ಬ್ರೇಕಿಂಗ್ ನ್ಯೂಸ್
28-04-21 03:33 pm Mangalore Correspondent ಕರಾವಳಿ
ಮಂಗಳೂರು, ಎ.28: ಪ್ರಧಾನಿ ಮೋದಿಯೂ ಕೊರೊನಾ ರೋಗಿಗಳ ರೀತಿಯಲ್ಲೇ ಬೀದಿ ಹೆಣವಾಗಲೆಂದು ಹಾರೈಸಿದ್ದ ಲುಕ್ಮಾನ್ ಅಡ್ಯಾರ್ ಎಂಬ ಯುವಕನ ಪತ್ನಿಗೆ ಈಗ ಬರೆ ಬಿದ್ದಿದೆ. ಲುಕ್ಮನ್ ವಿರುದ್ಧ ಕೇಸು ದಾಖಲಾದ ಬೆನ್ನಲ್ಲೇ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ಸದಸ್ಯೆಯಾಗಿದ್ದ ಆತನ ಪತ್ನಿಯನ್ನು ಸದಸ್ಯತ್ವದಿಂದ ವಜಾ ಮಾಡಲಾಗಿದೆ.
ಲುಕ್ಮನ್ ಅಡ್ಯಾರ್ ಎಂಬ ಯುವಕ ಪ್ರಧಾನಿ ಮೋದಿಯೂ ಬೀದಿ ಬದಿ ಹೆಣವಾಗಲೆಂದು ಸರ್ವಶಕ್ತನಲ್ಲಿ ಎಲ್ಲರೂ ಪ್ರಾರ್ಥಿಸಿ ಎಂದು ಫೇಸ್ಬುಕ್ ಪೋಸ್ಟ್ ಹಾಕಿದ್ದ. ಪೋಸ್ಟ್ ಹಾಕಿದ ಬೆನ್ನಲ್ಲೇ ಲುಕ್ಮನ್ ವಿರುದ್ಧ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡರಾದ ಫಝಲ್ ಅಸೈಗೋಳಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಲುಕ್ಮನ್ ಪತ್ನಿ ನಫೀಸಾ ಮಿಸ್ರಿಯಾ ಅವರು ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದು ಅಕಾಡೆಮಿ ಅಧ್ಯಕ್ಷರ ಸೂಚನೆಯಂತೆ ರಿಜಿಸ್ಟ್ರಾರ್ ಪೂರ್ಣಿಮಾ ಸದಸ್ಯತ್ವದಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ, ಟಿಪ್ಪಣಿಗೆ ಅವಕಾಶವಿದೆ. ಹಾಗೆಂದು ದೇಶದ ಪ್ರದಾನಿಯನ್ನೇ ಕಠೋರ ಶಬ್ದಗಳಿಂದ ಟೀಕಿಸಿ, ಪ್ರಧಾನಿಯ ಸಾವನ್ನು ಬಯಸುವವರ ಪತ್ನಿ ಅಕಾಡೆಮಿಯ ಸದಸ್ಯರಾಗಿ ಮುಂದುವರಿಯುವುದು ಸಮಂಜಸ ಅಲ್ಲ. ಅದಕ್ಕಾಗಿ ನಿಮ್ಮನ್ನ ಅಕಾಡೆಮಿ ಸದಸ್ಯತನದಿಂದ ವಜಾಗೊಳಿಸಲಾಗಿದೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಹೊರಡಿಸಿದ ಅಧಿಕೃತ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎತ್ತಿಗೆ ಜ್ವರ, ಎಮ್ಮೆಗೆ ಬರೆ ಯಾಕೆ..?
ಪತಿ ಲುಕ್ಮನ್ ಮೋದಿ ವಿರುದ್ಧ ಹಾಕಿದ ಪೋಸ್ಟ್ ಗೆ ಪತ್ನಿ ನಫೀಸಾ ಅವರನ್ನು ಬ್ಯಾರಿ ಸಾಹಿತ್ಯ ಅಕಾಡೆಮಿಯಿಂದ ರಾತೋರಾತ್ರಿ ಕಿತ್ತೆಸೆದಿರುವ ವಿಚಾರ ಟೀಕೆಗೆ ಕಾರಣವಾಗಿದೆ. ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸದೆ ಅಕಾಡೆಮಿ ಏಕಾಏಕಿ ನಿರ್ಣಯ ಕೈಗೊಂಡಿದೆ ಎಂದು ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿಯೂ ಮೋದಿ ವಿರುದ್ದ ಟೀಕೆ ಮಾಡುತ್ತಲೇ ಇದ್ದಾರೆ. ಹಾಗಾಗಿ ನಿರ್ಮಲಾ ಅವರನ್ನು ಯಾಕೆ ಸ್ಥಾನದಲ್ಲಿ ಮುಂದುವರಿಸಿದ್ದೀರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Read: ಪ್ರಧಾನಿ ಮೋದಿ ಬೀದಿ ಹೆಣವಾಗಲೆಂದು ಫೇಸ್ಬುಕ್ ಪೋಸ್ಟ್ ; ಕೊಣಾಜೆ ಠಾಣೆಗೆ ದೂರು
A case was filed in Konaje Police Station on Lukam Adyar for a derogatory post on PM Modi and now his wife Nafisa has been terminated from Beary Sahitya Academy post for husbands post on Facebook.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am