ಬ್ರೇಕಿಂಗ್ ನ್ಯೂಸ್
26-08-20 01:00 pm Mangalore Reporter ಕರಾವಳಿ
ಮಂಗಳೂರು, ಆಗಸ್ಟ್ 26: ಕೊರೊನಾ ಸಂಧರ್ಭವನ್ನು ದುರುಪಯೋಗಪಡಿಸಿ ದೇಶದ ಅಮೂಲ್ಯ ಸಂಪತ್ತಾದ ವಿಮಾನ ನಿಲ್ದಾಣ, ರೈಲ್ವೇ, ಬಿ ಎಸ್ ಏನ್ ಎಲ್ , ಬ್ಯಾಂಕ್, ವಿಮೆ, ಕಲ್ಲಿದ್ದಲು ಮುಂತಾದುವುಗಳನ್ನು ಮಾರಾಟ ಮಾಡಲು ಕುತಂತ್ರ ಹಣೆದಿದೆ ಎಂದು ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ಅವರು ಸಿಪಿಎಂ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ವಾರಾಚರಣೆ ಕಾರ್ಯಕ್ರಮದ ಭಾಗವಾಗಿ ಉರ್ವಾಸ್ಟೋರಿನಲ್ಲಿ ಜರುಗಿದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಧೈರ್ಯ ತುಂಬುವ ಮೂಲಕ ಜನತೆಗೆ ಸ್ಪಂದಿಸಬೇಕಾದ ಕೇಂದ್ರ ಸರಕಾರವು ಜನರಲ್ಲಿ ಮೌಢ್ಯವನ್ನು ತುಂಬಿಸಿ ದಾರಿ ತಪ್ಪಿಸಲು ಹವಣಿಸುತ್ತಿದೆ ಎಂದು ಹೇಳಿದರು.

ರಫೇಲ್ ಹಗರಣದಲ್ಲಿ ಕೋಟ್ಯಾಂತರ ರೂ. ಹಣ ಭ್ರಷ್ಟಾಚಾರ
ಸಿಪಿಐಎಂ ನಾಯಕರಾದ ಮನೋಜ್ ಕುಲಾಲ್ ಮಾತನಾಡುತ್ತಾ ಕೋರೋನಾ ನಿಗ್ರಹಿಸುವಲ್ಲಿ ಸಂಪೂರ್ಣ ವಿಫಲತೆಯನ್ನು ಕಂಡ ಕೇಂದ್ರ ಸರಕಾರವು ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಚೈನಾ ವಿರುದ್ದ ಯುದ್ಧದ ಉನ್ಮಾದವನ್ನು ಸ್ರಷ್ಠಿಸಿತು. ರಫೇಲ್ ಹಗರಣದಲ್ಲಿ ಕೋಟ್ಯಾಂತರ ರೂ. ಹಣ ಭ್ರಷ್ಟಾಚಾರ ನಡೆಸಿದ್ದರೂ, ಯುದ್ದ ಸಾಮಾಗ್ರಿಗಳನ್ನು ತರುವಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು. ಒಟ್ಟಿನಲ್ಲಿ ಜನರ ಬದುಕಿಗೆ ತಿಲಾಂಜಲಿಯನ್ನಿಟ್ಟು, ಕೊರೋನಾವನ್ನು ಹತ್ತಿಕ್ಕುವಲ್ಲಿ ನರೇಂದ್ರ ಮೋದಿ ಮಹಾತ್ಸಾಧನೆ ಮಾಡಿದ್ದಾರೆ ಎಂಬಂತೆ ಮಾಧ್ಯಮಗಳಲ್ಲಿ ಹಸಿ ಹಸಿ ಸುಳ್ಳನ್ನು ಹರಿಯಬಿಡಲಾಯಿತು ಎಂದು ಹೇಳಿದರು.
ಸಿಪಿಎಂ ನಾಯಕರಾದ ಮನೋಜ್ ಕುಲಾಲ್, ಸ್ಥಳೀಯ ನಾಯಕರಾದ ಕಿಶೋರ್, ರಾಜೇಶ್ ಕುಲಾಲ್, ರಘುವೀರ್, ಡಿವೈಎಫ್ ಐ ನಾಯಕರಾದ ಪ್ರಶಾಂತ್ ಎಂ.ಬಿ.ನಾಗೇಂದ್ರ, ಸನತ್, ಸುಕೇಶ್, ಇಕ್ಬಾಲ್, ಸಿಐಟಿಯು ನಾಯಕರಾದ ಶ್ಯಾಮುವೆಲ್ ಟೈಟಸ್, ದಿನೇಶ್ ಶ್ರೀಯಾನ್, ಮಹಿಳಾ ನಾಯಕರಾದ ಹರಿಣಾಕ್ಷಿ ಮುಂತಾದವರು ಉಪಸ್ಥಿತರಿದ್ದರು.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm