ಬ್ರೇಕಿಂಗ್ ನ್ಯೂಸ್
15-05-21 07:04 pm Mangaluru Correspondent ಕರಾವಳಿ
ಉಳ್ಳಾಲ, ಮೇ 15: ಕಡಲ್ಕೊರೆತ ಪ್ರದೇಶಕ್ಕೆ ಸಚಿವರು, ಅಧಿಕಾರಿಗಳು ಅನೇಕ ಸಂದರ್ಭ ಬಂದು ನೋಡ್ತಾರೆ, ಪ್ರಗತಿ ಕಾಣೋದಿಲ್ಲ ಎಂದು ಜನರಿಗೆ ತುಂಬಾ ನೋವಿದೆ ಎಂದು ರಾಜ್ಯ ಮೀನುಗಾರಿಕೆ ಬಂದರು, ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಬೇಸರ ವ್ಯಕ್ತಪಡಿಸಿದ್ದಾರೆ.
ನನಗೆ ಸಚಿವ ಸ್ಥಾನ ಸಿಕ್ಕಿದ ಬಳಿಕ ಎರಡೂವರೆ ತಿಂಗಳಾಯಿತು. ಈಗಾಗಲೇ ನನ್ನ ಖಾತೆಗೆ ಸಂಬಂಧಪಟ್ಟ ಸಮಸ್ಯೆ ತಿಳಿದು ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೇನೆ. ಹಳೆಯ ಬಂದರಿನ ಸುಮಾರು 23 ಕೋಟಿ ರೂ.ಗಳ ಕಾಮಗಾರಿ ಮಂಜೂರು ಆಗಿರಲಿಲ್ಲ. ಅದರ ಮಂಜೂರಾತಿಗೆ ಪ್ರಯತ್ನಿಸಿದ್ದೇನೆ. ಇಲ್ಲಿ ಈಗ ಅನೇಕ ಕುಟುಂಬಗಳಿಗೆ ತಾತ್ಕಾಲಿಕ ಮನೆಗೆ ಸ್ಥಳಾಂತರಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಕೆಲವು ಕುಟುಂಬ ಬೀದಿ ಪಾಲಾಗುವ ಹಂತಕ್ಕೂ ಬಂದಿದೆ. ಅದಕ್ಕಾಗಿ ಅಗತ್ಯ ಕಾಮಗಾರಿ ನಡೆಸುವ ಸಲುವಾಗಿ ಸೋಮವಾರ ಬಂದರು ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಇಲ್ಲಿಗೆ ಬಂದು ಪರಿಶೀಲಿಸಲಿದ್ದಾರೆ. ಆ ವರದಿ ಸರಕಾರಕ್ಕೆ ಕೊಟ್ಟಾಗ ಮುಂದಿನ ಕ್ರಮ ಯಾವ ರೀತಿ ಕೈಗೊಳ್ಳಬಹುದು ಎಂಬ ದಿಕ್ಕಿನಲ್ಲಿ ಮುಂದುವರಿಯುತ್ತೇವೆ. ಕೊರೊನಾ ಮಧ್ಯೆ ಕೂಡ ಕಡಲ್ಕೊರೆತ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ತೇವೆ. ಈ ಹಿಂದೆ ಮಂಜೂರು ಆಗಿರುವ ಕಡಲ್ಕೊರೆತ ಕಾಮಗಾರಿ ಆರಂಭವಾಗಬೇಕಾದರೆ ಮಂಜೂರಾತಿ ಕೊಡಬೇಕು. ಮಂಜೂರಾತಿ ಬಳಿಕ ಅನುದಾನವೂ ಮುಖ್ಯ. ಕೆಲಸ ಮಾಡುವ ಸಂದರ್ಭ ಕಾಮಗಾರಿ ಕಳಪೆ ಆದರೆ ವಿರೋಧಿಸಬೇಕು, ಮುಗಿದ ಬಳಿಕ ಮಾತನಾಡಿದರೆ ಸಮಸ್ಯೆ ಮುಂದುವರಿಯುತ್ತದೆ. ಕಾಮಗಾರಿಯೂ ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ಗಮನ ಹರಿಸ್ತೇನೆ. ಸೋಮೇಶ್ವರ ರುದ್ರಭೂಮಿ ಸ್ಥಿತಿಗತಿ ನೋಡಿದಾಗ ಇಂದು ಅಥವಾ ನಾಳೆ ಅದು ಸಂಪೂರ್ಣ ಧರಾಶಾಹಿಯಾಗುವುದರಲ್ಲಿ ಸಂಶಯವೇ ಇಲ್ಲ ಎಂದರು.
ವಾಯುಭಾರ ಕುಸಿತಕ್ಕೆ ತಲ್ಲಣಗೊಂಡಿರುವ ಸೋಮೇಶ್ವರದ ಹಿಂದು ರುದ್ರಭೂಮಿ, ಸೋಮೇಶ್ವರ ಮೋಹನ್ ಹಾಗೂ ಹೇಮಚಂದ್ರ ಅವರ ಮನೆ, ಉಚ್ಚಿಲದ ರೋಹಿತ್ ಮಾಸ್ಟರ್, ನಾಗೇಶ್ ಉಚ್ಚಿಲ್, ರೂಪೇಶ್ ಉಚ್ಚಿಲ್, ಕಡಪ್ಪರ ಫ್ರೆಂಡ್ಸ್ ಕ್ಲಬ್ ಹಾಗೂ ಬೆಟ್ಟಂಪಾಡಿ ಎಂಡ್ ಪಾಯಿಂಟ್ ಬಳಿಗೆ ಸಚಿವ ಅಂಗಾರ ಅವರು ಸ್ಥಳೀಯರು, ಪಕ್ಷದ ಮುಖಂಡರು, ಅಧಿಕಾರಿಗಳ ಜೊತೆ ತೆರಳಿ ಪರಿಶೀಲಿಸಿ ಸಂತ್ರಸ್ತರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಅದರಂತೆ ತುರ್ತು ಅಗತ್ಯ ಇರುವ ಸೋಮೇಶ್ವರದ ಹೇಮಚಂದ್ರ ಹಾಗೂ ಮೋಹನ್ ,ಉಚ್ಚಿಲ ರೋಹಿತ್ ಮಾಸ್ಟರ್ ,ರೂಪೇಶ್ ಉಚ್ಚಿಲ್, ನಾಗೇಶ್ ಉಚ್ವಿಲ್ ಅವರ ಮನೆ ಬಳಿ ಸದ್ಯಕ್ಕೆ ಮನೆ ರಕ್ಷಿಸಲು ಕಾಮಗಾರಿ ನಡೆಸುವಂತೆ ಸೂಚಿಸಿದರು.
ಸಚಿವರ ಜೊತೆಯಲ್ಲಿ ಬಂದರು ಹಾಗೂ ಮೀನುಗಾರಿಕೆ ಅಧಿಕಾರಿಗಳು, ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಬಿಜೆಪಿ ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸತೀಶ್ ಕುಂಪಲ, ಕ್ಷೇತ್ರ ಉಪಾಧ್ಯಕ್ಷ ಯಶವಂತ ಅಮೀನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ರವಿಶಂಕರ್, ಪ್ರಮುಖರಾದ ಪುರುಷೋತ್ತಮ ಕಲ್ಲಾಪು ಇದ್ದರು.
Minister Angara visits Someshwara Beach Area to access Cyclone Tauktae damages.He also advised the residents to vacate the place and move into the camp of NDRF
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am