ಬ್ರೇಕಿಂಗ್ ನ್ಯೂಸ್
15-04-21 11:34 am Mangalore Correspondent ಕರಾವಳಿ
ಮಂಗಳೂರು, ಎ.15: ಮೀನುಗಳಿಂದ ತುಂಬಿದ್ದ ಬೋಟನ್ನು ಕಗ್ಗತ್ತಲ ರಾತ್ರಿಯಲ್ಲಿ ತಮಿಳುನಾಡಿನ ಅಲೆಗ್ಸಾಂಡರ್ ಚಲಾಯಿಸುತ್ತಿದ್ದ. ಆದರೆ ಒಂದೇ ಸಮನೆ ಗಾಳಿ ಮಳೆಯಾಗಿದ್ದು ತೂಫಾನ್ ಎದ್ದ ಕಾರಣ ಬೋಟ್ ಕಂಟ್ರೋಲ್ ಗೆ ಬರುತ್ತಿರಲಿಲ್ಲ. ಭಾರೀ ಗಾಳಿ ಮಳೆಗೆ ಕಡಲಲ್ಲಿ ಮುಂದೇನಿದೆ ಎಂಬುದೂ ಗೊತ್ತಾಗುತ್ತಿರಲಿಲ್ಲ. ರಾತ್ರಿ ಸುಮಾರು ಒಂದು ಗಂಟೆ ಆಗಿರಬಹುದು. ಹತ್ತಿರಕ್ಕೆ ತಲುಪಿದಾಗ ನಮ್ಮ ಮುಂದೆ ಬೃಹತ್ ಹಡಗು ಹೋಗುತ್ತಿರುವುದು ಗೊತ್ತಾಗಿದೆ. ಬೋಟ್ ಹಡಗಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕ ಅಲೆಕ್ಸಾಂಡರ್ ಬೋಟನ್ನು ಒಮ್ಮೆಲೇ ಬಲಕ್ಕೆ ತಿರುಗಿಸಲು ನೋಡಿದ್ದಾನೆ. ಆದರೆ ಅದಾಗಲೇ ಕಾಲ ಮಿಂಚಿ ಹೋಗಿತ್ತು. ಒಮ್ಮೆಲೇ ಹಡಗಿಗೆ ಅಪ್ಪಳಿಸಿದ ಬೋಟ್ ಪಲ್ಟಿಯಾಗಿತ್ತು..
ಅರಬ್ಬೀ ಸಮುದ್ರ ಮಧ್ಯೆ ದುರಂತಕ್ಕೀಡಾದ ಕೇರಳ ಮೂಲದ ಮೀನುಗಾರಿಕಾ ಬೋಟಿನಲ್ಲಿ ಅದೃಷ್ಟವಶಾತ್ ಬದುಕಿ ಬಂದಿರುವ ಕಾರ್ಮಿಕ, ಪಶ್ಚಿಮ ಬಂಗಾಳ ಮೂಲದ ಸುನಿಲ್ ದಾಸ್ ಈ ಮಾತು ಹೇಳುತ್ತಿದ್ದರೆ ಆತನ ಮೈಬೆವರಿತ್ತು..
ದುರಂತದಲ್ಲಿ ಮೂರು ಮಂದಿ ಮೃತಪಟ್ಟಿದ್ದರೆ, ಇಬ್ಬರನ್ನು ರಕ್ಷಣೆ ಮಾಡಲಾಗಿತ್ತು. ಇನ್ನುಳಿದ 9 ಮಂದಿ ಕಣ್ಮರೆಯಾಗಿದ್ದಾರೆ. ಈ ನಡುವೆ ಬದುಕಿ ಬಂದಿರುವ ಇಬ್ಬರು ಮಂಗಳೂರು ತಲುಪಿದ್ದು ಮಾಧ್ಯಮಕ್ಕೆ ದುರಂತದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಾವು ಇಂಜಿನ್ ರೂಂ ಪಕ್ಕದಲ್ಲೇ ಕುಳಿತಿದ್ದೆವು. ಹಿಂತಿರುಗಿ ಹೋಗುತ್ತಿದ್ದ ಕಾರಣ ಉಳಿದವರೆಲ್ಲ ಬೋಟ್ ಬೇಸ್ಮೆಂಟ್ ನಲ್ಲಿರುವ ರೂಮ್ ನಲ್ಲಿ ಮಲಗಿದ್ದರು. ಬೋಟ್ ಪಲ್ಟಿಯಾಗುತ್ತಿದ್ದಂತೆ ನಾವು ಕಡಲಿಗೆ ಎಸೆಯಲ್ಪಟ್ಟೆವು. ಬೇಸ್ಮೆಂಟ್ ರೂಮ್ ನಲ್ಲಿದ್ದವರ ಮೇಲೆ ಶೇಖರಿಸಿ ಇಡಲಾಗಿದ್ದ ಭಾರೀ ಪ್ರಮಾಣದ ಮೀನು ಹಾಗು ಬಲೆ, ಮಂಜುಗಡೆ ಬಿದ್ದಿರಬೇಕು. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಹೊರಬರಲಾಗಿಲ್ಲ. ದುರಂತಕ್ಕೆಡಾದ ಬೋಟ್ ಕಡಲಿನ ಆಳಕ್ಕೆ ಜಾರಿದೆ.
ನಾವಿಬ್ಬರು ಸಮುದ್ರದಲ್ಲಿ ಈಜಿಕೊಂಡು ಪ್ರಾಣ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ನಮ್ಮನ್ನು ಕಂಟೇನರ್ ಹಡಗಿನ ಸಿಬ್ಬಂದಿಗಳು ನೋಡಿ ರಕ್ಷಣೆ ಮಾಡಿದ್ದಾರೆ. ನಂತರ ಬೋಟ್ ದುರಂತ ಸಂಭವಿಸಿದ ಕುರಿತು ಕೋಸ್ಟ್ ಗಾರ್ಡ್ ಗೆ ಮಾಹಿತಿ ರವಾನಿಸಲಾಯಿತು. ಅದಕ್ಕೆ ಸ್ಪಂದಿಸಿದ ಕೋಸ್ಟ್ ಗಾರ್ಡ್ ರಕ್ಷಣಾ ಕಾರ್ಯಾಚರಣೆಗೆ ಹಡಗನ್ನು ಕಳಿಸಿತ್ತು. ಅದರೆ ಅವರು ತಲಪುವಷ್ಟರಲ್ಲಿ12 ಮಂದಿ ಮೀನುಗಾರರು ಬೋಟ್ ಜೊತೆ ಕಡಲಾಳಕ್ಕೆ ಜಾರಿದ್ದರು. ನಮ್ಮಿಬ್ಬರನ್ನು ಕೋಸ್ಟ್ ಗಾರ್ಡ್ ತಮ್ಮ ಹಡಗಿನಲ್ಲಿ ಕರೆತಂದು ಮಂಗಳೂರಿಗೆ ತಲುಪಿಸಿದ್ದಾರೆ. ಹೀಗೆಂದು ಸುನಿಲ್ ದಾಸ್ ಮತ್ತು ತಮಿಳುನಾಡಿನ ವೇಲ್ ಮುರುಗನ್ ಹೇಳಿದರು.
ಮಂಗಳೂರಿನಿಂದ 45 ನಾಟಿಕಲ್ ಮೈಲ್ಸ್ ದೂರದಲ್ಲಿ ಸೋಮವಾರ ರಾತ್ರಿ ದುರಂತ ಸಂಭವಿಸಿತ್ತು. ಬೋಟ್ ನಲ್ಲಿ ತಮಿಳುನಾಡಿನ 7 ಹಾಗು ಪಶ್ಚಿಮ ಬಂಗಾಳದ 7 ಮಂದಿ ಕಾರ್ಮಿಕರು ಇದ್ದರು.
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಬೇಪೂರ್ ಬಂದರಿನಿಂದ ' ರಬಾ' ಹೆಸರಿನ ಮೀನುಗಾರಿಕಾ ಬೋಟ್ ಆದಿತ್ಯವಾರ ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಆಳ ಸಮುದ್ರಕ್ಕೆ ಹೊರಟಿತ್ತು. ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಬಂಪರ್ ಕ್ಯಾಚ್ ಸಿಕ್ಕಿದ್ದರಿಂದ ಒಂದೇ ದಿನದಲ್ಲಿ ಬೇಪೂರ್ ಬಂದರಿಗೆ ಮರಳಿದ್ದರು. ಆದರೆ, 14 ಮಂದಿಯ ಭವಿಷ್ಯವನ್ನು ವಿಧಿ ಬೇರೆಯೇ ಬರೆದಿತ್ತು.
ಸಿಂಗಾಪುರದ ಹಡಗು ಡಿಕ್ಕಿಯಾಗಿ ಬೋಟ್ ದುರಂತ ; ಇಬ್ಬರ ರಕ್ಷಣೆ, ಮೂವರ ಶವ ಪತ್ತೆ , 9 ಮಂದಿ ನಾಪತ್ತೆ
Fishing boat capsize in mangalore after colliding with ship survivors recall nightmare. Thirty-seven-year old Velumurugan, shivered with terror recalling the boat accident that occurred on Tuesday April 13. He was one of the lucky survivors.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm