ಬ್ರೇಕಿಂಗ್ ನ್ಯೂಸ್
21-04-21 10:27 pm Mangaluru correspondent ಕರಾವಳಿ
ಮಂಗಳೂರು, ಎ.21: ನೈಟ್ ಕರ್ಫ್ಯೂ ಕಟ್ಟುನಿಟ್ಟಿನ ಜಾರಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ರಾತ್ರಿಯೂ ಫೀಲ್ಡಿಗಿಳಿದು ಕಾನೂನು ಉಲ್ಲಂಘಿಸುವ ಜನರಿಗೆ ಬಿಸಿ ಮುಟ್ಟಿಸಿದ್ದಾರೆ.
ಮೊದಲಿಗೆ ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅಲ್ಲಿ ಉತ್ತರ ಕರ್ನಾಟಕದ ಬಸ್ ಗಳಿಗೆ ಹತ್ತಲು ರೆಡಿಯಾಗಿದ್ದ ಕಾರ್ಮಿಕರನ್ನು ಮಾತನಾಡಿಸಿದರು. ಅವರಲ್ಲಿ ಒಬ್ಬಾತ, ಪೈಂಟ್ ಕೆಲಸ ಮಾಡುತ್ತಿದ್ದೇನೆ. ಕೊರೊನಾದಿಂದಾಗಿ ಕೆಲಸ ಇಲ್ಲ.ಹಾಗಾಗಿ ಊರಿಗೆ ಹೊರಟಿದ್ದೇನೆ ಎಂದ. ಮತ್ತೂ ಕೆಲವರು ಇಲ್ಲಿ ಕೆಲಸ ಸಿಗುತ್ತಿಲ್ಲ. ನಾವು ಊರು ಕಡೆ ಹೊರಟಿದ್ದೇವೆ ಎಂದು ಹೇಳಿದರು. ಇದನ್ನು ಕೇಳಿದ ಜಿಲ್ಲಾಧಿಕಾರಿ, ಕಾರ್ಮಿಕರ ಮನವೊಲಿಸುವ ಕೆಲಸ ಮಾಡಿದ್ರು. ಎರಡು ವಾರಕ್ಕೆ ಮುಗಿಯುತ್ತೆ ಲಾಕ್ಡೌನ್.
ಮತ್ತೆ ಎಂದಿನ ಹಾಗೆ ಕೆಲಸ ಸಿಗುತ್ತೆ.. ಹೋಗಬ್ಯಾಡ್ರೀ ಎಂದು ಹೇಳಿದರು. ಕಮಿಷನರ್ ಕೂಡ ಗುಳೇ ಹೊರಟ ಕಾರ್ಮಿಕರನ್ನು ಮನವೊಲಿಸುವ ಕೆಲಸ ಮಾಡಿದ್ರು. ಕಾರ್ಮಿಕರು ಆಮೇಲೆ ಎಲ್ಲ ಸರಿಯಾದ್ಮೇಲೆ ಬರ್ತೀವಿ ಎನ್ನುತ್ತಾ ಬಸ್ ಹತ್ತಿದರು.
ಆಬಳಿಕ ಜಿಲ್ಲಾಧಿಕಾರಿ ಕದ್ರಿ ಸರ್ಕಿಟ್ ಹೌಸ್ ಬಳಿ ಪೊಲೀಸರು ಬ್ಯಾರಿಕೇಡ್ ಹಾಕಿದ್ದಲ್ಲಿಗೆ ತೆರಳಿದರು. ಬೈಕ್ ಸವಾರರನ್ನು ನಿಲ್ಲಿಸಿ, ಏಯ್ ನಿಮ್ಗೆ ಕರ್ಫ್ಯೂ ಹಾಕಿರೋದು ಗೊತ್ತಿಲ್ವೇನ್ರೀ.. ಯಾಕೆ ಲೇಟಾಗಿ ಹೊರಟಿದ್ದೀರಿ ಅಂತ ದಬಾಯಿಸಿದರು. ಇದೇ ವೇಳೆ ಒಬ್ಬರು ವಿಮಾನ ನಿಲ್ದಾಣಕ್ಕೆ ಹೋಗ್ತಾ ಇದ್ದೇನೆ, ಅರ್ಜೆಂಟ್ ಹೋಗ್ಬೇಕು, ಬೇಗ ಬಿಡಿ ಅಂತಾ ಡೀಸಿ ಬಳಿ ಅಂಗಲಾಚಿದ.
ಆದರೆ, ಎರಡು ನಿಮಷ ಇರಪ್ಪಾ.. ಈಗ ಕಮಿಷನರ್ ಬರ್ತಾರೆ, ವೆರಿಫಿಕೇಶನ್ ಮಾಡಿ ಬಿಡ್ತಾರೆ ಎಂದ್ರು. ಆನಂತ್ರ ಕಮಿಷನರ್ ಕೂಡ ಸ್ಥಳಕ್ಕೆ ಬಂದ್ರು. ಅರ್ಜೆಂಟ್ ಮಾಡಿದ ವ್ಯಕ್ತಿಯನ್ನು ಕುರಿತು ಏನಪ್ಪಾ ಅಷ್ಟು ಅರ್ಜೆಂಟ್ ಏನೈತಿ ನಿಂಗೆ. ಎರಡು ನಿಮಿಷ ನೋಡ್ತೀನಿ, ಫ್ಲೈಟ್ ಟಿಕೆಟ್ ಕೊಡು ಎಂದು ಹೇಳಿ ನೋಡಿ ಕಳಿಸಿಕೊಟ್ಟರು.
ಇದೇ ವೇಳೆ, ಒಬ್ಬಾತ ತಾನು ಎಚ್ ಡಿಎಫ್ ಸಿ ಉದ್ಯೋಗಿ ಎಂದು ಜಿಲ್ಲಾಧಿಕಾರಿ ಬಳಿ ಹೇಳಿಬಿಟ್ಟ. ಏನಪ್ಪಾ ರಾತ್ರಿ ವರೆಗೂ ಬ್ಯಾಂಕಲ್ಲೇನು ಕೆಲಸ ಇತ್ತು ಎಂದಿದ್ದಕ್ಕೆ, ಅಡಿಟ್ ಕೆಲಸ ಇತ್ತು ಎಂದುಬಿಟ್ಟ. ಎಲ್ಲಿ ಬ್ಯಾಂಕ್ ಎಡ್ರಸ್ ಹೇಳು. ನಾಳೆ ಚೆಕ್ ಮಾಡ್ತೀನಿ. ಸುಳ್ಳು ಹೇಳಿದ್ರೆ ಸಸ್ಪೆಂಡ್ ಮಾಡ್ತೀನಿ ಎಂದು ವಾರ್ನ್ ಮಾಡಿ ಕಳಿಸಿದ್ರು ಡೀಸಿ. ಇದೇ ವೇಳೆ ಜೊಮೆಟೋ, ಸ್ವಿಗ್ಗಿ ಡೆಲಿವರಿ ಮಾಡೋ ಯುವಕರು ಬೈಕಲ್ಲಿ ಬಂದ್ರು.
ರೆಸ್ಟೋರೆಂಟ್ ಬಂದ್ ಆಗಿದ್ಯಲ್ಲಪ್ಪಾ.. ನೀವು ಏನ್ ಡೆಲಿವರಿ ಮಾಡ್ತೀರ್ರೀ.. ಎಂದು ಕಮಿಷನರ್ ರೇಗಾಡಿದ್ರು. ಇವತ್ತು ಎಲ್ರನ್ನೂ ಬಿಡ್ತಾ ಇದ್ದೇವೆ, ನಾಳೆಯಿಂದ ಕೇಸ್ ಹಾಕ್ತೀವಿ ಎಂದು ಹೇಳಿ ಎಲ್ಲರನ್ನೂ ಕಳಿಸಿಕೊಟ್ಟರು. ಮೊನ್ನೆಯ ಹಾಗೆ ಅಷ್ಟೇನೂ ವಾಹನಗಳು ಬಂದು ಗಿಜಿಗುಡಲಿಲ್ಲ. ಸ್ವಲ್ಪ ಹೊತ್ತಲ್ಲೇ ವಾಹನಗಳು ಬರೋದು ಕಮ್ಮಿಯಾಯ್ತು. ಡೀಸಿ, ಕಮಿಷನರ್ ತಮ್ಮ ಪಾಡಿಗೆ ಜಾಗ ಖಾಲಿ ಮಾಡಿದ್ರು..
Mangalore Dc Rajendra kumar and police commissioner Shashi Kumar Visited various centres in city and warned public for voilating covid guidelines after the govt ordered Night Curfew in the State.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am