ಬ್ರೇಕಿಂಗ್ ನ್ಯೂಸ್
10-05-21 05:38 pm Mangalore Correspondent ಕರಾವಳಿ
ಉಳ್ಳಾಲ, ಮೇ 10: ತನ್ನ ಕೆಲಸ ಮಾಡೋದನ್ನ ಮರೆತಿರುವ ಶಾಸಕ ಯು.ಟಿ ಖಾದರ್ ಅವರು ಇತ್ತೀಚಿಗೆ ಪ್ರೆಸ್ ಮೀಟ್ ಮಾಡೋ ಖಯಾಳಿ ಹೆಚ್ಚಿಸಿದ್ದು ನೆರೆಯ ಶಾಸಕ ವೇದವ್ಯಾಸ ಕ್ಯಾಮತ್ ಕಡೆ ಬೆರಳು ತೋರಿಸಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮಂಗಳೂರು ಕ್ಷೇತ್ರದ ಕಾಪಿಕಾಡ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ಕರೆದು ಅವರು ಮಾತನಾಡಿದರು. ಜನರು ಕೊರೊನಾ ಎರಡನೇ ಅಲೆಯ ಭೀತಿಯಲ್ಲಿರುವಾಗ ಶಾಸಕ ಯು.ಟಿ. ಖಾದರ್ ಅವರು ಕೊರೊನಾ ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರ ಬದಲು ನಿಸ್ವಾರ್ಥವಾಗಿ ದುಡಿಯುವ ಬಿಜೆಪಿ ಜನಪ್ರನಿಧಿಗಳ ವಿರುದ್ಧ ಪ್ರೆಸ್ ಮೀಟ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಆರೋಪದ ಟ್ರೋಲ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಾರೆ.
ಕೋವಿಡ್ -19 ನಿಯಂತ್ರಣಕ್ಕಾಗಿ ರಾಜ್ಯ ಸರಕಾರ, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ ಮಂಗಳೂರು ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರು ಮಾತ್ರ ಕೆಲಸ ಮಾಡುವುದಕ್ಕಿಂತ ಹೆಚ್ಚು ಪ್ರತಿ ದಿನ ಪ್ರೆಸ್ ಮೀಟ್ ಮಾಡುತ್ತಾ ಅತ್ಯಂತ ಪಾರದರ್ಶಕ, ಮಾನವೀಯ ಕೆಲಸ ಮಾಡುತ್ತಿರುವ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರ ಕುರಿತು ಆರೋಪ ಮಾಡುತ್ತಿರುವುದು ಸರಿಯಲ್ಲ.
ಶಾಸಕ ಖಾದರ್ ಅವರು ತಾನು ಪ್ರತಿನಿಧಿಸುವ ಮಂಗಳೂರು ಕ್ಷೇತದ ಬಗ್ಗೆ ಚಿಂತಿಸದೆ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರ ಕಾರ್ಯವೈಖರಿ ವಿರುದ್ಧ ಆರೋಪ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಸರಕಾರ, ಅಧಿಕಾರಿಗಳು, ಸಚಿವರು, ಶಾಸಕರು, ಜಿಲ್ಲಾ ಪಂಚಾಯಿತಿ ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಸೇರಿದಂತೆ ಜಿಲ್ಲೆಯ ಒಂಬತ್ತು ಮಂಡಲಗಳಲ್ಲಿ ಪ್ರಮುಖರಿಗೆ ಜವಾಬ್ದಾರಿ ನೀಡಲಾಗಿದೆ. ಪ್ರತಿ ಆಸ್ಪತ್ರೆ, ಮಹಾ ಶಕ್ತಿಕೇಂದ್ರದಲ್ಲಿ ನೋಡಲ್ ಅಧಿಕಾರಿಯನ್ನು ನೇಮಿಸಿದ್ದರೂ, ಆರೋಗ್ಯ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದರೂ, ಕೊರೊನಾ ಹರಡದಂತೆ ಅಂತರ ಕಾಪಾಡಲು ಪೊಲೀಸ್ ಇಲಾಖೆ ನಿರಂತರ ಜಾಗೃತಿ ಎಚ್ಚರಿಕೆ ಕಾರ್ಯಗಳನ್ನು ಮಾಡುತ್ತಿದ್ದರೂ ಖಾದರ್ ಅವರು ಮಾತ್ರ ಬಿಜೆಪಿ ಸರಕಾರದ ಕೆಲಸವನ್ನು ಮತ್ತು ಅಧಿಕಾರಿಗಳನ್ನು ದೂಷಿಸುತ್ತಾ ಗಂಭೀರ ಆರೋಪ ಮಾಡುತ್ತಾ ಸಾಗುತ್ತಿದ್ದು ಸಾಲದ್ದಕ್ಕೆ ಅವರ ಪಟಾಲಂಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದರು.
ಖಾದರ್ ಅವರು ಉದ್ಘಾಟಿಸಿದ್ದ ಬಹಳಷ್ಟು ಕಿಯೋಸ್ಕ್ ಆರೋಗ್ಯ ಕೇಂದ್ರಗಳು ಇಂದು ನಾಯಿ ಉಳಿದುಕೊಳ್ಳುವ ಪ್ರದೇಶವಾಗಿದೆ. ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತರು ಕೊರೊನಾ ನಿಯಂತ್ರಿಸಲು ಹಲವು ತಂಡಗಳನ್ನು ಕಟ್ಟಿಕೊಂಡು ಮಾಡುತ್ತಿರುವ ನಿರಂತರ ಕೆಲಸ, ನಿತ್ಯ ಮೂರು ಸಾವಿರ ಮಂದಿಗೆ ಅನ್ನ ವಿತರಿಸುವ ಸಂದರ್ಭದಲ್ಲಿ ಅವರ ಕೆಲಸದ ಬಗ್ಗೆ ಖಾದರ್ ಅವರು ಮೆಚ್ಚುಗೆ ವ್ಯಕ್ತಪಡಿಸುವುದರ ಬದಲು ಬೆರಳು ತೋರಿಸುವ ಕೆಲಸ ಮಾಡೋದು ಸಮಂಜಸವಲ್ಲ.
ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ ವೆನ್ ಲಾಕ್ ಆಸ್ಪತ್ರೆಯಲ್ಲಿ 20 ಐಸಿಯು ಬೆಡ್ ಇದ್ದು ಈಗ 70 ಐಸಿಯು ಬೆಡ್ ಇದೆ. 250 ಕೋವಿಡ್ ಬೆಡ್ ವ್ಯವಸ್ಥೆ ಮಾಡಲಾಗಿದೆಯಾದರೂ ಬಿಜೆಪಿಗೆ ಸಂಬಂಧಪಟ್ಟವರನ್ನು ದೂಷಿಸುತ್ತಾ ಖಾದರ್ ಅವರ ಯೋಗ್ಯತೆ ಏನೆಂಬುದನ್ನು ಪ್ರದರ್ಶಿಸುತ್ತಿದ್ದಾರೆ. ಇತರ ಶಾಸಕರ ಕೆಲಸದ ಬಗ್ಗೆ ನೋಡುವ ಬದಲು ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗ ಮಾಡಿದ್ದಾದರೂ ಏನು ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ಹೇಮಂತ್ ಶೆಟ್ಟಿ ಹಾಗೂ ನವೀನ್ ಪಾದಲ್ಪಾಡಿ, ಬಿಜೆಪಿ ಮಾಧ್ಯಮ ವಿಭಾಗದ ಅಜಿತ್ ಉಳ್ಳಾಲ್ ಹಾಗೂ ಆನಂದ ಶೆಟ್ಟಿ ಉಪಸ್ಥಿತರಿದ್ದರು.
Bjp Santosh Rai slams UT Khader for making wrong allegations against MLA ut khader during a press meet held at Ullal In Mangalore.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am