ಬ್ರೇಕಿಂಗ್ ನ್ಯೂಸ್
19-05-21 09:12 pm Mangaluru Correspondent ಕರಾವಳಿ
ಮಂಗಳೂರು, ಮೇ 19: ಸಾರ್ವಜನಿಕ ಜಾಗದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಖ್ಯಾತ ವೈದ್ಯ ಡಾ.ಬಿ.ಎಸ್. ಕಕ್ಕಿಲ್ಲಾಯರ ವಿರುದ್ಧ ಮಂಗಳೂರು ನಗರ ಪೊಲೀಸರು ಗಂಭೀರ ಪ್ರಕರಣ ದಾಖಲಿಸಿದ್ದಾರೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ - 2020 ರಡಿ ಕಲಂ 4, 5 ಮತ್ತು 9 ರ ಪ್ರಕಾರ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಗ್ಗೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಸೂಪರ್ ಮಾರ್ಕೆಟ್ ಸಹ ಪಾಲುದಾರ ರೇನ್ ರೊಸಾರಿಯೋ ದೂರು ದಾಖಲು ಮಾಡಿದ್ದರು. ಮಧ್ಯಾಹ್ನ 1.30 ಕ್ಕೆ ವೈದ್ಯ ಕಕ್ಕಿಲ್ಲಾಯರ ವಿರುದ್ಧ ಎಪಿಡಮಿಕ್ ಆ್ಯಕ್ಟ್ ಅಡಿ ಎಫ್ಐಆರ್ ದಾಖಲಾಗಿತ್ತು. ಆನಂತರ, ಕಕ್ಕಿಲ್ಲಾಯರಿಗೆ ನೋಟೀಸ್ ಕೊಟ್ಟು ವಿಚಾರಣೆಗಾಗಿ ಠಾಣೆಗೆ ಕರೆಸಿದ್ದಾರೆ. ಸಂಜೆ ಹೊತ್ತಿಗೆ ಮಾಸ್ಕ್ ಹಾಕ್ಕೊಂಡೇ ಕದ್ರಿ ಠಾಣೆಗೆ ಆಗಮಿಸಿದ್ದ ವೈದ್ಯರನ್ನು ಠಾಣೆಯಲ್ಲಿ ಇನ್ಸ್ ಪೆಕ್ಟರ್ ಸವಿತ್ರತೇಜ ವಿಚಾರಣೆ ನಡೆಸಿದ್ದಲ್ಲದೆ, ವಿವರಣೆ ಕೇಳಿದ್ದಾರೆ.
ಈ ಬಗ್ಗೆ ನಗರ ಡಿಸಿಪಿ ಹರಿರಾಮ್ ಶಂಕರ್ ಬಳಿ ಕೇಳಿದಾಗ, ಸಾಮಾನ್ಯವಾಗಿ ಮಾಸ್ಕ್ ಹಾಕದೇ ಇದ್ದರೆ 250 ಅಥವಾ ಐನೂರು ದಂಡ ವಿಧಿಸಿ ಬಿಡಲಾಗುತ್ತದೆ. ಆದರೆ, ಈ ವ್ಯಕ್ತಿ ಸಾರ್ವಜನಿಕ ಜಾಗದಲ್ಲಿ ಸರಕಾರದ ನೀತಿಯ ವಿರುದ್ಧ ನಡೆದುಕೊಂಡಿದ್ದಾರೆ. ಹೈಕೋರ್ಟ್ ಸೂಚನೆ ಪ್ರಕಾರ, ಈ ರೀತಿಯ ಅಪರಾಧಗಳಿಗೆ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಲು ಅವಕಾಶವಿದೆ. ಮಾಸ್ಕ್ ಹಾಕುವಂತೆ ಸಿಬಂದಿ ಹೇಳುತ್ತಿದ್ದರೂ, ಇವರು ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ.
ಈ ಕಾಯ್ದೆಯ ಸೆಕ್ಷನ್ 4, 5, 6 ರಲ್ಲಿ ಪ್ರಕರಣ ದಾಖಲಾದರೆ, ಎಫ್ಐಆರ್ ಬಲವಾಗಿರುತ್ತದೆ. ವೈದ್ಯರ ವಿಡಿಯೋ ಮತ್ತು ಅಲ್ಲಿನ ಸಿಬಂದಿಯ ಸಾಕ್ಷಿ ಇರುವುದರಿಂದ ಹೆಚ್ಚಿನ ಪರಿಶೀಲನೆ ಬೇಕಾಗುವುದಿಲ್ಲ. ಒಂದು ತಿಂಗಳಲ್ಲಿ ಚಾರ್ಜ್ ಶೀಟ್ ಹಾಕುತ್ತೇವೆ ಎಂದು ಹೇಳಿದರು.
ಈ ಕಾಯ್ದೆಯಡಿ ವ್ಯಕ್ತಿಯನ್ನು ಬಂಧಿಸಲು ಅವಕಾಶ ಇದೆಯೇ ಎಂಬುದಕ್ಕೂ ಡಿಸಿಪಿ ವಿವರಣೆ ನೀಡಿದ್ದಾರೆ. ಸಾಮಾನ್ಯವಾಗಿ ಏಳು ವರ್ಷದ ವರೆಗೆ ಶಿಕ್ಷೆ ವಿಧಿಸಬಹುದಾದ ಅವಕಾಶ ಇರುವ ಈ ರೀತಿಯ ಕೇಸುಗಳಲ್ಲಿ ಬಂಧಿಸುವ ಅಧಿಕಾರವೂ ಇರುತ್ತದೆ. ಆದರೆ, ಅಪರಾಧ ಸ್ವಭಾವ ನೋಡಿಕೊಂಡು ತನಿಖಾಧಿಕಾರಿ ಬಂಧನದ ಅಗತ್ಯವಿದೆಯೇ ಅನ್ನುವುದನ್ನು ನಿರ್ಧರಿಸುತ್ತಾರೆ. ಇದು ಕ್ರಿಮಿನಲ್ ಅಲ್ಲದ ಅಪರಾಧ ಆಗಿರುವುದರಿಂದ ಬಂಧನದ ಅಗತ್ಯ ಇರುವುದಿಲ್ಲ. ಆದರೆ, ಚಾರ್ಜ್ ಶೀಟ್ ಹಾಕಿದ ಮೇಲೆ ವಕೀಲರನ್ನು ಇಟ್ಟು ಕೋರ್ಟಿನಲ್ಲಿ ಕೇಸು ಎದುರಿಸಬೇಕಾಗುತ್ತದೆ. ಅಪರಾಧ ಸಾಬೀತಾದರೆ ಏಳು ವರ್ಷ ಶಿಕ್ಷೆ ಅಥವಾ ಒಂದು ಲಕ್ಷ ದಂಡ ವಿಧಿಸಲು ಈ ಕಾಯ್ದೆಯಡಿ ಅವಕಾಶ ಇರುತ್ತದೆ ಎಂದು ಡಿಸಿಪಿ ಹರಿರಾಮ್ ವಿವರಿಸಿದ್ದಾರೆ.
ಒಟ್ಟಿನಲ್ಲಿ ಸರಕಾರದ ಮಾರ್ಗಸೂಚಿ ಉಲ್ಲಂಘಿಸಿ, ನಾನು ಮಾಸ್ಕ್ ಹಾಕಲ್ಲ. ಅದು ನನ್ನ ಇಚ್ಚೆ ಎಂದು ಸಾರ್ವಜನಿಕ ಪ್ರದೇಶದಲ್ಲಿ ಬೇಕಾಬಿಟ್ಟಿ ವರ್ತಿಸುವ ಮಂದಿಗೆ ಈ ಪ್ರಕರಣ ಪಾಠವಾಗಲಿದೆ.
Video:
Mangalore Famous doctor found without mask in Jimmy's supermarket in Kadri argues for questioningಮಂಗಳೂರು: ಮಾಸ್ಕ್ ವಿಚಾರದಲ್ಲಿ ಸೂಪರ್ ಮಾರ್ಕೆಟಲ್ಲಿ ವಾಗ್ವಾದ ; ವೈದ್ಯರಿಗೇ ಮುಜುಗರ ಸೃಷ್ಟಿಸಿದ ಸಿಬಂದಿ !
Posted by Headline Karnataka on Tuesday, 18 May 2021
FIR filed against Doctor Srinivas Kamkilaya For Not wearing Mask in Jimmys Supermarket at Kadri in Mangalore. DCP Hariram Shankar speaking to Headline Karnataka said there is a possibility of 7 years imprisonment for not wearing a mask and then creating a nuisance in the Public place.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm