ಬ್ರೇಕಿಂಗ್ ನ್ಯೂಸ್
23-03-21 06:27 pm Mangalore Correspondent ಕರಾವಳಿ
ಮಂಗಳೂರು, ಮಾ.23: ಏನ್ರೀ.. ಮಾಸ್ಕ್ ಎಲ್ಲಿದೇರಿ ನಿಮ್ದು ? ಕೊರೊನಾ ನಿಮ್ಗೇನು ಬರಲ್ಲಾ ಅಂದಿದ್ಯಾ ? ಹೀಗೆಂದು ರಸ್ತೆಗಿಳಿದು ಮಾಸ್ಕ್ ಬಗ್ಗೆ ಕ್ಲಾಸ್ ತಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ. ವಿ. ಜನರಲ್ಲಿ ಕೊರೊನಾ ಸೋಂಕಿನ ವಿರುದ್ಧ ಮತ್ತು ಮಾಸ್ಕ್ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರಲ್ಲಿ ಜಿಲ್ಲಾಧಿಕಾರಿಯೇ ಫೀಲ್ಡಿಗಿಳಿದು ಬಸ್, ರಸ್ತೆಯಲ್ಲಿ ಓಡಾಡಿ ಮಾಸ್ಕ್ ಧರಿಸದೇ ಓಡಾಡುವವರಿಗೆ ಬಿಸಿ ಮುಟ್ಟಿಸಿದ್ದಾರೆ.
ಮಂಗಳೂರು ನಗರದ ಬಂದರು ಪ್ರದೇಶದಲ್ಲಿ ಇಂದು ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಮತ್ತು ಎಡಿಸಿ ರೂಪಾ, ಸಹಾಯಕ ಕಮಿಷನರ್ ಮದನ್ ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ಮತ್ತಿತರ ಅಧಿಕಾರಿಗಳು ರಸ್ತೆಗೆಳಿದು ಕೊರೊನಾ ಜಾಗೃತಿ ಮೂಡಿಸಿದರು.
ಕೊರೊನಾ ನಿಯಂತ್ರಣಕ್ಕಾಗಿ ಮಾಸ್ಕ್ ಧಾರಣೆಯನ್ನು ಸರಕಾರ ಕಡ್ಡಾಯಗೊಳಿಸಿದ್ದು ಮಾಸ್ಕ್ ಇಲ್ಲದ ಗ್ರಾಹಕರಿಗೆ ಯಾವುದೇ ವ್ಯವಹಾರ ಮಾಡಬಾರದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಮಾಸ್ಕ್ ಹಾಕಿಲ್ಲದ ವ್ಯಾಪಾರಸ್ಥರಿಗೆ ಒಂದರಿಂದ ಐದು ಸಾವಿರ ರೂ. ವರೆಗೆ ಸ್ಥಳದಲ್ಲಿಯೇ ದಂಡ ವಿಧಿಸಿದ್ದಾರೆ.
ಸಾರ್ವಜನಿಕ ಪ್ರದೇಶಗಳು, ಅಂಗಡಿ ಮುಂಗಟ್ಟು, ವ್ಯಾಪಾರ ಕೇಂದ್ರಗಳು, ಬಸ್ ಇನ್ನಿತರ ಸಾರಿಗೆ ವಾಹನಗಳು, ಮಳಿಗೆ ಗಳಿಗೆ ತೆರಳಿ ಕೊರೊನಾ ಎಚ್ಚರಿಕೆಯ ಛಾಟಿ ಬೀಸಿದರು. ಅಂಗಡಿಗಳಲ್ಲಿ ವ್ಯಾಪಾರಸ್ಥರು ಮಾಸ್ಕ್ ಹಾಕಿದ್ದಾರೆಯೇ ? ಎಂದು ಗಮನಿಸುತ್ತಾ ರಸ್ತೆಯಲ್ಲಿ ಮಾಸ್ಕ್ ಇಲ್ಲದೆ ಎದುರಿಗೆ ಸಿಕ್ಕವರಿಗೆ ಗದರುತ್ತಾ ಸಾಗಿದ್ದಾರೆ. ಯಾಕಪ್ಪಾ ಮಾಸ್ಕ್ ಹಾಕಿಲ್ಲಾ.. ಕೊರೊನಾ ಇರೋದು ಗೊತ್ತಿಲ್ವಾ.. ಎಂದು ಗದರಿದ್ದಾರೆ. ಬಳಿಕ ಬಂದರು ಪ್ರದೇಶದ ವ್ಯಾಪಾರಿ ಮಳಿಗೆಗಳಿಗೆ ತೆರಳಿದ ಜಿಲ್ಲಾಧಿಕಾರಿ ಅಲ್ಲಿ ಸಿಬಂದಿ ಹಾಗೂ ಮಾಲೀಕರೇ ಮಾಸ್ಕ್ ಹಾಕಿರದೇ ಇದ್ದುದನ್ನು ಗಮನಿಸಿ ಆಕ್ರೋಶಗೊಂಡು ಮಳಿಗೆಯ ಮಾಲಿಕನಿಗೆ 10 ಸಾವಿರ ರೂಪಾಯಿ ದಂಡ ವಿಧಿಸುವಂತೆ ಆದೇಶಿದ್ದು ಮಳಿಗೆ ಬಂದ್ ಮಾಡಿಸುವಂತೆ ಸೂಚಿಸಿದ್ದಾರೆ.
ಈ ವೇಳೆ, ಕೆಲವು ವ್ಯಾಪಾರಸ್ಥರು ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ. ಸ್ಟೇಟ್ ಬ್ಯಾಂಕ್ ಪರಿಸರದಲ್ಲಿ ನಿಂತಿದ್ದ ಸಾರಿಗೆ ಬಸ್ಸಿಗೂ ಏರಿಹೋದ ಜಿಲ್ಲಾಧಿಕಾರಿ, ಮಾಸ್ಕನ್ನು ಗಲ್ಲಕ್ಕೆ ತಗಲಿಸಿಕೊಂಡಿದ್ದ ಪ್ರಯಾಣಿಕರನ್ನು ಗದರಿಸಿದ್ದಾರೆ. ಬಸ್ಸಿನಲ್ಲಿ ಪ್ರಯಾಣಿಕರು ಮಾಸ್ಕ್ ಹಾಕಿಲ್ಲಾಂದ್ರೆ ಕಂಡಕ್ಟರ್ ಮತ್ತು ಚಾಲಕನಿಗೆ ದಂಡ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ಕೊರೊನಾ ಸೋಂಕು ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ 228 ಗ್ರಾಮ ಪಂಚಾಯತ್ ಹಾಗು 278 ಅರ್ಬನ್ ಲೋಕಲ್ ಬಾಡಿ ವಾರ್ಡ್ ಗಳಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಲು ಜಿಲ್ಲಾಡಾಳಿತ ಯೋಜನೆ ರೂಪಿಸಿದೆ.
Video:
DC Rajendra Kumar conducts a sudden raid in public places of Mangalore imposing a fine on those who were violating covid rules.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm