ಬ್ರೇಕಿಂಗ್ ನ್ಯೂಸ್
27-03-21 03:29 pm Mangaluru correspondent ಕರಾವಳಿ
ಮಂಗಳೂರು, ಮಾ.27: ಕಾರು ಮಾರಾಟ ಪ್ರಕರಣದಲ್ಲಿ ಸಸ್ಪೆಂಡ್ ಆಗಿರುವ ಮಂಗಳೂರು ಸಿಸಿಬಿಯಲ್ಲಿದ್ದ ಎಸ್ಐ ಕಬ್ಬಾಳರಾಜ್ ವಿರುದ್ಧ ಮತ್ತೆ ಆರೋಪ ಕೇಳಿಬಂದಿದೆ. ಕಬ್ಬಾಳರಾಜ್, ಕುಂದಾಪುರದ ಕೋಟದಲ್ಲಿ ಎಸ್ಐ ಆಗಿದ್ದಾಗಲೇ ಭ್ರಷ್ಟನಾಗಿದ್ದ. ಬೇಕಾಬಿಟ್ಟಿಯಾಗಿ ವರ್ತಿಸುತ್ತಿದ್ದ. ಹಣಕ್ಕಾಗಿ ಜನರನ್ನು ಪೀಡಿಸಿ ಕೋಟ ಠಾಣೆಯಲ್ಲೇ ಆತನ ವಿರುದ್ಧ ಮೂರು ಎಫ್ಐಆರ್ ದಾಖಲಾಗಿದ್ದವು ಎನ್ನೋ ಮಾಹಿತಿ ಬಯಲಾಗಿದೆ.
ಕುಂದಾಪುರದ ಸಾಮಾಜಿಕ ಕಾರ್ಯಕರ್ಯ ದಿನೇಶ್ ಗಾಣಿಗ ಎಂಬವರು ಮಂಗಳೂರು ಪ್ರೆಸ್ ಕ್ಲಬ್ಬಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ಕರೆದು ಭ್ರಷ್ಟ ಅಧಿಕಾರಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕಬ್ಬಾಳರಾಜ್ ಪುತ್ತೂರಿನಲ್ಲಿ ಪ್ರೊಬೇಷನರಿ ಮುಗಿಸಿ 2015ರಲ್ಲಿ ಕೋಟ ಠಾಣೆಗೆ ಬಂದಿದ್ದ. ಎರಡು ವರ್ಷ ಕರ್ತವ್ಯದಲ್ಲಿದ್ದಾಗಲೇ ಸ್ವಿಫ್ಟ್ ಕಾರು ಮತ್ತು ಕೋಟ ಸಮೀಪದ ಗೋಪಾಡಿ ಎಂಬಲ್ಲಿ ಹೈವೇ ಬದಿಯಲ್ಲೇ 12 ಸೆಂಟ್ಸ್ ಜಾಗ ಖರೀದಿ ಮಾಡಿದ್ದ. ಸೆಂಟ್ಸ್ ಗೆ ಮೂರು ಲಕ್ಷ ರೂ. ಬೆಲೆಬಾಳುವ ಈ ಜಾಗವನ್ನು ತನ್ನ ಮಾವ ರಾಮಚಂದ್ರ ದೇವಾಡಿಗ ಹೆಸರಲ್ಲಿ 2016ರ ಸೆ.20ರಂದು ರಿಜಿಸ್ಟರ್ ಮಾಡಿದ್ದಾನೆ. ಬಳಿಕ, 2017ರಲ್ಲಿ ಅದೇ ಜಾಗವನ್ನು ಪತ್ನಿ ಸುನೀತಾ ದೇವಾಡಿಗ ಹೆಸರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದಾನೆ.
2015ರಲ್ಲಿ ಸ್ವಿಫ್ಟ್ ಹೊಸ ಕಾರು ಖರೀದಿಸಿದ್ದು ಪತ್ನಿ ಸುನೀತಾ ದೇವಾಡಿಗ ಹೆಸರಲ್ಲಿ ಬಂಟ್ವಾಳದ ವಿಳಾಸದಲ್ಲಿ ರಿಜಿಸ್ಟರ್ ಆಗಿದೆ. ಕೆಲಸಕ್ಕೆ ಸೇರಿದ ಒಂದೇ ವರ್ಷದಲ್ಲಿ ಈತ ಬೆಲೆಬಾಳುವ ಜಾಗ ಮತ್ತು ಕಾರು ಖರೀದಿಸಿದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದೆ. ಅದೇ ವೇಳೆ, ಕಬ್ಬಾಳರಾಜ್ ದೂರು ಹೇಳಿಕೊಂಡು ಬಂದ ಸಾರ್ವಜನಿಕರಲ್ಲಿ ಹಣ ಕೇಳುತ್ತಿದ್ದ ಬಗ್ಗೆ ಹಲವರು ದೂರು ಹೇಳಿದ್ದರು. ಎಸ್ಪಿಗೂ ದೂರು ಸಲ್ಲಿಸಿದ್ದರು. ಅದರಂತೆ, ಕೋಟ ಠಾಣೆಯಲ್ಲೇ ಈತನ ವಿರುದ್ಧ ಮೂರು ಎಫ್ಐಆರ್ ದಾಖಲಾಗಿದ್ದವು. ಬಳಿಕ ಆಗಿನ ಉಡುಪಿ ಎಸ್ಪಿ ಆಗಿದ್ದ ಅಣ್ಣಾಮಲೈ, ಕಬ್ಬಾಳರಾಜನನ್ನು ಪನೀಶ್ಮೆಂಟ್ ಟ್ರಾನ್ಸ್ ಫರ್ ಆಗಿ ಮಂಗಳೂರಿನ ಮೆಸ್ಕಾಂಗೆ ವರ್ಗಾವಣೆ ಮಾಡಿದ್ದರು. ಇಂಥ ಭ್ರಷ್ಟ ವ್ಯಕ್ತಿಯನ್ನು ಅದ್ಹೇಗೆ ಮಂಗಳೂರಿನ ಸಿಸಿಬಿಗೆ ಎಸ್ಐ ಆಗಿ ನೇಮಕ ಮಾಡಿಕೊಂಡಿದ್ದರೋ ಗೊತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಈ ನಡುವೆ, ಮಂಗಳೂರಿನ ಸಿಸಿಬಿಯಲ್ಲಿಯೂ ಲಂಚಾವತಾರ ತೋರಿರುವ ಬಗ್ಗೆ ಹಲವು ದೂರುಗಳು ಕೇಳಿಬಂದಿವೆ. ಇತ್ತೀಚೆಗೆ ಆರೋಪಿಗಳಿಗೆ ಸೇರಿದ ಕಾರು ಮಾರಾಟ ಪ್ರಕರಣದಲ್ಲಿ ಈತನನ್ನು ಸಸ್ಪೆಂಡ್ ಮಾಡಲಾಗಿದೆ. ಹೀಗಿದ್ದರೂ, ಈ ವ್ಯಕ್ತಿಗೆ ಮುಖ್ಯಮಂತ್ರಿಯಿಂದ ಪದಕ ಕೊಡಿಸಿದ್ದಾರೆ. ಕರ್ತವ್ಯದುದ್ದಕ್ಕೂ ಭ್ರಷ್ಟಾಚಾರ ನಡೆಸಿದ್ದಕ್ಕಾಗಿ ಮುಖ್ಯಮಂತ್ರಿ ಪದಕ ಕೊಡಿಸಿದ್ದಾರೆಯೇ ಎಂದು ಪ್ರಶ್ನೆ ಮಾಡಿದ ದಿನೇಶ್ ಗಾಣಿಗ, ಕೂಡಲೇ ಮುಖ್ಯಮಂತ್ರಿ ಪದಕವನ್ನು ಆತನಿಂದ ವಾಪಸ್ ಪಡೆಯಬೇಕು. ಕಬ್ಬಾಳರಾಜ್ ವಿರುದ್ಧ ಈಗಾಗ್ಲೇ ಎಸಿಬಿಗೆ ದೂರು ನೀಡಿದ್ದೇನೆ. ಮುಂದಿನ ವಾರ ಕಾರು ಮಾರಾಟ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳಿಗೂ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.
ಈ ಪರಿ ಭ್ರಷ್ಟಾಚಾರ ಮಾಡಿದವರನ್ನು ಇಲಾಖೆಯಲ್ಲಿ ಉಳಿಸಿಕೊಳ್ಳಬಾರದು. ಪೊಲೀಸ್ ಹುದ್ದೆಯಿಂದ ವಜಾ ಮಾಡಬೇಕು ಎಂದು ದಿನೇಶ್ ಗಾಣಿಗ ಒತ್ತಾಯಿಸಿದ್ದಾರೆ.
RTI activist Dinesh Ganiga states that he will file a complaint with CID officials against the now suspended CCB sub-inspector (SI) Kabbal Raj, urging them to probe into his alleged misconduct and misuse of power.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm