ಬ್ರೇಕಿಂಗ್ ನ್ಯೂಸ್
18-05-21 02:52 pm Mangalore Correspondent ಕರಾವಳಿ
ಮಂಗಳೂರು, ಮೇ 18 : ಕೋವಿಡ್ ಲಸಿಕೆಗೆ ಒಂದೆಡೆ ಭಾರೀ ಬೇಡಿಕೆ ಬಂದಿದ್ದರೆ, ಇನ್ನೊಂದೆಡೆ ಲಸಿಕೆ ಬಗ್ಗೆ ವಿರೋಧ ವ್ಯಕ್ತಪಡಿಸಿದವರು ಕೂಡ ಲಸಿಕೆ ಪಡೆಯಲು ಆರಂಭಿಸಿದ್ದಾರೆ. ಈ ನಡುವೆ ಮಾಜಿ ಸಚಿವ ಯು.ಟಿ ಖಾದರ್ ಮೊದಲು ಲಸಿಕೆಗೆ ವಿರೋಧಿಸಿ, ಈಗ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿರುವುದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಬಿಜೆಪಿಗರ ಬಾಯಿಗೆ ಆಹಾರವಾಗಿದ್ದಾರೆ.
ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ ಖಾದರ್ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಖಾದರ್ ತಮ್ಮ ಮನೆಯಲ್ಲಿಯೇ ಲಸಿಕೆ ಪಡೆದಿದ್ದರು. ಖಾದರ್ ಲಸಿಕೆ ಪಡೆದಿದ್ದ ಫೋಟೊ ಜಾಲತಾಣದಲ್ಲಿ ಬರುತ್ತಿದ್ದಂತೆ ವಿರೋಧಿಗಳು ಮಾಜಿ ಸಚಿವ ಯು.ಟಿ ಖಾದರ್ ಮೇಲೆ ಪ್ರಶ್ನೆಗಳ ಛೂಬಾಣ ಬಿಟ್ಟಿದ್ದು, ವ್ಯಂಗ್ಯ ಮಾತಿನಿಂದ ತಿವಿಯುತ್ತಿದ್ದಾರೆ.
ದೇಶದಲ್ಲಿ ಲಸಿಕೆ ಪ್ರಕ್ರಿಯೆ ಆರಂಭವಾದಾಗ ಯು.ಟಿ ಖಾದರ್ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದರು. ಸರ್ಕಾರ ಜನರನ್ನು ಬಲವಂತವಾಗಿ ಲಸಿಕೆ ಪಡೆಯುವಂತೆ ಮಾಡುತ್ತಿದೆ. ಜನ ಭಯದಿಂದ ಲಸಿಕೆ ಪಡೆಯುವ ರೀತಿಯ ವಾತಾವರಣವನ್ನು ಸರ್ಕಾರ ನಿರ್ಮಾಣ ಮಾಡಿದೆ.
ಮೊದಲ ಲಸಿಕೆಯನ್ನು ಆಸ್ಪತ್ರೆಗಳ "ಡಿ' ಗ್ರೂಪ್ ನೌಕರರಿಗೆ ನೀಡಿ ಅವರ ಜೀವದ ಮೇಲೆ ಚೆಲ್ಲಾಟವಾಡುತ್ತಿದೆ ಎಂಬಿತ್ಯಾದಿ ಟೀಕಾಸ್ತ್ರವನ್ನು ಸರ್ಕಾರದ ಮೇಲೆ ಖಾದರ್ ಸುರಿದಿದ್ದರು. ಅಂದಿನ ಯು.ಟಿ ಖಾದರ್ ಹೇಳಿಕೆ ಸುದ್ದಿ ವರದಿಯನ್ನು ಈಗ ಬಿಜೆಪಿಗರು ಅಸ್ತ್ರವಾಗಿ ಬಳಸಿಕೊಂಡಿದ್ದು, ಜಾಲತಾಣದಲ್ಲಿ ಚುಚ್ಚಿದ್ದಾರೆ.
ಖಾದರ್ ಸುದ್ದಿಗೋಷ್ಠಿಯ ವರದಿಯ ಚಿತ್ರವನ್ನು ಹಾಕಿ, ಅಂದಿನ ಹೇಳಿಕೆಯನ್ನು ಮತ್ತು ಖಾದರ್ ನಗುನಗುತ್ತಾ ಲಸಿಕೆ ಪಡೆದಿರುವ ಫೋಟೋವನ್ನು ಹಾಕಿ ಕಥೆ ಹೇಳುವ ಎರಡು ಚಿತ್ರಗಳು ಅಂತಾ ಗೇಲಿ ಮಾಡಿದ್ದಾರೆ.
Mysore MP Pratap Simha took his Facebook to mock UT Khader for getting Covid Vaccine. Previously Khader had alleged that people are scared to take BJP made vaccine so MP took to taunt why was then vaccine required now.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am