ಬ್ರೇಕಿಂಗ್ ನ್ಯೂಸ್
07-05-21 10:09 pm Mangaluru Correspondent ಕರಾವಳಿ
ಮಂಗಳೂರು, ಮೇ 7: ಆರೋಗ್ಯದ ವಿಷಯದಲ್ಲಿ ಕಾಂಗ್ರೆಸ್ ಚೆಲ್ಲಾಟ ಆಡುವುದನ್ನು ಮೊದಲು ನಿಲ್ಲಿಸಬೇಕು. ವೆನ್ಲಾಕ್ ಆಸ್ಪತ್ರೆಯ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡಿ ಜಿಲ್ಲೆಗೆ ಕೆಟ್ಟ ಹೆಸರು ತರುವುದಲ್ಲದೆ, ಜನತೆ ವೆನ್ಲಾಕ್ಗೆ ಬರಲು ಭಯಪಡುವ ವಾತಾವರಣವನ್ನು ಕಾಂಗ್ರೆಸ್ ನಿರ್ಮಿಸುತ್ತಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ಬಡವರಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳಿವೆ. ಆದರೆ ಕಾಂಗ್ರೆಸ್ ಜನತೆಯ ದಿಕ್ಕು ತಪ್ಪಿಸುತ್ತಿದ್ದು, ಬಡವರು ಸರಕಾರಿ ಆಸ್ಪತ್ರೆಗೆ ಬರದಂತೆ ಭಯ ತುಂಬುತ್ತಿದೆ. ಆರೋಗ್ಯ ವಿಷಯದ ಈ ರೀತಿಯ ರಾಜಕಾರಣ ಕಾಂಗ್ರೆಸ್ಗೆ ಶೋಭೆಯಲ್ಲ ಎಂದರು.
ಕಳೆದ 50 ವರ್ಷಗಳಲ್ಲಿ ಕಾಂಗ್ರೆಸ್ನಿಂದ ವೆನ್ಲಾಕ್ಗೆ ಹೇಳಿಕೊಳ್ಳುವ ಯಾವ ಕೊಡುಗೆಯೂ ದೊರೆತಿಲ್ಲ. ಆದರೆ ಬಿಜೆಪಿ ಒಂದೇ ವರ್ಷದಲ್ಲಿ ವೆನ್ಲಾಕ್ ಆಸ್ಪತ್ರೆಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಯು.ಟಿ.ಖಾದರ್ ಅವರು ರಾಜ್ಯದ ಆರೋಗ್ಯ ಸಚಿವರಾಗಿದ್ದರೂ ವೆನ್ಲಾಕ್ಗೆ ಯಾವುದೇ ಲಾಭವಾಗಿಲ್ಲ. ವೆನ್ಲಾಕ್ನಲ್ಲಿ ಇದುವರೆಗೆ ಕೇವಲ 12 ಇಂಟೆನ್ಸಿವ್ ಕೇರ್ ಇತ್ತು. ಆದರೆ ಕೊರೋನಾ ಜಿಲ್ಲೆಯನ್ನು ಕಾಡಿದ ಬಳಿಕ ಒಂದೇ ವರ್ಷದಲ್ಲಿ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿ ಸರಕಾರದ ಮುತುವರ್ಜಿಯಿಂದಾಗಿ 70 ವೆಂಟಿಲೇಟರ್ಗಳು ಸದ್ಯ ವೆನ್ಲಾಕ್ನಲ್ಲಿವೆ. ಅಲ್ಲದೆ 20 ವೆಂಟಿಲೇಟರ್ಗಳನ್ನು ಖಾಸಗಿ ಆಸ್ಪತ್ರೆಗಳಲ್ಲಿ ಬಡವರಿಗಾಗಿ ಮೀಸಲಿರಿಸಲಾಗಿದೆ. ಒಟ್ಟು 90 ವೆಂಟಿಲೇಟರ್ಗಳು ಬಡವರಿಗೆ ಸುಲಭವಾಗಿ ದೊರೆಯುತ್ತಿವೆ. ವೆನ್ಲಾಕ್ನಲ್ಲಿ ಇದ್ದ 6 ಟನ್ ಸಾಮರ್ಥ್ಯದ ಆಕ್ಸಿಜನ್ ಸಿಲಿಂಡರ್ ಈಗ 12 ಟನ್ಗೆ ಏರಿಕೆಯಾಗಿದೆ ಎಂದರು.
ತಿಂಗಳೊಳಗೆ ವೆನ್ಲಾಕ್ ನಲ್ಲಿ ಆಕ್ಸಿಜನ್ ಪ್ಲಾಂಟ್
ಮುಂದಿನ ಒಂದು ತಿಂಗಳ ಒಳಗೆ ವೆನ್ಲಾಕ್ನಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲಾಗುವುದು. 10 ದಿನದೊಳಗೆ 50 ವೆಂಟಿಲೇಟರ್ಗಳು ಬರಲಿದೆ. ಅಲ್ಲದೆ 250 ಆಕ್ಸಿಜನೇಟೆಡ್ ಬೆಡ್ ಅಳವಡಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲೂ ಆಕ್ಸಿಜನ್ ಪ್ಲಾಂಟ್ ಮಾಡುವ ಬಗ್ಗೆಯೂ ಕಾರ್ಯಗಳಾಗುತ್ತಿವೆ. ಉಳ್ಳಾಲದಲ್ಲಿ ಈಗಾಗಲೇ 50 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಆಗುತ್ತಿದೆ. ಖಾದರ್ ಅವರು ಆರೋಗ್ಯ ಸಚಿವರಾಗಿದ್ದರೂ ತಮ್ಮ ಊರಿಗೆ ಏನೂ ಕೊಡುಗೆ ನೀಡಿಲ್ಲ ಎಂದು ಹೇಳಿದ ಶಾಸಕ ಕಾಮತ್, ಕಾಂಗ್ರೆಸ್ಗೆ ಅಭಿವೃದ್ಧಿ ಬೇಕಿಲ್ಲ. ಅಭಿವೃದ್ಧಿಯ ವಿಷಯ ಮಾತನಾಡುವುದನ್ನು ಬಿಟ್ಟು ಟೀಕೆ ಟಿಪ್ಪಣಿ ಮಾಡುವುದರಲ್ಲಿಯೇ ಕಾಲ ಕಳೆಯುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ನಾಯಕರಿಗೆ ತಿರುಗೇಟು
ಬಹರೈನ್ ದೇಶದಿಂದ ಮಂಗಳೂರಿಗೆ ಆಕ್ಸಿಜನ್ ಬಂದಿರುವ ವಿಚಾರದಲ್ಲಿ ರಾಜಕೀಯ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ಮುಖಂಡರಿಗೆ ಶಾಸಕ ವೇದವ್ಯಾಸ ಕಾಮತ್ ಖಡಕ್ ತಿರುಗೇಟು ನೀಡಿದ್ದಾರೆ. ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ ಸೋಂಕು ಹೆಚ್ಚಿನ ಪ್ರಾಣಹಾನಿ ಮಾಡುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಭಾರತ ಸರಕಾರ ಬಹರೈನ್ ದೇಶಕ್ಕೆ ಆಕ್ಸಿಜನ್ ಕಳುಹಿಸುವಂತೆ ಮನವಿ ಸಲ್ಲಿಸಿದೆ. ಒಂದಷ್ಟು ರಾಜತಾಂತ್ರಿಕ ಬದಲಾವಣೆಗಳ ಕಾರಣ ಕೇಂದ್ರ ಸರಕಾರವು ರೆಡ್ ಕ್ರಾಸ್ ಸಂಸ್ಥೆಯ ಮೂಲಕ ಆಕ್ಸಿಜನ್ ಪಡೆಯಲು ನಿರ್ಧರಿಸಿತ್ತು. ಹಾಗಾಗಿ ಮುಂಬೈ ಬಂದರಿಗೆ ನೇರವಾಗಿ ಬಹರೈನ್ ನಿಂದ ಆಕ್ಸಿಜನ್ ತರುವ ಪ್ರಕ್ರಿಯೆ ನಡೆದಿತ್ತು. ಆದರೆ ಕರ್ನಾಟಕ ಸರಕಾರದ ಬೇಡಿಕೆಯ ಪ್ರಕಾರ ಕೇಂದ್ರ ಸರಕಾರವು ಮುಂಬೈ ಬದಲಿಗೆ ಮಂಗಳೂರು ಬಂದರಿಗೆ ಆಕ್ಸಿಜನ್ ಕಳುಹಿಸಲು ಕೇಳಿಕೊಂಡಿದೆ. ಮಂಗಳೂರು ನವ ಬಂದರಿಗೆ ಐ.ಎನ್.ಎಸ್ ತಲ್ವಾರ್ ಹಡಗಿನಲ್ಲಿ ಬಂದಿಳಿದ ಆಕ್ಸಿಜನ್ ಕಂಟೈನರ್ ಗಳನ್ನು ಕಾನೂನು ಪ್ರಕ್ರಿಯೆಗಳ ಅನ್ವಯ ರೆಡ್ ಕ್ರಾಸ್ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ ಐ.ಒ.ಸಿ (ಇಂಡಿಯನ್ ಆಯಿಲ್ ಕಾರ್ಪೊರೇಶನ್) ಮೂಲಕ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿ ಅಲ್ಲಿಂದ ವಿವಿಧ ಕಡೆಗಳಿಗೆ ವಿತರಿಸುವ ಕಾರ್ಯ ಆಗಿದೆ. ಇವೆಲ್ಲವೂ ಸರಕಾರಗಳ ನಡುವಿನ ಒಪ್ಪಂದದ ಪ್ರಕಾರ ನಡೆದಿದೆ ಎಂದು ಕಾಮತ್ ಹೇಳಿದ್ದಾರೆ.
ಸಾರ್ವಜನಿಕವಾಗಿ ಟೀಕೆ ಮಾಡುತ್ತಿರುವ ಕಾಂಗ್ರೆಸ್ ಮುಖಂಡರು ಮೊದಲು ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯಸ್ಥರಾಗಿ ರಾಷ್ಟ್ರಪತಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವರ ಪರಿಧಿಯೊಳಗೆ ಬರುತ್ತದೆ. ರಾಜ್ಯಕ್ಕೆ ರಾಜ್ಯಪಾಲರು ಪ್ರಮುಖರಾದರೆ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳಿಗೂ ಜವಬ್ದಾರಿ ಇರುತ್ತದೆ. ಹಾಗಿರುವಾಗ ಸರಕಾರ ತರಿಸಿಕೊಂಡ ಆಕ್ಸಿಜನ್ ಕಂಟೈನರ್ ಗಳನ್ನು ಸ್ವಾಗತಿಸಿದರಲ್ಲಿ, ಪ್ರಧಾನಿಯವರನ್ನು ಅಭಿನಂದಿಸುವುದರಲ್ಲಿ ತಪ್ಪೇನಿದೆ. ಪ್ರತಿಯೊಂದರಲ್ಲೂ ರಾಜಕೀಯ ಮಾಡುವ ಕಾಂಗ್ರೆಸಿಗರು ತಮ್ಮ ಬುದ್ಧಿವಂತಿಕೆಯನ್ನು ಒಳ್ಳೆಯ ಕಾರ್ಯಕ್ಕಾಗಿ ವಿನಿಯೋಗಿಸಲಿ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ರಾಜಕೀಯ ಬೀದಿ ನಾಟಕಗಳ ಅಗತ್ಯವಿಲ್ಲ ಎಂದು ಶಾಸಕ ಕಾಮತ್ ಹೇಳಿದರು.
ಇನ್ನು ದಿನದ 24 ಗಂಟೆಯೊಳಗೆ ವರದಿ ಲಭ್ಯ
ವೆನ್ಲಾಕ್ಗೆ ಕೋವಿಡ್ ಪರೀಕ್ಷೆ ನಡೆಸಲು ಬರುವ ಮಂದಿ ಅಪ್ಲಿಕೇಶನ್ನಲ್ಲಿ ಸರಿಯಾದ ವಿವರ ದಾಖಲಿಸದೇ ಇರುತ್ತಿದ್ದುದರಿಂದ ಅಪಲೋಡ್ ಮಾಡಲು ತೊಡಕಾಗುತ್ತಿತ್ತು. ವಾರದೊಳಗೆ ಈ ಸಮಸ್ಯೆ ಬಗೆಹರಿಯಲಿದ್ದು, ಬಳಿಕ 24 ಗಂಟೆಯೊಳಗೆ ಪರೀಕ್ಷಾ ವರದಿ ಲಭ್ಯವಾಗಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ, ಬಿಜೆಪಿ ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Congress should stop misleading citizens at times like these, said Mangaluru South MLA, Vedavyas Kamath. Express his rage towards the Opposition, Kamath said, “Congress should first put an end to making mockery with respect to matters of health. In addition to giving false statements about Wenlock hospital, it is creating an environment wherein people are scared to arrive at Wenlock hospital."
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am