ಬ್ರೇಕಿಂಗ್ ನ್ಯೂಸ್
02-04-21 06:14 pm Mangalore Correspondent ಕರಾವಳಿ
ಸುಳ್ಯ, ಎ.2 : ದೇವರು ಕೊಟ್ಟರೂ ಪೂಜಾರಿ ಬಿಡಲ್ಲ ಅಂತಾರಲ್ಲ.. ಹಾಗೇ ಕತೆಯಾಗಿದೆ ಇಲ್ಲಿನ ಪರಿಸ್ಥಿತಿ. ಭಾರೀ ಮಳೆಗೆ ಆಕೆಯ ಮನೆ ಕುಸಿದು ಹೋಗಿತ್ತು. ರಾಜ್ಯ ಸರಕಾರ ಬಳಿಕ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮನೆ ಕಟ್ಟಿಕೊಡಲು 5 ಲಕ್ಷ ಪರಿಹಾರ ಮಂಜೂರು ಮಾಡಿತ್ತು. ಆದರೆ, ಆ ಹಣದಲ್ಲಿ ಮಹಿಳೆಗೆ ಮನೆ ಕಟ್ಟಿಕೊಡದೆ ಪಂಚಾಯತ್ ಪ್ರತಿನಿಧಿಗಳೇ ಸೇರಿ ತಿಂದು ಹಾಕಿರುವ ಗಂಭೀರ ಆರೋಪ ಗುತ್ತಿಗಾರಿನಲ್ಲಿ ಕೇಳಿಬಂದಿದೆ.
ಗುತ್ತಿಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕೂರು ಗ್ರಾಮದ ಸಾಲ್ತಡಿ ಎಂಬಲ್ಲಿ ಮೂರು ವರ್ಷಗಳ ಹಿಂದೆ ಭಾರೀ ಮಳೆಗೆ ಎಸ್ಸಿ ಸಮುದಾಯಕ್ಕೆ ಸೇರಿದ ಗಿರಿಜಾ ಎಂಬಾಕೆಯ ಮನೆ ಕುಸಿದು ಬಿದ್ದಿತ್ತು. ಬಳಿಕ ಪಂಚಾಯತ್ ಲೆಕ್ಕಾಧಿಕಾರಿ, ಉಗ್ರಾಣಿ, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಸುಳ್ಯದಲ್ಲಿ ಹೆಸರು ಮಾಡಿದ್ದ ತಹಸೀಲ್ದಾರ್ ಕುಂಞ ಅಹ್ಮದ್ ಮೂಲಕ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದರು.
ತಹಸೀಲ್ದಾರ್ ವರದಿಯಂತೆ ಫಲಾನುಭವಿ ಗಿರಿಜಾ ಅವರ ಸಿಂಡಿಕೇಟ್ ಬ್ಯಾಂಕಿನ ಖಾತೆಗೆ 5 ಲಕ್ಷ ರೂಪಾಯಿ ಹಣ ಮಂಜೂರಾಗಿತ್ತು. ಈ ವೇಳೆ, ಮನೆಯವರು ತಾವೇ ಖಾಸಗಿ ಇಂಜಿನಿಯರ್ ಮೂಲಕ ಮನೆಯ ಕೆಲಸವನ್ನು ಮಾಡಿಸುವುದಾಗಿ ಪಂಚಾಯತ್ ಅಧಿಕಾರಿಗಳಿಗೆ ಹೇಳಿದ್ದರು. ಆದರೆ, ಆಗ ಗುತ್ತಿಗಾರು ಪಂಚಾಯತ್ ಅಧ್ಯಕ್ಷರಾಗಿದ್ದ ಅಚ್ಚುತ್ತ ಗುತ್ತಿಗಾರು ಎಂಬವರು ಖುದ್ದಾಗಿ ತಾನೇ ಕೆಲಸ ಮಾಡಿಸಿಕೊಡುವುದಾಗಿ ಮುಂದೆ ಬಂದಿದ್ದರು. ಅದರಂತೆ ಪಂಚಾಯತ್ ಇಂಜಿನಿಯರನ್ನು ಕರೆಸಿ, ಅದೇ ವರ್ಷದಲ್ಲಿ ಮನೆಗೆ ಫೌಂಡೇಶನ್ ನಿರ್ಮಿಸಿಕೊಟ್ಟಿದ್ದರು.
ಆಬಳಿಕ ಗೋಡೆ ಕಟ್ಟುವ ಅರ್ಧ ಕಾಮಗಾರಿ ನಡೆದಿದ್ದು, ಒಂದು ಬದಿಯ ಲಿಂಟಲ್ ವರೆಗೆ ಕೆಲಸ ಮಾಡಿ ನಿಲ್ಲಿಸಿದ್ದಾರೆ. ಈಗ ಕೆಲಸ ಅರ್ಧಕ್ಕೆ ನಿಂತು ಎರಡು ವರ್ಷ ಕಳೆದಿದೆ. ಈ ಬಗ್ಗೆ ಅಂದಿನ ಪಂಚಾಯತ್ ಅಧ್ಯಕ್ಷ ಅಚ್ಚುತ ಗುತ್ತಿಗಾರು ಬಳಿ ಕೇಳಿದರೆ, ಮಾಡಿ ಕೊಡ್ತೇನೆ ಎನ್ನುತ್ತಲೇ ಕಾಲ ತಳ್ಳಿದ್ದಾರೆ, ಇತ್ತ ಹಣವೂ ಇಲ್ಲ. ಮನೆಯೂ ಇಲ್ಲ ಎನ್ನುವ ಸ್ಥಿತಿಯಾಗಿದೆ ಎಂದು ಅಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಫಲಾನುಭವಿ ಮಹಿಳೆ ಗಿರಿಜಾ ಬಳಿ ಕೇಳಿದರೆ, ನಾನು ಪಾಸ್ ಬುಕ್ಕಿನಿಂದ ಮೂರು ಲಕ್ಷ ರೂಪಾಯಿ ತೆಗೆದು ಕೊಟ್ಟಿದ್ದೇನೆ. ಅರ್ಧಕ್ಕೆ ಕೆಲಸ ನಿಂತಿದ್ದು, ಎರಡು ವರ್ಷ ಕಳೆಯಿತು. ಎರಡು ಬಾರಿಯ ಮಳೆಗಾಲದಲ್ಲೂ ಟರ್ಪಾಲ್ ಹಾಕಿ ಮಳೆಗಾಲ ಕಳೆದಿದ್ದೇವೆ. ಈ ಬಾರಿಯೂ ಮತ್ತೆ ಮಳೆ ಬರುತ್ತಿದೆ. ನಮ್ಮ ಟರ್ಪಾಲ್ ಹರಿದು ಹೋಗಿದೆ. ಪಾಸ್ ಬುಕ್ ಅನ್ನು ಅಚ್ಚುತರೇ ತೆಗೆದುಕೊಂಡು ಹೋಗಿದ್ದಾರೆ. ಆಧಾರ್ ಕಾರ್ಡ್ ಇನ್ನಿತರ ದಾಖಲೆ ಪತ್ರಗಳು ಕಳೆದ ದುರಂತದ ಸಂದರ್ಭದಲ್ಲಿ ನೀರು ಪಾಲಾಗಿದ್ದವು. ಬ್ಯಾಂಕಿನಲ್ಲಿ ಎಷ್ಟು ಹಣ ಇದೆ, ಏನು ಮಾಡಬೇಕು ಅನ್ನೋದು ತೋಚುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.
ಕೆಲಸ ಆರಂಭಿಸುವಾಗಲೇ 5 ಲಕ್ಷ ರೂಪಾಯಿ ಮಂಜೂರಾಗಿದ್ದರೆ, ಆವಾಗಲೇ ಕೆಲಸ ಮುಗಿಸಬೇಕಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಅಚ್ಚುತ ಗುತ್ತಿಗಾರು ಅವರೇ ಪಂಚಾಯತ್ ಅಧ್ಯಕ್ಷರಾಗಿದ್ದರೂ, ಕಾಮಗಾರಿ ಮುಗಿಸದೇ ಬಡಪಾಯಿ ಕುಟುಂಬವನ್ನು ಗೋಳಾಡಿಸುವ ಕೆಲಸ ಮಾಡಿದ್ದಾರೆ. ಈಗ ಪಂಚಾಯತ್ ನಲ್ಲಿ ಅಧ್ಯಕ್ಷರು ಬದಲಾಗಿದ್ದಾರೆ. ಆದರೆ, ಆಡಳಿತ ಬಿಜೆಪಿಯದ್ದೇ ಇದೆ. ಈ ಬಾರಿ ಹಿಂದುಳಿದ ವರ್ಗ ಎ ವಿಭಾಗದ ರೇವತಿ ಎಂಬವರು ಅಧ್ಯಕ್ಷರಾಗಿದ್ದಾರೆ. ಬಡಪಾಯಿ ಮಹಿಳೆಯ ಗೋಳಿನ ಕತೆ ಅಲ್ಲಿನ ಎಲ್ಲರಿಗೂ ಗೊತ್ತಿದೆ. ಪಂಚಾಯತ್ ಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೂ ಬಂದಿದೆ ಎನ್ನುತ್ತಿದ್ದಾರೆ, ಸ್ಥಳೀಯರು.
ಕಳೆದ ಬಾರಿ ಪಂಚಾಯತ್ ಅಧ್ಯಕ್ಷನಾಗಿದ್ದ ಅಚ್ಚುತ್ತ ಗುತ್ತಿಗಾರು ಈ ಬಾರಿ ಬಿಜೆಪಿಯಲ್ಲಿ ಎಸ್ಸಿ ಮೋರ್ಚಾ ಪಂಚಾಯತ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ಪಂಚಾಯತಿ ಅಧಿಕಾರ ಇಲ್ಲದಿದ್ದರೂ, ಪಕ್ಷದ ಮೇಲೆ ಹಿಡಿತ ಹೊಂದಿದ್ದಾರೆ. ಐದು ಲಕ್ಷ ಪೂರ್ತಿ ಹಣ ಬಂದಿಲ್ಲವೋ ಅಥವಾ ಯಾರಾದ್ರೂ ಗುಳುಂ ಮಾಡಿದ್ದಾರೋ ಎನ್ನುವುದನ್ನು ಪಂಚಾಯತ್ ಅಧಿಕಾರಿಗಳೇ ಪತ್ತೆ ಮಾಡಬೇಕು. ಬಡಪಾಯಿ ಮಹಿಳೆಗೆ ಬಂದಿದ್ದ ಪರಿಹಾರ ನಿಧಿಯ ಹಣದಲ್ಲಿ ಮನೆಯನ್ನು ಕಟ್ಟಿಸಿಕೊಡುವ ಜವಾಬ್ದಾರಿ ಪಂಚಾಯತಿನದ್ದು. ಆರೋಪ ಎದುರಿಸುತ್ತಿರುವ ಅಚ್ಚುತ ಗುತ್ತಿಗಾರು ಮೂಲಕವೇ ಕೆಲಸ ಮಾಡಿಸಿಕೊಡಬೇಕು ಎಂಬ ಆಗ್ರಹವನ್ನು ಸ್ಥಳೀಯರು ಮುಂದಿಟ್ಟಿದ್ದಾರೆ.
ಗಿರಿಜಾ ಅವರಿಗೆ ಹಣ ಮಂಜೂರಾಗಿದ್ದ ಸಂದರ್ಭದಲ್ಲೇ ಪಂಜಿಪಳ್ಳ ನಿವಾಸಿ ರಾಜ ಎಂಬವರಿಗೂ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ 5 ಲಕ್ಷ ರೂಪಾಯಿ ಬಂದಿತ್ತು. ಅದರಲ್ಲಿ ಮನೆಯ ಕೆಲಸ ಪೂರ್ತಿಯಾಗಿದೆ. ಬಡಪಾಯಿ ಮಹಿಳೆಯ ಮನೆಯ ಕಾಮಗಾರಿ ಯಾಕೆ ಆಗಿಲ್ಲ ಎಂದು ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.
Sullia Guthigar panchyath has misued Fund thay was issued by government to build house for poor lady whose house was destroyed due to heavy rains in Sullia.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm