ಬ್ರೇಕಿಂಗ್ ನ್ಯೂಸ್
26-03-21 03:40 pm Mangaluru correspondent ಕರಾವಳಿ
ಮಂಗಳೂರು, ಮಾ.26: ಮಂಗಳೂರು ಕೇಂದ್ರೀಕರಿಸಿ ನಗದು ರೂಪದಲ್ಲಿ ಹವಾಲಾ ಹಣದ ವಹಿವಾಟು ನಡೆಸುತ್ತಿದ್ದ ಭಾರೀ ದೊಡ್ಡ ಜಾಲವೊಂದನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ದೂರಿನ ಬೆನ್ನತ್ತಿದ ಪೊಲೀಸರು ಹವಾಲಾ ಹಣವನ್ನು ದೋಚುವುದಕ್ಕಾಗಿ ದೂರುದಾರು ಮತ್ತು ಆರೋಪಿಗಳು ಸೇರಿ ದರೋಡೆಯಾದ ರೀತಿ ನಾಟಕವಾಡಿದ್ದರು ಎನ್ನುವುದನ್ನು ಪತ್ತೆ ಮಾಡಿದ್ದಾರೆ. ಪ್ರಕರಣ ಸಂಬಂಧಿಸಿ ಸದ್ಯಕ್ಕೆ ಐವರನ್ನು ಬಂಧಿಸವಾಗಿದೆ.
ಮಾರ್ಚ್ 4ರಂದು ಅಬ್ದುಲ್ ಸಲಾಂ ಎಂಬಾತ ತನ್ನ ತಂಗಿಯ ಮಗಳ ಮದುವೆಗೆಂದು ವಿವಿಧ ಕಡೆಯಿಂದ ಸಂಗ್ರಹಿಸಿದ್ದ 16.20 ಲಕ್ಷ ನಗದು ಹಣವನ್ನು ಒಯ್ಯುತ್ತಿದ್ದಾಗ ದರೋಡೆ ಆಗಿರುವ ಬಗ್ಗೆ ದೂರು ನೀಡಿದ್ದರು. ಘಟನೆ ಫೆ.22ರಂದು ನಡೆದಿದ್ದು ಯಾರೋ ದುಷ್ಕರ್ಮಿಗಳು ಪಾಂಡೇಶ್ವರದ ಓಲ್ಡ್ ಕೆಂಟ್ ರೋಡ್ ನಲ್ಲಿ ತೆರಳುತ್ತಿದ್ದಾಗ ಹಣವನ್ನು ದೋಚಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ಇದೇ ವೇಳೆ, ಅದೊಂದು ಭಾರೀ ದೊಡ್ಡ ಹವಾಲಾ ಜಾಲದ ಹಣ ಎಂಬ ಬಗ್ಗೆ ಮಾಹಿತಿ ಪಡೆದ ಹೆಡ್ ಲೈನ್ ಕರ್ನಾಟಕ, ಇದರಲ್ಲಿ ಕೋಟ್ಯಂತರ ರೂಪಾಯಿ ನಗದು ದೋಚಲಾಗಿದೆ ಎಂದು ವರದಿ ಮಾಡಿತ್ತು. ಅಲ್ಲದೆ, ಅದಕ್ಕೆ ಪೂರಕವಾಗಿ ಘಟನೆ ನಡೆದಿರುವ ಜಾಗದ ಸಿಸಿಟಿವಿಯಲ್ಲಿ ದಾಖಲಾಗಿರುವ ದರೋಡೆ ಚಿತ್ರಣದ ಸಿಸಿಟಿವಿಯನ್ನೂ ಬಿತ್ತರಿಸಿತ್ತು. ಈಗ ಒಟ್ಟು ಚಿತ್ರಣ ಹೊರಬಿದ್ದಿದ್ದು, ಪ್ರಕರಣದಲ್ಲಿ ಹವಾಲಾ ಜಾಲ ಭಾಗಿಯಾಗಿದ್ದು ಖಚಿತವಾಗಿದ್ದಲ್ಲದೆ, ದರೋಡೆ ನಾಟಕವಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಡೀ ಘಟನೆಯ ಬಗ್ಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇಸ್ಮಾಯಿಲ್ ದರೋಡೆ ಸೂತ್ರಧಾರ
ಮೊಹಮ್ಮದ್ ರಿಫಾದ್, ರಾಶೀದ್, ಅಷ್ಪಾಕ್, ಜಾಫರ್ ಸಾದಿಕ್, ಮೊಹಮ್ಮದ್ ಇಸ್ಮಾಯಿಲ್ ಮತ್ತು ಕೆ.ಎಚ್. ಮಯ್ಯದ್ದಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಹವಾಲಾ ಹಣದ ವಹಿವಾಟಿನಲ್ಲಿ ಇವೆರಲ್ಲ ಏಜಂಟರಾಗಿದ್ದು, ದೂರುದಾರ ಅಬ್ದುಲ್ ಸಲಾಂಗೆ ಗೊತ್ತಿರುವ ಮಂದಿಯೇ ಆಗಿದ್ದಾರೆ. ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದ ವಹಿವಾಟಿನಲ್ಲಿ ಇವರಿಗೆ ಬೇಸಿಕ್ ಸಂಬಳ ತಿಂಗಳಿಗೆ ಎಂಟು ಸಾವಿರ ನಿಗದಿ ಮಾಡಿದ್ದು, ನಗದು ಹಣ ಸಾಗಾಟದ ಜಾಲ ನಡೆಸುತ್ತಿದ್ದರು. ದಿನವಹಿ ಸಾಗಿಸುತ್ತಿದ್ದ ಹಣಕ್ಕೆ ಐನೂರು, ಒಂದು ಸಾವಿರ ಹೀಗೆ ಇಂತಿಷ್ಟು ಕಮಿಷನ್ ಕೂಡ ಹೆಚ್ಚುವರಿ ಕೊಡುತ್ತಿದ್ದರು. ಹೀಗೆ ತಿಂಗಳಿಗೆ ಕಮಿಷನ್ ಮತ್ತು ಸಂಬಳ ಸೇರಿ ಒಟ್ಟು 20 ಸಾವಿರದಷ್ಟು ಪಡೆಯುತ್ತಿದ್ದರು. ಇದೇ ವೇಳೆ, ಮೊಹಮ್ಮದ್ ಇಸ್ಮಾಯಿಲ್ ಹವಾಲಾ ಹಣವನ್ನು ದೋಚುವ ಪ್ಲಾನ್ ಹಾಕಿದ್ದು, ತಿಂಗಳಿಗೆ 20 ಸಾವಿರದ ಬದಲು ಒಮ್ಮೆಲೇ ಲಕ್ಷಾಂತರ ರೂಪಾಯಿ ಹಣ ಗಳಿಸಬಹುದೆಂದು ಜೊತೆಗಾರರನ್ನು ನಂಬಿಸಿ, ದರೋಡೆ ನಾಟಕದ ಸ್ಕೆಚ್ ಹಾಕಿದ್ದಾನೆ.
ಅತ್ಯಂತ ವ್ಯವಸ್ಥಿತ ಹವಾಲಾ ಜಾಲ
ದುಬೈನಿಂದ ಬಂದ ಬಳಿಕ ಇದೇ ದಂಧೆಯಲ್ಲಿ ತೊಡಗಿಕೊಂಡಿದ್ದ ಇಸ್ಮಾಯಿಲ್ ಕೂಡ ಹವಾಲಾ ಏಜಂಟನಾಗಿದ್ದು, ದೂರುದಾರ ಅಬ್ದುಲ್ ಸಲಾಂಗೆ ಹತ್ತಿರದ ವ್ಯಕ್ತಿಯಾಗಿದ್ದಾನೆ. ದರೋಡೆ ನಡೆದ ಬಳಿಕ ಹಣವನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆಂದು ಅದನ್ನು ನೀಡಬೇಕಾದ ನೈಜ ವ್ಯಕ್ತಿಗೆ ಹೇಳಿದ್ದರು. ಸಣ್ಣ ಮೊತ್ತವಾದರೆ, ಈ ಜಾಲದ ಒಳಗಿನವರೇ ಒಂದಷ್ಟನ್ನು ರಿಕವರಿ ಮಾಡುತ್ತಿದ್ದರು. ಹಣ ಆಗಬೇಕಾಗಿದ್ದ ವ್ಯಕ್ತಿ ಸತಾಯಿಸಿದ ಬಳಿಕ ದರೋಡೆ ಆಗಿರುವ ಬಗ್ಗೆ ಅಬ್ದುಲ್ ಸಲಾಂ ಪೊಲೀಸ್ ದೂರು ನೀಡಿದ್ದ. ಆದರೆ, ದೂರಿನ ಸಂದರ್ಭದಲ್ಲಿ ಹವಾಲಾ ಹಣವೆಂದು ಪೊಲೀಸರಿಗೆ ಹೇಳಲಾಗದೆ, ಮದುವೆಗೆಂದು ನಿಗದಿಪಡಿಸಿದ್ದ ಹಣವೆಂದು ಕತೆ ಕಟ್ಟಿದ್ದ. ದೂರು ನೀಡಿದ್ದ ವ್ಯಕ್ತಿಯನ್ನು ತೀವ್ರ ವಿಚಾರಣೆ ನಡೆಸಿದಾಗ, ತಡಬಡಾಯಿಸಿದ್ದು ಬಳಿಕ ವಿಚಾರಣೆಗೆ ಬಾರದೇ ನಾಪತ್ತೆಯಾಗಿದ್ದಾನೆ. ಈಗ ಪತ್ನಿ ಮಕ್ಕಳ ಸಹಿತ ಮನೆಯನ್ನೇ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಸಿಸಿಟಿವಿಯಲ್ಲಿ ಪತ್ತೆಯಾದ ಆರೋಪಿಗಳ ಚಹರೆ ಆಧರಿಸಿ, ಕೃತ್ಯದಲ್ಲಿ ಪಾಲ್ಗೊಂಡಿದ್ದ ನಾಲ್ವರನ್ನು ಬಂಧಿಸಲಾಗಿದೆ. ಅಲ್ಲದೆ, ಮಯ್ಯದ್ದಿಯನ್ನು ಸಂಚಿನಲ್ಲಿ ಭಾಗಿಯಾಗಿ ಹಣ ಪಡೆದ ಆರೋಪದಲ್ಲಿ ಬಂಧಿಸಿದ್ದೇವೆ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇನ್ನೂ ಏಳೆಂಟು ಮಂದಿ ಇದ್ದಾರೆ..!
ಮಂಗಳೂರಿನಲ್ಲಿ ಹವಾಲಾ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕಿಂಗ್ ಪಿನ್ ಸೇರಿ ಹಲವು ಸೂತ್ರಧಾರರು ಇದ್ದಾರೆ. ಏಳೆಂಟು ಜನರ ಪಾತ್ರ ಇರುವುದು ಕಂಡುಬಂದಿದೆ. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ತಂಡವನ್ನು ಪತ್ತೆ ಮಾಡುವುದಾಗಿ ಕಮಿಷನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದಿನವೂ ಲಕ್ಷ, ಕೋಟಿ ರೂಪಾಯಿ ಹಣದ ವಹಿವಾಟು ನಡೆಯುತ್ತದೆ. ಅಂದು ದರೋಡೆಯಾದ ಹಣದಲ್ಲಿ 16.20 ಲಕ್ಷ ರೂ. ದೋಚಿದ್ದಾರೆ ಎಂದು ದೂರು ನೀಡಿದ್ದಾರೆ. ಆದರೆ, ಹೀಗೆ ಎಷ್ಟು ಮೊತ್ತವನ್ನು ದೋಚಿದ್ದಾರೆ ಎನ್ನುವುದು ಗೊತ್ತಾಗಿಲ್ಲ. ಹಲವು ಬಾರಿ ಇಂಥ ಕೃತ್ಯ ನಡೆದಿದ್ದರೆ ಕೋಟ್ಯಂತರ ರೂ. ದೋಚಿರುವ ಸಾಧ್ಯತೆಯಿದೆ. ಈಗ ಬಂಧಿತರಾದವರು ಅಬ್ದುಲ್ ಸಲಾಂ ಮತ್ತು ಕೆಲವರ ಮೇಲೆ ಬೆರಳು ತೋರಿಸುತ್ತಿದ್ದಾರೆ. ಆರ್ಥಿಕ ಅಪರಾಧ ಆಗಿರುವುದರಿಂದ ಇಡಿ ಮತ್ತು ಐಟಿ ಇಲಾಖೆಯ ತನಿಖೆಗೆ ರೆಫರ್ ಮಾಡಬೇಕಾಗುತ್ತದೆ. ಇಲ್ಲಿ ಹಣ ಯಾರದ್ದು, ಜುವೆಲ್ಲರಿಯದ್ದೋ, ಬೇರೆ ವ್ಯವಹಾರಸ್ಥರದ್ದೋ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಇತರೇ ಆರೋಪಿಗಳು ಸಿಕ್ಕಿಬಿದ್ದರೆ ಮಾತ್ರ ಎಲ್ಲವೂ ತಿಳಿದುಬರಬಹುದು ಎಂದು ಕಮಿಷನರ್ ತಿಳಿಸಿದ್ದಾರೆ.
ಭಾರೀ ಕುಳಗಳ ಶಾಮೀಲು ಸಾಧ್ಯತೆ
ಸದ್ಯಕ್ಕೆ ಆರೋಪಿಗಳಿಂದ 90 ಸಾವಿರ ನಗದು, ಎರಡು ಬೈಕ್, ಒಂದು ಕಾರು, ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದೇವೆ. ಆರೋಪಿಗಳು ಬಳಸಿದ್ದ ವಾಟ್ಸಪ್ ಚಾಟ್, ಇನ್ನಿತರ ಸಾಕ್ಷ್ಯಗಳನ್ನು ನಾಶ ಪಡಿಸಿದ್ದಾರೆ. ಯಾರೆಲ್ಲ ಎಷ್ಟು ಹಣ ಪಡೆದಿದ್ದಾರೆ, ಆ ಹಣವನ್ನು ಯಾರಿಗೆಲ್ಲ ತಲುಪಿಸಲಾಗಿದೆ ಎನ್ನುವ ಬಗ್ಗೆ ತಿಳಿದುಬಂದಿಲ್ಲ ಎಂದಿದ್ದಾರೆ. ಒಟ್ಟಿನಲ್ಲಿ ಮಂಗಳೂರು ಕೇಂದ್ರೀಕರಿಸಿ ಜುವೆಲ್ಲರಿ, ಫಿಶ್ ಮಿಲ್, ಮೀನಿನ ವಹಿವಾಟು ಇನ್ನಿತರ ವ್ಯವಹಾರ ಕ್ಷೇತ್ರದಲ್ಲಿ ಸರಕಾರಕ್ಕೆ ವಂಚಿಸಿ, ಭಾರೀ ನಗದು ವಹಿವಾಟು ನಡೆಯುತ್ತಿದ್ದು, ಇದರ ಜಾಲದಲ್ಲಿ ಮಂಗಳೂರಿನ ಪ್ರಮುಖರು ಭಾಗಿಯಾಗಿದ್ದಾರೆ. ಪೊಲೀಸರು ಎಷ್ಟರ ಮಟ್ಟಿಗೆ ಇದರ ಆಳಕ್ಕಿಳಿದು ತನಿಖೆ ನಡೆಸುತ್ತಾರೋ, ಅಷ್ಟರ ವರೆಗೂ ಇದರ ಬೇರುಗಳು ತೆರೆದುಕೊಳ್ಳಲಿದೆ. ಐಟಿ ಅಧಿಕಾರಿಗಳು ಬೆನ್ನತ್ತಿದರೆ, ಹಣ ಯಾರದ್ದು, ಯಾವೆಲ್ಲಾ ಕ್ಷೇತ್ರದ ಕುಳಗಳು ಈ ಹವಾಲಾ ವಹಿವಾಟು ನಡೆಸುತ್ತಾರೆ ಎನ್ನೋದು ಬಯಲಾಗಬಹುದು.
ದರೋಡೆ ಹಿಂದಿನ ಅಸಲಿಯತ್ತು ! ಕೋಟಿ ರೂ. ಹವಾಲಾ ಹಣವನ್ನೇ ದೋಚಿದ್ರಾ ನಾಟಕಕಾರರು..!?
Four persons have been arrested with Hawala Link and robbery in Mangalore. The four had created a Drama to rob the hawala money through attack said Police Commissioner Shashi Kumar.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm