಟ್ಟಿ ಮತ್ತು ತಂಡದ ಒಳಸಂಚು ಒಂದೆಡೆಯಾದರೆ, ವ್ಯವಸ್ಥಾಪನಾ ಸಮಿತಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಭಕ್ತಾದಿಗಳ ಗಮನವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಭಕ್ತ ಬಂಧುಗಳ ಮನಸ್ಸನ್ನು ನೋಯಿಸುವ ಉದ್ದೇಶ ಹಿಂದಿರುವುದು ಕಾಣುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು ಹಾಗೂ ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದು , ಅವರು ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕು. ಮುಂದೆ ಇಂತಹ ವರ್ತನೆ ನಡೆಯಬಾರದು ಎಂದು ಕೃಷ್ಣ ಶೆಟ್ಟಿ ತಾಮಾರು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಬಿ. ನಾರಾಯಣ ಕುಂಪಲ, ಶಿವಪ್ರಸಾದ್ ಆಚಾರ್ಯ, ಶಂಕರ್ ಬಲ್ಯ, ದಿನಮಣಿ ರಾವ್, ಪ್ರಮೀಳಾ ಚಂದ್ರಶೇಖರ್ ಉಪಸ್ಥಿತರಿದ್ದರು.
Mangalore Issue raises in Kondana temple at Ullal in relation to Managing committee.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm