ಬ್ರೇಕಿಂಗ್ ನ್ಯೂಸ್
24-05-21 04:43 pm Mangalore Correspondent ಕರಾವಳಿ
ಮಂಗಳೂರು, ಮೇ 24: ದಕ್ಷಿಣ ಭಾರತದಾದ್ಯಂತ ಮನೆಮಾತಾಗಿರುವ ಹ್ಯಾಂಗ್ಯೋ ಐಸ್ ಕ್ರೀಂ ಸಂಸ್ಥೆಯವರು ಈ ಬಾರಿಯೂ ಲಾಕ್ಡೌನಲ್ಲಿ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಪೊಲೀಸರ ನೆರವಿಗೆ ಬಂದಿದ್ದಾರೆ. ಪೊಲೀಸರಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯಲು ಇಮ್ಯುನಿಟಿ ಬೂಸ್ಟ್ ಹಾಲನ್ನು ವಿತರಣೆ ಮಾಡಿದ್ದಾರೆ.
ಲಾಕ್ಡೌನ್ ವೇಳೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿರುವ ಪೊಲೀಸರು ರೋಗ ಪ್ರತಿರೋಧಕ ಶಕ್ತಿ ಬೆಳೆಸಿಕೊಳ್ಳಬೇಕು ಎನ್ನುವ ನೆಲೆಯಲ್ಲಿ ಮಂಗಳೂರಿನ ಪೊಲೀಸರಿಗೆ ಫ್ಲೇವರ್ಡ್ ಮಿಲ್ಕ್ ಶೇಕ್ ಮತ್ತು ಸ್ಪೆಷಲ್ ಚಿಕ್ಕಿಯನ್ನು ಸಂಸ್ಥೆಯಿಂದ ನೀಡಲಾಗಿದೆ. ಮಂಗಳೂರಿನ 22 ಪೊಲೀಸ್ ಠಾಣೆ ಸೇರಿದಂತೆ ಸಿಎಆರ್, ಡಿಎಆರ್ ಸಿಬಂದಿ ಸೇರಿ 1600 ಮಂದಿ ಪೊಲೀಸ್ ಸಿಬಂದಿಗೆ ಹ್ಯಾಂಗ್ಯೋ ಉತ್ಪನ್ನಗಳನ್ನು ವಿತರಿಸಲಾಗಿದೆ.
ಹ್ಯಾಂಗ್ಯೋ ಸಂಸ್ಥೆಯ ಮಾಲಕ ಪ್ರದೀಪ ಪೈ ಅವರ ಮಗ ಸಂಕಿರಣ್ ಪೈ ಮತ್ತು ಸಂಸ್ಥೆಯ ಆಪರೇಶನ್ ಹೆಡ್ ಆಗಿರುವ ರಾಕೇಶ್ ಕಾಮತ್ ಹ್ಯಾಂಗ್ಯೋ ಉತ್ಪನ್ನಗಳನ್ನು ಸಾಂಕೇತಿಕವಾಗಿ ಇಂದು ಬೆಳಗ್ಗೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿಗಳಾದ ಹರಿರಾಮ್ ಶಂಕರ್ ಹಾಗೂ ವಿನಯ ಗಾಂವ್ಕರ್ ಅವರಿಗೆ ಹಸ್ತಾಂತರಿಸಿದರು.
ಈ ಬಾರಿ ಮಾಹಿತಿ ಹಂಚಿಕೊಂಡ ರಾಕೇಶ್ ಕಾಮತ್, ಕಳೆದ ಬಾರಿಯೂ ಪೊಲೀಸರಿಗೆ ಹ್ಯಾಂಗ್ಯೋ ಐಸ್ ಕ್ರೀಂ ವಿತರಣೆ ಮಾಡಿದ್ದೆವು. ಪ್ರತೀ ಚೆಕ್ ಪಾಯಿಂಟ್ ಗೂ ತೆರಳಿ ಐಸ್ ಕ್ರೀಂ ಕೊಟ್ಟಿದ್ದೆವು. ಈ ಬಾರಿ ಕೊರೊನಾ ಸೋಂಕಿನ ನಡುವೆ ಐಸ್ ಕ್ರೀಂ ಬೇಡವೆಂದು ಇಮ್ಯುನಿಟಿ ಬೂಸ್ಟ್ ಆಗಿರುವ ಫ್ಲೇವರ್ಡ್ ಮಿಲ್ಕ್ ಮತ್ತು ಚಿಕ್ಕಿಯನ್ನು ಕೊಟ್ಟಿದ್ದೇವೆ. ಈ ರೀತಿಯ ಅವಕಾಶ ಕೊಟ್ಟಿದ್ದಕ್ಕೆ ಕಮಿಷನರ್ ಗೆ ಧನ್ಯವಾದ ಎಂದು ಹೇಳಿದರು. ಉಡುಪಿಯಲ್ಲೂ ಪೊಲೀಸರಿಗೆ ಇದೇ ರೀತಿ ಹಾಲು ಮತ್ತು ಚಿಕ್ಕಿಯನ್ನು ಕೊಡಲಿದ್ದೇವೆ ಎಂದವರು ಹೇಳಿದರು.
ಇದೇ ವೇಳೆ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಪೊಲೀಸರ ಆರೋಗ್ಯದ ಬಗ್ಗೆ ಕಾಳಜಿ ಇಟ್ಟುಕೊಂಡು ತಮ್ಮ ಉತ್ಪನ್ನಗಳನ್ನು ವಿತರಣೆ ಮಾಡುತ್ತಿದ್ದಾರೆ. ಲಾಕ್ಡೌನಲ್ಲಿ ವ್ಯಾಪಾರ ಕಡಿಮೆಯಿದ್ದರೂ, ಪೊಲೀಸರ ಬಗ್ಗೆ ಕಾಳಜಿ ವಹಿಸುತ್ತಿರುವ ಹ್ಯಾಂಗ್ಯೋ ಸಂಸ್ಥೆಯವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಉಪಸ್ಥಿತರಿದ್ದ ಸಿಎಆರ್ ಎಸಿಪಿ ಉಪಾಸೆ ಅವರು ಕೂಡ ಆರೋಗ್ಯ ವರ್ಧಕ ಪೇಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹ್ಯಾಂಗ್ಯೋದಿಂದ ಇಮ್ಯುನಿಟಿಗಾಗಿ ಆಯುರ್ ಸಿರೀಸ್
ಹ್ಯಾಂಗ್ಯೋ ಸಂಸ್ಥೆಯಿಂದ ಕೇಸರ್ ಹಳದಿ ದೂದ್ ಮತ್ತು ತುಳಸಿ ದೂದ್ ಹೆಸರಲ್ಲಿ ಇಮ್ಯುನಿಟಿ ಬೂಸ್ಟ್ ಆಗಬಲ್ಲ ಪೇಯಗಳನ್ನು ಮಾರುಕಟ್ಟೆಗೆ ತರಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ರೋಗ ನಿರೋಧಕ ಶಕ್ತಿ ವರ್ಧಿಸಬಲ್ಲ ಔಷಧೀಯ ವಸ್ತುಗಳನ್ನು ಬಳಸಿಕೊಂಡು ಐಸ್ ಕ್ರೀಂ ಮತ್ತು ಇನ್ನಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲಾಗಿದೆ. ಬೇಸಗೆಯಲ್ಲಿ ದೇಹಕ್ಕೆ ಟಾನಿಕ್ ನೀಡಬಲ್ಲ ಇಸಬ್ ಗೋಲ್, ಶುಂಠಿ ಬಳಸಿ ಹೊಸ ರೀತಿಯ ಐಸ್ ಕ್ರೀಂ ಉತ್ಪನ್ನಗಳನ್ನು ತಯಾರಿಸಲಾಗಿದೆ.
ಇಮ್ಯುನಿಟಿ ಬೂಸ್ಟ್ ಆಗಿ ಮಾರುಕಟ್ಟೆಗೆ ಬಂದಿರುವ ಕೇಸರಿ ಹಳದಿ ದೂದ್ ಹಾಲನ್ನು ಬಿಸಿ ಮಾಡಿಯೂ ಕುಡಿಯಬಹುದು. ಅಥವಾ ಫ್ರೀಜರಲ್ಲಿಟ್ಟು ತಣ್ಣಗೆ ಕುಡಿಯುವುದಕ್ಕೂ ಸ್ವೀಟ್ ಆಗಿರುತ್ತದೆ. 200 ಎಂಎಲ್ ಬಾಟಲಿಗಳಲ್ಲಿ ಮಾರುಕಟ್ಟೆಗೆ ತಂದಿರುವ ಫ್ಲೇವರ್ಡ್ ಮಿಲ್ಕ್ ಈಗ ಯುವಜನರ ಪಾಲಿಗೆ ಅತ್ಯಂತ ಪ್ರೀತಿಯ ಉತ್ಪನ್ನ ಆಗಲಿದೆ ಎನ್ನುವ ವಿಶ್ವಾಸ ರಾಕೇಶ್ ಕಾಮತ್ ಅವರದ್ದು.
ಹ್ಯಾಂಗ್ಯೋ ಸಂಸ್ಥೆಯಲ್ಲಿ ಸದ್ಯಕ್ಕೆ ನೂರಕ್ಕೂ ಅಧಿಕ ಉತ್ಪನ್ನಗಳಿದ್ದು 40ಕ್ಕೂ ಅಧಿಕ ಫ್ಲೇವರ್ ಗಳನ್ನು ಅಳವಡಿಸಿಕೊಂಡು ವಿಭಿನ್ನ ರೀತಿಯಲ್ಲಿ ಗ್ರಾಹಕರ ಆಕರ್ಷಣೆ ಪಡೆದಿದೆ. ಇದೇ ಕಾರಣದಿಂದ ಅತ್ಯಂತ ಕಡಿಮೆ ಅವಧಿಯಲ್ಲಿ ಹ್ಯಾಂಗ್ಯೋ ಸಂಸ್ಥೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಲ್ಲೂ ಮಾರುಕಟ್ಟೆ ಸ್ಥಾಪಿಸಿದೆ. ಕರ್ನಾಟಕ, ಗೋವಾ, ಕೇರಳ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಗುಜರಾತ್ ಸೇರಿ ಉತ್ತರ ಭಾರತದಲ್ಲೂ ಗ್ರಾಹಕರನ್ನು ಸೆಳೆದಿರುವ ಹ್ಯಾಂಗ್ಯೋ ದೇಶದ ಅತಿ ಪ್ರತಿಷ್ಠಿತ ಸಂಸ್ಥೆಯಾಗಿ ಹೊರಹೊಮ್ಮಿದೆ.
Video:
The Most Popular Icecream of the State Hangyo distributed free Flavored Milk and Hangyo Chiki to Police Personnel for their relentless service amid Covid in Mangalore. Around 1600 kits were distributed by MD Pradeep Pai's son Mr. Sankeeran Pai and Manager of Operations Rakesh Kamath. City police commissioner Shashi Kumar appreciated Hangyo's companies social mind. Also, ACP CR Upase thanked the entire team for their contribution.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm