ಬ್ರೇಕಿಂಗ್ ನ್ಯೂಸ್
28-04-21 04:00 pm Mangalore Correspondent ಕರಾವಳಿ
ಮಂಗಳೂರು, ಎ.28: ಲಾಕ್ಡೌನ್ ಆಗಿ ಎಲ್ಲ ಕಡೆಯೂ ಬಂದ್ ಆಗಿದೆ, ಜನ, ವಾಹನಗಳಿಲ್ಲದೆ ರಸ್ತೆಗಳೆಲ್ಲ ಬಿಕೋ ಎನ್ನುತ್ತಿವೆ. ರೈಲು ನಿಲ್ದಾಣದತ್ತ ಹೋದರೆ ಮಾತ್ರ ನೂರಾರು ಕಾರ್ಮಿಕರು ದಿಕ್ಕೆಟ್ಟು ನಿಂತಿದ್ದಾರೆ. ಎರಡು ದಿನಗಳಿಂದ ಊಟ, ನೀರು ಸಿಗದೆ, ಪರಿತಪಿಸುತ್ತಿದ್ದವರೂ ಅಲ್ಲಿದ್ದರು. ಮೈಬಗ್ಗಿಸಿ ದುಡಿಯುವ ಕಾರ್ಮಿಕರಾಗಿದ್ದರಿಂದ ಎರಡು ದಿನವಾದ್ರೂ ಊಟ ಇಲ್ಲದೆ ಅಲ್ಪ ಸ್ವಲ್ಪ ನೀರು, ಚಹಾ ಸೇವಿಸಿಕೊಂಡು ಕಾಲ ಕಳೆದವರಿದ್ದರು.
ಹೆಡ್ ಲೈನ್ ಕರ್ನಾಟಕದ ಪ್ರತಿನಿಧಿ ರೈಲು ನಿಲ್ದಾಣಕ್ಕೆ ತೆರಳಿ ಅವರನ್ನು ಮಾತನಾಡಿಸಿದಾಗ, ಅಲ್ಲಿನ ವಾಸ್ತವ ತಿಳಿದುಬಂತು. ಹರೆಯದ ಯುವಕರು ಅನ್ನ, ನೀರಿಲ್ಲದೆ ಇತ್ತ ಅಧಿಕಾರಿಗಳ ಸಹಾಯವೂ ಸಿಗದೆ ಕಂಗಾಲಾಗಿ ಕುಳಿತಿದ್ದರು. ಕೂಡಲೇ ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಅವರ ಗಮನಕ್ಕೆ ತರಲಾಯ್ತು. ಕಾಮತರು, ಅಲ್ಲಿ ಎಷ್ಟು ಜನ ಇದ್ದಾರೆಂದು ವಿಚಾರಿಸಿ ಕೂಡಲೇ ಊಟ ಕಳಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಸ್ವಲ್ಪ ಹೊತ್ತಿನಲ್ಲಿ ಮಂಗಳೂರಿನ ಸೇವಾಂಜಲಿ ಟ್ರಸ್ಟ್ ಸದಸ್ಯರು ಟೆಂಪೋದಲ್ಲಿ ಊಟ ಮತ್ತು ನೀರನ್ನು ಹೊತ್ತುಕೊಂಡು ಬಂದರು. ಹಸಿದು ಬಳಲಿದ್ದ 260 ಮಂದಿಯ ಉದರ ತಣಿಸುವ ಕೆಲಸ ಮಾಡಿದರು. ಸೋಮವಾರ ರಾತ್ರಿಯ ರೈಲಿಗೆಂದು ಬಂದು ಅದರಲ್ಲಿ ಹೋಗಲಾಗದೆ ಉಳಿದುಕೊಂಡಿದ್ದ ಬಹಳಷ್ಟು ಮಂದಿ ಎರಡು ದಿನದ ನಂತರ ಊಟ ಮಾಡಿದ್ರು. ಇದರ ನಡುವೆ, ರೈಲಿನ ಚಹಾವಾಲಾಗಳು ಅಲ್ಪ ಸ್ವಲ್ಪ ಚಹ ಮತ್ತು ಬ್ರೆಡ್ ಕೊಟ್ಟಿದ್ದರಂತೆ.
ಇದೇ ವೇಳೆ ಮಾತನಾಡಿದ ಸೇವಾಂಜಲಿ ಟ್ರಸ್ಟಿನ ನರೇಶ್ ಪ್ರಭು, ಹೆಡ್ ಲೈನ್ ಕರ್ನಾಟಕಕ್ಕೆ ಅಭಿನಂದನೆ ಹೇಳುತ್ತೇವೆ, ಇಲ್ಲಿ ಹಸಿದು ಬಳಲಿದ್ದ ಕಾರ್ಮಿಕರ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದಾರೆ. ಶಾಸಕರ ನೇತೃತ್ವದಲ್ಲಿ ನಡೆಯುವ ಸೇವಾಂಜಲಿ ಟ್ರಸ್ಟ್ ನಿಂದ ವಿವಿಧ ಕಡೆಗಳಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ಪೊಲೀಸರಿಗೆ, ರಸ್ತೆ ಬದಿ ಇರುವ ಅನಾಥರಿಗೆ ಊಟ ತಲುಪಿಸುವ ಕೆಲಸ ಮಾಡುತ್ತೇವೆ. ಈಗ ಕಾರ್ಮಿಕರ ಹೊಟ್ಟೆ ತಣಿಸುವ ಕೆಲಸಕ್ಕೆ ಹೆಡ್ ಲೈನ್ ಕರ್ನಾಟಕ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ, ಹಸಿದು ಬಳಲಿದ್ದ ಕಾರ್ಮಿಕರು ಕೂಡ ಥ್ಯಾಂಕ್ಸ್ ಹೇಳಿದರು. ನಮ್ಮ ಸ್ಥಿತಿ ಕಂಡು ಊಟ ತರಿಸಿಕೊಡುವ ವ್ಯವಸ್ಥೆ ಮಾಡಿದ್ರಿ. ನಾವು ಆಭಾರಿಯಾಗಿದ್ದೇವೆ ಎಂದು ಒಬ್ಬ ಕಾರ್ಮಿಕ ಹೇಳಿಕೆ ನೀಡಿದ್ದು ಲಾಕ್ಡೌನ್ ಸ್ಥಿತಿಯನ್ನು ಕಣ್ಣಿಗೆ ಕಟ್ಟಿಕೊಟ್ಟಿತ್ತು.
ಲಾಕ್ಡೌನ್ ; ರೈಲು ನಿಲ್ದಾಣದಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿರುವ ಉತ್ತರ ಭಾರತದ ಕಾರ್ಮಿಕರು !
Video:
MLA Vedavyas Kamath's Sevanjali trust helped hundreds of Stranded Migrants who were without food for three days by giving them a good tasty meal after the reporter of Headline Karnataka sought for help from MLA. The migrants thanked MLA for his great help in times of distress.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am