ಬ್ರೇಕಿಂಗ್ ನ್ಯೂಸ್
06-05-21 09:29 pm Mangaluru Correspondent ಕರಾವಳಿ
ಮಂಗಳೂರು, ಮೇ 6: ವೆನ್ಲಾಕ್ ಜಿಲ್ಲಾಸ್ಪತ್ರೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಬೇಕಾದಷ್ಟು ಐಸಿಯು, ಕೋವಿಡ್ ಬೆಡ್ ಇದೆ, ಆಕ್ಸಿಜನ್ ಸಂಗ್ರಹ ಇದೆ, ಯಾವುದೇ ಸಮಸ್ಯೆ ಇಲ್ಲವೆಂದು ಜಿಲ್ಲಾಧಿಕಾರಿ ಸೇರಿದಂತೆ ಜನಪ್ರತಿನಿಧಿಗಳು ಹೇಳುತ್ತಾ ಬಂದಿದ್ದಾರೆ. ಆದರೆ, ವೆನ್ಲಾಕ್ ಆಸ್ಪತ್ರೆಯ ಸ್ಥಿತಿ ತೀರಾ ಶೋಚನೀಯ ಎನ್ನುವ ರೀತಿ ಅಲ್ಲಿನ ಸಿಬಂದಿ ಬಿಂಬಿಸುತ್ತಿದ್ದಾರೆ. ಕೋವಿಡ್ ಸೋಂಕು ತಗಲಿ ಶೋಚನೀಯ ಸ್ಥಿತಿಯಲ್ಲಿ ಅಲ್ಲಿಗೆ ತೆರಳಿದರೂ, ರೋಗಿಗಳಿಗೆ ಐಸಿಯು ಸಿಗುತ್ತಿಲ್ಲ.. ನೀವು ಖಾಸಗಿ ಆಸ್ಪತ್ರೆಗೆ ಹೋಗಿ ಎನ್ನುವ ಉಚಿತ ಸಲಹೆಯನ್ನು ಅಲ್ಲಿನ ಸಿಬಂದಿ ನೀಡುತ್ತಿದ್ದಾರೆ.
ಈ ಬಗ್ಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಯ ಸಂಬಂಧಿಕರು ಹೆಡ್ ಲೈನ್ ಕರ್ನಾಟಕಕ್ಕೆ ಹೇಳಿಕೊಂಡು ವಾಸ್ತವದ ಚಿತ್ರಣ ಮುಂದಿಟ್ಟಿದ್ದಾರೆ. ಎಪ್ರಿಲ್ 28ರಂದು ನಾಸಿಕ್ ನಿಂದ ಗೋಪಾಲ ಶೆಟ್ಟಿ ಎಂಬವರನ್ನು ಮಂಗಳೂರಿಗೆ ಕರೆತರಲಾಗಿತ್ತು. ನಾಸಿಕ್ ನಲ್ಲಿ ದಿನಪೂರ್ತಿ ತಿರುಗಾಡಿದರೂ ಐಸಿಯು ಬೆಡ್ ಸಿಗದೆ, ಅಲ್ಲಿನ ಆಸ್ಪತ್ರೆ ಸಿಬಂದಿ ನೀವು ಬೇರೆ ಕಡೆಗೆ ಒಯ್ಯುವುದೇ ಉತ್ತಮ. ಇಲ್ಲದಿದ್ದರೆ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಐಸಿಯುಗೆ ಹಾಕಿದರೆ ಮಾತ್ರ ಉಳಿದಾರು ಎಂದಿದ್ದಕ್ಕೆ ರೋಗಿಯ ಸಂಬಂಧಿಕರು ಸೇರಿ ಅವರನ್ನು ಭಾರೀ ಖರ್ಚು ಮಾಡಿಕೊಂಡು ಮಂಗಳೂರಿಗೆ ಕರೆತಂದಿದ್ದರು. ಎ.28ರಂದು ರಾತ್ರಿ ಹೊರಟು ಮರುದಿನ ಅಪರಾಹ್ನ ಆಂಬುಲೆನ್ಸ್ ಮಂಗಳೂರಿಗೆ ತಲುಪಿತ್ತು. ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಜಂಬೋ ಸಿಲಿಂಡರ್ ನಲ್ಲಿ ಉಸಿರಾಟಕ್ಕೆ ಇಟ್ಟುಕೊಂಡೇ ಬರಲಾಗಿತ್ತು. ಆದರೆ, ನಡುವೆ ದಾರಿಯಲ್ಲಿ ಸಿಲಿಂಡರ್ ಮುಗಿದು ಬೆಳಗಾವಿಯಲ್ಲಿ ಮರು ತುಂಬಿಸಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಇದೆ ಎಂಬುದನ್ನು ದೃಢಪಡಿಸಿಕೊಂಡೇ ಬಂದಿದ್ದರು.
ಆದರೆ, ನಾಲ್ಕು ಗಂಟೆಗೆ ವೆನ್ಲಾಕ್ ಆಸ್ಪತ್ರೆಯ ಕ್ಯಾಶುವಾಲಿಟಿಗೆ ಹೋದರೆ, ರೋಗಿಯನ್ನು ಒಳ ಪಡೆಯುವುದಕ್ಕೇ ಸಿಬಂದಿ ನಿರಾಕರಿಸಿದ್ದಾರೆ. ಐಸಿಯು ಬೆಡ್ ಇಲ್ಲ. ಎಲ್ಲ ಭರ್ತಿಯಾಗಿದೆ, ಐಸಿಯು ಬೇಕಾದರೆ ಕೆ.ಎಸ್. ಹೆಗ್ಡೆ ಅಥವಾ ಯೇನಪೋಯಕ್ಕೆ ಹೋಗಿ. ಅಲ್ಲಿಗೆ ರೆಫರೆನ್ಸ್ ಕೊಡುತ್ತೇವೆ. ಬಿಲ್ ನಲ್ಲಿ 20 ಶೇ. ಡಿಸ್ಕೌಂಟ್ ಸಿಗುತ್ತದೆ ಎಂದಿದ್ದಾರೆ. ಆದರೆ, ಈ ಬಗ್ಗೆ ಮಾಧ್ಯಮದ ವ್ಯಕ್ತಿಯೊಬ್ಬರಿಗೆ ತಿಳಿದು ಡಿಎಚ್ಓ ಬಳಿ ಕೇಳಿದರೆ, ಐಸಿಯು ಇದೆ, ಖಾಲಿಯಾಗಿಲ್ಲ ಎಂಬ ಉತ್ತರ ಬಂದಿತ್ತು. ಕೊನೆಗೆ ರಾತ್ರಿ 7.30ರ ಸುಮಾರಿಗೆ ರೋಗಿಯನ್ನು ದಾಖಲಿಸಿಕೊಂಡಿದ್ದು, ಕ್ಯಾಶುವಾಲಿಟಿಯಲ್ಲೇ ಬೆಡ್ ನೀಡಲಾಗಿತ್ತು. ಐಸಿಯು ವಾರ್ಡ್ ಕೊಟ್ಟಿರಲಿಲ್ಲ. ಕೋವಿಡ್ ವಾರ್ಡಿಗೆ ಹಾಕುತ್ತೇವೆಂದು ಹೇಳಿ, ಅವರನ್ನು ಒಳಗೆ ಸೇರಿಸಿಕೊಂಡಿದ್ದು ಮತ್ತೆ ತೋರಿಸಿಲ್ಲ ಎನ್ನುತ್ತಾರೆ, ರೋಗಿಯ ಸಂಬಂಧಿಕರು.
ಕೊನೆಗೆ, ಅಲ್ಲಿನ ಸಿಬಂದಿ ಒಬ್ಬರಿಗೆ ಒಂದಿಷ್ಟು ಕೈಬಿಸಿ ಮಾಡಿದ ಬಳಿಕ ಕೋವಿಡ್ ವಾರ್ಡಿನಲ್ಲಿ ರೋಗಿಯನ್ನು ದಾಖಲಿಸಿರುವ ಮಾಹಿತಿಯನ್ನು ನೀಡಿದ್ದಾರೆ. ಅದಲ್ಲದೆ, ನಾಲ್ಕು ದಿನ ಕಳೆದ ಬಳಿಕ ತನ್ನದೇ ಫೋನನ್ನು ರೋಗಿಗೆ ಕೊಟ್ಟು ಮಾತನಾಡಿಸಿದ್ದಾರೆ. ಆದರೆ, ವಾರ ಕಳೆದರೂ ಐಸಿಯು ಕೊಟ್ಟಿಲ್ಲ. ಸಾದಾ ವಾರ್ಡಿನಲ್ಲೇ ಆಕ್ಸಿಜನ್ ನೀಡಿ ಇರಿಸಲಾಗಿದೆ ಎಂದು ಸಂಬಂಧಿಕರು ಮಾಹಿತಿ ನೀಡಿದ್ದಾರೆ. ಮೇ 6ಕ್ಕೆ ವಾರ ಕಳೆದಿದ್ದು, ಇನ್ನೂ ಐಸಿಯು ಕೊಟ್ಟಿಲ್ಲ. ಕೇಳಿದರೆ, ಐಸಿಯು ಇಲ್ಲ ಎನ್ನುತ್ತಿದ್ದಾರಂತೆ ಅಲ್ಲಿನ ಸಿಬಂದಿ. ರೋಗಿಯನ್ನು ಯಾರು ನೋಡಿಕೊಳ್ಳುತ್ತಿದ್ದಾರೆ, ಈಗ ಹೇಗಿದ್ದಾರೆ ಎನ್ನುವ ಬಗ್ಗೆ ಯಾರು ಕೂಡ ಅಧಿಕೃತ ಮಾಹಿತಿ ನೀಡುತ್ತಿಲ್ಲ ಎನ್ನುತ್ತಿದ್ದಾರೆ.
ಬೆಂಗಳೂರಿನಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಾಗಿದ್ದು, ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ, ಡಿಎಚ್ಓ ಸೇರಿ ಪ್ರಮುಖ ಅಧಿಕಾರಿಗಳು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಇದೆ, ಆಕ್ಸಿಜನ್ ಸಮಸ್ಯೆ ಇಲ್ಲ ಅಂತಲೇ ಹೇಳುತ್ತಿದ್ದಾರೆ. ಆದರೆ, ವಾಸ್ತವವಾಗಿ ಎಷ್ಟು ಐಸಿಯು ಇದೆ, ಎಷ್ಟು ಭರ್ತಿಯಾಗಿದೆ ಎನ್ನುವ ಅಧಿಕೃತ ಮಾಹಿತಿ ನೀಡುತ್ತಿಲ್ಲ. ವೆನ್ಲಾಕ್ ಜಿಲ್ಲಾಸ್ಪತ್ರೆ ಸೇರಿ ತಾಲೂಕು ಕೇಂದ್ರಗಳಲ್ಲಿಯೂ ಐಸಿಯು, ವೆಂಟಿಲೇಟರ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿನ ಬೆಡ್ ಗಳು ತುಂಬಿದ್ಯಾ ಅನ್ನೋದ್ರ ಬಗ್ಗೆಯೂ ಮಾಹಿತಿ ಇಲ್ಲ. ವೆನ್ಲಾಕ್ ಆಸ್ಪತ್ರೆಗೆ ಬಂದರೆ ಮಾತ್ರ, ಇಲ್ಲಿ ಬೆಡ್ ಖಾಲಿ ಇಲ್ಲ ಎನ್ನುವುದಷ್ಟೇ ಉತ್ತರ. ಹೀಗಾಗಿ, ಮಂಗಳೂರಿನಲ್ಲಿಯೂ ಬೆಡ್ ಬ್ಲಾಕಿಂಗ್ ದಂಧೆ ಇದ್ಯಾ ಎನ್ನುವ ಅನುಮಾನ ಹುಟ್ಟುವಂತಾಗಿದೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಣವಂತರು ಬೆಡ್ ಕಾದಿರಿಸುವ ಕೆಲಸ ಮಾಡುತ್ತಿದ್ದಾರೆಯೇ ಅಥವಾ ಸರಕಾರಿ ಸಿಬಂದಿಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳತ್ತ ಕಳಿಸಿಕೊಡಲು ಈ ರೀತಿ ಹೇಳುತ್ತಿದ್ದಾರೆಯೇ ಎಂಬ ಸಂಶಯ ಕೇಳಿಬಂದಿದೆ.
ಮಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ಬಗೆಗಿನ ಮಾಹಿತಿಯನ್ನು ಯಾರು ಕೂಡ ನೀಡುತ್ತಿಲ್ಲ. ಇದರಿಂದಾಗಿ ರೋಗಿಗಳನ್ನು ಆಂಬುಲೆನ್ಸಿನಲ್ಲಿ ಇಟ್ಟುಕೊಂಡು ಅಲೆದಾಡುವ ಸ್ಥಿತಿ ಬಂದಿದೆ ಎನ್ನುತ್ತಾರೆ, ಕೋವಿಡ್ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಸಂಘಟನೆ ಸದಸ್ಯರು.
Covid Patients complain of no bed no ICU as everything is full at Wenlock government covid hospital in Mangalore. Staffs suggest patients go to private hospitals. Dc Rajendra Kumar states there is no shortage of beds and ICU every day in the meeting but yet patients are finding challenging for admittance into Wenlock Hospital.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am