ಬ್ರೇಕಿಂಗ್ ನ್ಯೂಸ್
26-04-21 05:30 pm Mangalore Correspondent ಕರಾವಳಿ
ಮಂಗಳೂರು, ಎ.26: ಗರ್ಭಿಣಿ ಮಹಿಳೆಯನ್ನು ನಡುರಾತ್ರಿಯಲ್ಲಿ ಕಾರಿನಲ್ಲಿ ಕರೆತರುತ್ತಿದ್ದಾಗ ಕಾರು ಕೆಟ್ಟು ಹೋಗಿತ್ತು. ಇನ್ನೇನು ಮಾಡುವುದೆಂದು ಆಕೆಯ ಗಂಡ ಯೋಚನೆ ಮಾಡುತ್ತಿದ್ದಾಗ, ಅಲ್ಲಿದ್ದ ಪೊಲೀಸರು ಸಹಾಯಕ್ಕೆ ಬಂದಿದ್ದಾರೆ. ಮಾನವೀಯ ಕಾರ್ಯ ಮಾಡಿದ ಕಂಕನಾಡಿ ಗ್ರಾಮಾಂತರ ಠಾಣೆಯ ಎಎಸ್ಐ ಹರೀಶ್ ಕೆ. ಮತ್ತು ಕಾನ್ ಸ್ಟೇಬಲ್ ವಿಜಯ್ ಕುಮಾರ್ ಅವರನ್ನು ಪೊಲೀಸ್ ಕಮಿಷನರ್ ಸನ್ಮಾನಿಸಿದ್ದಾರೆ.
ಗುರುವಾಯನಕೆರೆಯ ಶಾಹಿದಾ (29) ಎಂಬ ಮಹಿಳೆಗೆ ಎ.23ರಂದು ರಾತ್ರಿ ಹೆರಿಗೆ ನೋವು ಕಾಣಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಗಂಡ ಸಿದ್ದಿಕ್ ತನ್ನ ಆಲ್ಟೋ ಕಾರಿನಲ್ಲಿ ಮಂಗಳೂರಿಗೆ ಕರೆತರುತ್ತದ್ದರು. ಫರಂಗಿಪೇಟೆ ಬಳಿಯ ಅರ್ಕುಳಕ್ಕೆ ತಲುಪಿದಾಗ ನಡುರಾತ್ರಿ 1.30 ಗಂಟೆ ಆಗಿತ್ತು. ಕಾರು ರಸ್ತೆ ಮಧ್ಯೆ ಕೆಟ್ಟು ನಿಂತಿದ್ದರಿಂದ ದಿಕ್ಕು ತೋಚದಾಗಿತ್ತು. ಈ ವೇಳೆ, ಅಲ್ಲಿಯೇ ಸ್ವಲ್ಪ ದೂರದಲ್ಲಿ ಚೆಕ್ ಪೋಸ್ಟ್ ಹಾಕಿದ್ದ ಪೊಲೀಸರ ಬಳಿಗೆ ಸಿದ್ದಿಕ್ ತೆರಳಿದ್ದಾರೆ. ಕಾರು ಕೆಟ್ಟು ಹೋಗಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದು, ಕೂಡಲೇ ಅಲ್ಲಿದ್ದ ಪೊಲೀಸರು ನೆರವಿಗೆ ಬಂದಿದ್ದಾರೆ.
ಕಂಕನಾಡಿ ಗ್ರಾಮಾಂತರ ಠಾಣೆಯ ಎಎಸ್ಐ ಹರೀಶ್ ತಮ್ಮದೇ ಇಲಾಖೆಯ ಜೀಪಿನಲ್ಲಿ ಗರ್ಭಿಣಿಯನ್ನು ಕುಳ್ಳಿರಿಸಿ, ಮಂಗಳೂರಿನ ಎಜೆ ಆಸ್ಪತ್ರೆಗೆ ತಲುಪಿಸಿದ್ದಾರೆ. ಶಾಹಿದಾ ಬಾನು ಮರುದಿನ ಬೆಳಗ್ಗೆ ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ವಿಷಯ ತಿಳಿದ ಕಮಿಷನರ್ ಶಶಿಕುಮಾರ್, ಇಬ್ಬರು ಸಿಬಂದಿಯನ್ನೂ ಕಚೇರಿಗೆ ಕರೆಸಿ ಸನ್ಮಾನಿಸಿದ್ದಾರೆ. ಸೂಕ್ತ ಸಮಯಕ್ಕೆ ನೆರವಿಗೆ ಬಂದ ಸಿಬಂದಿಯನ್ನು ಅಭಿನಂದಿಸುತ್ತೇನೆ. ಮಹಿಳೆಯ ಬಗ್ಗೆ ಸಿಬಂದಿ ಸಕಾಲದಲ್ಲಿ ನೆರವಿಗೆ ಬರದಿರುತ್ತಿದ್ದರೆ, ತಾಯಿ ಮತ್ತು ಮಗುವಿಗೆ ಅಪಾಯ ಬರುವ ಸಾಧ್ಯತೆಯಿತ್ತು. ಕೆಲವರು ಆಂಬುಲೆನ್ಸ್ ಕರೆಸಿ, ಕಳಿಸಿಕೊಡುವ ವ್ಯವಸ್ಥೆ ಮಾಡುತ್ತಾರೆ. ಆದರೆ, ಇವರು ತಮ್ಮದೇ ವಾಹನದಲ್ಲಿ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ ಎಂದು ಕಮಿಷನರ್ ಇಬ್ಬರು ಸಿಬಂದಿಯ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ರಾತ್ರಿ ವೇಳೆ ಕರ್ಫ್ಯೂ ಇರುವುದರಿಂದ ಪೊಲೀಸರು ಹೆದ್ದಾರಿಯ ಅಲ್ಲಲ್ಲಿ ಗಸ್ತು ನಿರತರಾಗಿದ್ದಾರೆ. ಚೆಕ್ ಪೋಸ್ಟ್ ಹಾಕಿ, ವಿನಾಕಾರಣ ವಾಹನ ಚಲಾಯಿಸುವ ಮಂದಿಯನ್ನು ನಿಯಂತ್ರಿಸುತ್ತಿದ್ದಾರೆ. ಇದರ ಮಧ್ಯೆಯೇ ಇಬ್ಬರು ಪೊಲೀಸ್ ಸಿಬಂದಿ ಮಾನವೀಯ ಕಾರ್ಯ ಮಾಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದೆ.
Two police personnel of Kankandy Rural police station were felicitated by Mangalore Police Commissioner for helping in shifting a pregnant woman undergoing labour pain to the hospital in the police car. The police personnel are Mangaluru rural police station assistant sub-inspector Harish K and constable Vijay Kumar.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am