ಬ್ರೇಕಿಂಗ್ ನ್ಯೂಸ್
24-04-21 11:17 pm Mangaluru correspondent ಕರಾವಳಿ
ಮಂಗಳೂರು, ಎ.24: ಕಳೆದ ಬಾರಿ ದಿಢೀರ್ ಲಾಕ್ಡೌನ್ ಎದುರಾದಾಗಲೂ ಬೀದಿಯಲ್ಲಿ ಮಲಗುವ ಅನಾಥರು, ಭಿಕ್ಷುಕರು, ಹೊಟೇಲ್ ಊಟವನ್ನೇ ನಂಬಿಕೊಂಡು ಬದುಕುವ ಬಡವರು ಊಟಕ್ಕಿಲ್ಲದೆ ಪರದಾಡಿದ್ದರು. ಈ ಬಾರಿ ವಾರಾಂತ್ಯದ ಕರ್ಫ್ಯೂ ಸಂದರ್ಭವೂ ಅದೇ ಸ್ಥಿತಿ ಎದುರಾಗಿತ್ತು. ಮಂಗಳೂರು ನಗರದಲ್ಲಿ ಅಲ್ಲಲ್ಲಿ ಮಲಗುವ ಬಡಪಾಯಿಗಳಿಗೆ ಊಟಕ್ಕಿಲ್ಲದೆ ಪರದಾಡುವ ಸ್ಥಿತಿ ಬಂದಿತ್ತು. ಇದನ್ನು ಮನಗಂಡ ಕೆಲವು ಸಂಸ್ಥೆಗಳು ಸಂಜೆ ಹೊತ್ತಿಗೆ ಊಟದ ವ್ಯವಸ್ಥೆ ಮಾಡಿದ್ದವು.
ಶಾಸಕ ವೇದವ್ಯಾಸ ಕಾಮತ್ ನೇತೃತ್ವದ ಮಂಗಳೂರಿನ ಸೇವಾಂಜಲಿ ಟ್ರಸ್ಟ್ ನಿಂದ 500 ಮಂದಿಗೆ ಆಗುವಷ್ಟು ಊಟ ತಯಾರಿಸಿ, ಬೀದಿ ಅಲೆಯುವ ಮಂದಿಗೆ ವಿತರಿಸಲಾಯಿತು. ಸಂಜೆ ಹೊತ್ತಿಗೆ ಮಿನಿ ಟೆಂಪೋದಲ್ಲಿ ಹಾಕ್ಕೊಂಡು ಬಂದ ಟ್ರಸ್ಟ್ ಸದಸ್ಯರು ಊಟ, ಊಟ ಎಂದು ಕರೆಯುತ್ತಲೇ ಎಲ್ಲೆಲ್ಲೋ ಅನ್ನ, ನೀರು ಇಲ್ಲದೆ ಮೂಲೆ ಸೇರಿದ್ದವರು ಓಡೋಡಿ ಬಂದರು. ನೆಹರು ಮೈದಾನ, ಸ್ಟೇಟ್ ಬ್ಯಾಂಕ್, ಹಂಪನಕಟ್ಟೆ ಪರಿಸರದಲ್ಲಿ ರಸ್ತೆ ಬದಿಯನ್ನೇ ಜೀವನ ಮಾಡಿಕೊಂಡಿರುವ ಅದೆಷ್ಟೋ ಮಂದಿಯಿದ್ದಾರೆ.
ಹೊಟೇಲ್ ಗಳಿದ್ದರೆ ಬೇಡಿದ ಹಣದಲ್ಲಿ ಒಂದಷ್ಟು ಹೊಟ್ಟೆಗಿಳಿಸಿಕೊಳ್ಳುತ್ತಾರೆ. ಈಗ ಕರ್ಫ್ಯೂ ಕಾರಣದಿಂದ ಹೊಟೇಲ್ ಇನ್ನಿತರ ಎಲ್ಲವೂ ಬಂದ್ ಆಗಿದ್ದರಿಂದ ಬಡಪಾಯಿಗಳ ಹೊಟ್ಟೆಗೆ ಬೀಗ ಬಿದ್ದಿತ್ತು. ಸೇವಾಂಜಲಿಯವರು ಊಟ ರೆಡಿ ಮಾಡಿಕೊಂಡು ತಂದಾಗ ಅದೆಷ್ಟೋ ಹೊಟ್ಟೆ ತಣ್ಣಗೆ ಮಾಡಿಕೊಂಡಿದ್ದಾರೆ. ಟ್ರಸ್ಟ್ ಸದಸ್ಯರು ಹಾಳೆ ತಟ್ಟೆಯಲ್ಲಿ ಪಲಾವ್ ಹಾಕಿ ಕೊಡುತ್ತಿದ್ದರೆ, ಕೆಲವರು ಮತ್ತಷ್ಟು ತೆಗೆದು ತಿನ್ನುತ್ತಿದ್ದರು.
ಹಂಪನಕಟ್ಟೆಯಲ್ಲಿ ಕಾಶ್ಮೀರಿ ಮುಸ್ಲಿಮರು ಕೂಡ ಇದ್ದರು. ಎಲ್ಲೋ ಮೂಲೆಯಲ್ಲಿ ಕುಟುಂಬದ ಜೊತೆ ವಾಸಿಸುತ್ತಾ ಬೀದಿಯಲ್ಲಿ ಬಟ್ಟೆಗಳನ್ನು ಮಾರುವ ವೃತ್ತಿಯವರು. ಈ ಬಾರಿ ರಮ್ಜಾನ್ ಉಪವಾಸ ಆಚರಿಸಿದ್ದ ಅವರಿಗೂ ಇಂದು ಊಟ ಸಿಗದೆ ಕಂಗಾಲಾಗಿದ್ದರು. ಸೇವಾಂಜಲಿ ಟ್ರಸ್ಟ್ ಊಟ ತಂದಿದ್ದನ್ನು ನೋಡಿ, ದೇವರೇ ಬಂದಂಗಾಯ್ತು ಅನ್ನುತ್ತಲೇ ಅವರಿಗೆ ಆಶೀರ್ವಾದ ಕೋರುತ್ತಾ ತಟ್ಟೆಯಲ್ಲಿ ಕೊಟ್ಟ ಅನ್ನವನ್ನು ಜೋಪಾನವಾಗಿ ತೆಗೆದು ಮನೆಗೊಯ್ದಿದ್ದು ಅಲ್ಲಿನ ಚಿತ್ರಣವನ್ನು ಕಟ್ಟಿಕೊಟ್ಟಿತ್ತು.
No food no Restaurants in Mangalore city but Sevanjali trust came forward to lend free food to the hungry on streets during the weekend curfew on Saturday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am