ಬ್ರೇಕಿಂಗ್ ನ್ಯೂಸ್
28-04-21 03:46 pm Mangalore Correspondent ಕರಾವಳಿ
ಮಂಗಳೂರು, ಎ.28: ಕಳೆದ ವರ್ಷ ದಿಢೀರ್ ಲಾಕ್ಡೌನ್ ಹೇರಿದಾಗ ಗಾಬರಿ ಬಿದ್ದಿದ್ದು ಉತ್ತರ ಭಾರತದ ವಲಸೆ ಕಾರ್ಮಿಕರು. ಮಂಗಳೂರು ಸೇರಿ ಜಿಲ್ಲೆಯ ಮೂಲೆ ಮೂಲೆಯಲ್ಲಿ ಕೆಲಸ ಮಾಡುತ್ತಿದ್ದವರು ಬಸ್ಸಿಲ್ಲದೇ ಇದ್ದಾಗ ರಾತ್ರೋರಾತ್ರಿ ನಡೆದುಕೊಂಡೇ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದರು. ಮಂಗಳೂರಿನಲ್ಲಿ ರೈಲು ಇಲ್ಲ ಎಂದಾಗ, ಉತ್ತರ ಪ್ರದೇಶಕ್ಕೆ ನಡೆದೇ ಹೊರಡುತ್ತೇವೆಂದು ರಸ್ತೆಯಲ್ಲಿ ನಡೆಯುತ್ತಾ ಸಾಗಿ ದಾರಿಮಧ್ಯೆ ಸಿಕ್ಕಿಬಿದ್ದು ಅಲ್ಲಲ್ಲಿ ಆಶ್ರಯ ಕೇಂದ್ರಗಳಲ್ಲಿ ಉಳಿದುಕೊಂಡು ಪಡಿಪಾಟಲು ಪಟ್ಟಿದ್ದರು.
ಆದರೆ, ಸರಿಯಾಗಿ ಒಂದು ವರ್ಷದ ಬಳಿಕ ಕರ್ನಾಟಕದಲ್ಲಿ ಮತ್ತೆ ಲಾಕ್ಡೌನ್ ಹೇರಿಕೆಯಾಗಿದೆ. ಉತ್ತರ ಭಾರತ ಮೂಲದ ಕಾರ್ಮಿಕರು ಮತ್ತೆ ದಿಕ್ಕೆಟ್ಟಿದ್ದು ಮಂಗಳೂರಿನ ರೈಲು ನಿಲ್ದಾಣಕ್ಕೆ ಬಂದು ತಲುಪಿದ್ದಾರೆ. ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಮೂಲೆಗಳಿಂದ ಮಂಗಳೂರಿಗೆ ಬರುತ್ತಿದ್ದು, ಮುಂದೇನು ಎಂದು ದಿಕ್ಕು ತೋಚದೆ ನಿಂತಿದ್ದಾರೆ. ಒಂದೆಡೆ ಅನ್ನ, ನೀರಿನ ವ್ಯವಸ್ಥೆಯೂ ಇಲ್ಲ. ಇನ್ನೊಂದೆಡೆ ಉಳಕೊಳ್ಳುವುದಕ್ಕೂ ವ್ಯವಸ್ಥೆ ಇಲ್ಲ. ಹೀಗಾಗಿ ರೈಲು ನಿಲ್ದಾಣದ ಹೊರಗಡೆ ರಸ್ತೆ ಬದಿಯಲ್ಲೇ ಮಲಗಿದ್ದಾರೆ. ನಿಲ್ದಾಣದ ಜಗುಲಿ, ಆಸುಪಾಸಿನ ಮರಗಳಡಿಯಲ್ಲಿ ಕಾರ್ಮಿಕರು ಆಶ್ರಯ ಪಡೆದಿದ್ದಾರೆ.
ರೈಲು ಇದೆ, ಟಿಕೆಟ್ ಸಿಗುತ್ತಿಲ್ಲ !
ಮಂಗಳೂರಿನಿಂದ ಉತ್ತರ ಭಾರತಕ್ಕೆ ರೈಲಿನ ವ್ಯವಸ್ಥೆ ಇದೆ. ಈ ಬಾರಿ ಕಳೆದ ವರ್ಷದ ರೀತಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿಲ್ಲ, ಆದರೆ, ಮಂಗಳೂರಿನಲ್ಲಿ ಬಂದು ಸೇರಿದ ಕಾರ್ಮಿಕರಿಗೆ ಟಿಕೆಟ್ ಸಿಗುತ್ತಿಲ್ಲ. ಮೊದಲೇ ಟಿಕೆಟ್ ಬುಕ್ ಆಗಿ ರೈಲು ಬರುತ್ತಿರುವುದರಿಂದ ಕಾರ್ಮಿಕರು ತಮ್ಮ ಸರದಿಗಾಗಿ ಕಾದು ಕುಳಿತಿದ್ದಾರೆ.
ಮಂಗಳವಾರ ಸಂಜೆ ಪುತ್ತೂರಿನಿಂದ 150ರಷ್ಟು ಮಂದಿ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಆಗಮಿಸಿದ್ದಾರೆ. ಇದಕ್ಕೂ ಮೊದಲೇ ಇಲ್ಲಿ ಬಂದು ಸೇರಿದವರು ನೂರು ಮಂದಿ ಇದ್ದಾರೆ. ಒಟ್ಟು 260 ರಷ್ಟು ಮಂದಿ ಕಾರ್ಮಿಕರು ಮಂಗಳೂರು ನಿಲ್ದಾಣದಲ್ಲಿ ಸೇರಿದ್ದು ಅವರಿಗೆ ಜಿಲ್ಲಾಡಳಿತದಿಂದ ಯಾವುದೇ ವ್ಯವಸ್ಥೆ ಮಾಡಿಲ್ಲ. ಈ ಬಗ್ಗೆ ಕಾರ್ಮಿಕರಲ್ಲಿ ಕೇಳಿದಾಗ, ಧಣಿಯವರು ಇನ್ನು ಒಂದೆರಡು ತಿಂಗಳು ಕೆಲಸ ಇಲ್ಲಾಂತ ಹೋಗಲು ಹೇಳಿದ್ದಾರೆ. ಊಟಕ್ಕೂ ಗತಿಯಿಲ್ಲದಿದ್ದರೆ ನಾವೇನು ಮಾಡೋದು ಅಂತ ಅಲವತ್ತುಕೊಂಡಿದ್ದಾರೆ.
ಇದೇ ವೇಳೆ, ರೈಲು ನಿಲ್ದಾಣದಲ್ಲಿ ಬಾಗಲಕೋಟೆ ದಂಪತಿ ಮತ್ತು ಮೈಸೂರು ಮೂಲದ ಕಾರ್ಮಿಕರು ಕೂಡ ಸಿಕ್ಕಿದ್ರು. ದಂಪತಿಯ ಪೈಕಿ ಪತ್ನಿಗೆ ಹುಷಾರಿಲ್ಲ. ಅವರು ತಮ್ಮ ಗಂಟು ಮೂಟೆಯ ಜೊತೆಗೆ ಗ್ಯಾಸನ್ನೂ ತಂದಿದ್ದು ಗಂಡ ನಿಲ್ದಾಣದ ಆವರಣದಲ್ಲಿಯೇ ಅಡುಗೆ ಮಾಡಲು ರೆಡಿ ಮಾಡುತ್ತಿದ್ದರು. ಇನ್ನು ಮೈಸೂರಿನ ಮೂವರು ಕಾರ್ಮಿಕರು ತಮಗೆ ಬಸ್ ಇಲ್ಲ. ಹೋಗುವುದು ಹೇಗೆಂಬ ಚಿಂತೆಯಲ್ಲಿ ಕುಳಿತಿದ್ದರು. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕುಟುಂಬ ರೈಲು ನಿಲ್ದಾಣಕ್ಕೆ ಬಂದು ವಿಚಾರಿಸುತ್ತಿದ್ದರು. ನಾಲ್ಕು ದಿನಗಳ ಹಿಂದೆ ಕುಟುಂಬ ಮದುವೆಗೆಂದು ಮಂಗಳೂರಿಗೆ ಬಂದಿದ್ದು ಹಿಂತಿರುಗಿ ಹೋಗಲಾಗದೆ ಕಷ್ಟ ಎದುರಿಸುವಂತಾಗಿತ್ತು.
Hundreds of laborers stranded at Mangalore railway junction for three days without food and without ticket confirmation. Have a look at the ground report and pictures of daily wage workers.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am