ಬ್ರೇಕಿಂಗ್ ನ್ಯೂಸ್
19-03-21 05:58 pm Mangalore Correspondent ಕರಾವಳಿ
ಮಂಗಳೂರು, ಮಾ.19: ಪ್ರತಿ ಹಳ್ಳಿಯ ಬಡವರಿಗೂ ಕನಿಷ್ಠ ಕೂಲಿ ಮತ್ತು ಉದ್ಯೋಗ ಸಿಗಬೇಕು ಎನ್ನುವ ಉದ್ದೇಶದಿಂದ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ( ನರೇಗಾ) ಯೋಜನೆಯನ್ನು ಜಾರಿಗೆ ತರಲಾಗಿತ್ತು. ಗ್ರಾಮ ಪಂಚಾಯತಿ ಮೂಲಕ ನರೇಗಾ ಯೋಜನೆ ಅನುಷ್ಠಾನ ಮಾಡುತ್ತಿದ್ದು, ಇದರಲ್ಲಿನ ಭ್ರಷ್ಟಾಚಾರ ತಪ್ಪಿಸಲು ಫಲಾನುಭವಿಯ ಖಾತೆಗೆ ನೇರವಾಗಿ ಜಮೆಯಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಭ್ರಷ್ಟರು ರಂಗೋಲಿಯಡಿ ತೂರುತ್ತಾರೆ ಎನ್ನುವಂತೆ, ಬಡವರ ಖಾತೆಗೆ ಬರುವ ನರೇಗಾ ಕೂಲಿಯನ್ನೇ ಪಂಚಾಯತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಸೇರಿ ತಿಂದು ತೇಗುತ್ತಿರುವುದಕ್ಕೆ ಜ್ವಲಂತ ನಿದರ್ಶನ ಇಲ್ಲಿ ಸಿಕ್ಕಿದೆ.
ಎಕ್ಕಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುರೇಖಾ ರೈ ಎಂಬವರು ಫಲಾನುಭವಿಗಳ ಖಾತೆಗೆ ಬಂದಿದ್ದ ನರೇಗಾ ಕೂಲಿಯ ಹಣವನ್ನು ಬಲವಂತವಾಗಿ ಬ್ಯಾಂಕಿಗೆ ಕರೆದೊಯ್ದು ಹಣವನ್ನು ಪಡೆಯುತ್ತಿದ್ದಾರೆಂಬ ಬಗ್ಗೆ ಆರೋಪ ಕೇಳಿಬಂದಿದೆ. ಎಕ್ಕಾರು ಪಂಚಾಯತ್ ವ್ಯಾಪ್ತಿಯ ಮೇಲಎಕ್ಕಾರ್ ವಾರ್ಡಿನಲ್ಲಿ 30ರಷ್ಟು ಮಂದಿಗೆ ನರೇಗಾ ಸ್ಮಾರ್ಟ್ ಕಾರ್ಡ್ ಇದೆ. 2019ರಲ್ಲಿ ಇವರಿಂದ ನರೇಗಾ ಕಾರ್ಡ್ ಮಾಡಿದ್ದು, ಎರಡು ವರ್ಷಗಳಿಂದ ಕೂಲಿ ಕೆಲಸ ಮಾತ್ರ ನೀಡಿರಲಿಲ್ಲ.
ಈ ಬಾರಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಎರಡು ಬಾರಿ 2280 ರೂ. ಗಳಂತೆ ಹಣ ಜಮೆಯಾಗಿದ್ದು, ಆಬಳಿಕ ಮಾರ್ಚ್ ತಿಂಗಳಲ್ಲಿ 1425 ರೂ. ಜಮೆಯಾಗಿತ್ತು. ಆದರೆ, ಹೀಗೆ ಫಲಾನುಭವಿಗಳ ಖಾತೆಗೆ ಜಮೆಯಾದ ಹಣವನ್ನು ಪಂಚಾಯಿತಿ ಅಧ್ಯಕ್ಷೆಯಾದ ಸುರೇಖಾ ರೈ, ಒಬ್ಬೊಬ್ಬರಿಂದಲೇ ಬಲವಂತವಾಗಿ ಪಡೆಯುತ್ತಿದ್ದಾರೆ ಎಂದು ಅಲ್ಲಿನ ಫಲಾನುಭವಿಗಳು ದೂರಿದ್ದಾರೆ.
ಎಕ್ಕಾರು ಪಂಚಾಯತಿಯ ನರೇಗಾ ಕೂಲಿ ಹಣವು ಕಾರ್ಪೋರೇಶನ್ ಬ್ಯಾಂಕಿನ ಎಕ್ಕಾರು ಶಾಖೆಗೆ ಬಂದಿತ್ತು. ಅಲ್ಲಿಗೆ ಸರದಿಯಂತೆ, ಪಂಚಾಯಿತ್ ಅಧ್ಯಕ್ಷರೇ ಫಲಾನುಭವಿಗಳನ್ನು ಖುದ್ದಾಗಿ ಕರೆದೊಯ್ದು ಹಣವನ್ನು ಡ್ರಾ ಮಾಡಿಸಿ ಪಡೆಯುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಸರಕಾರದಿಂದ ಹಣ ಬಂದಿದ್ದರೆ, ಅದನ್ನು ಫಲಾನುಭವಿ ಮತ್ತೆ ಯಾಕೆ ಪಂಚಾಯತಿ ಅಧ್ಯಕ್ಷರಿಗೆ ಮರಳಿಸಬೇಕು ಎಂದು ಫಲಾನುಭವಿಗಳು ಪ್ರಶ್ನಿಸುತ್ತಿದ್ದಾರೆ.
ಈ ಬಗ್ಗೆ ಅಲ್ಲಿನ ಕೆಲವರಲ್ಲಿ ಪ್ರಶ್ನೆ ಮಾಡಿದಾಗ, ನರೇಗಾ ಯೋಜನೆಯಡಿ ಜಾರಿಯಾಗುವ ಕೆಲಸವನ್ನು ಜೆಸಿಬಿಯಲ್ಲಿ ಮಾಡುತ್ತಿದ್ದು, ಅದರ ಹಣ ಮಾತ್ರ ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆಯಾಗುತ್ತದೆ. ಹಿಂದೆಲ್ಲಾ ಪಂಚಾಯತಿಗೆ ಈ ಫಂಡ್ ಬರುತ್ತಿದ್ದುದರಿಂದ ಅದನ್ನು ಕೂಲಿದಾರರಿಗೆ ನೀಡದೆ, ಪಂಚಾಯತ್ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿ ಪಡೆಯುತ್ತಿದ್ದರು. ಈ ರೀತಿಯ ಭ್ರಷ್ಟಾಚಾರವನ್ನು ತಪ್ಪಿಸಲೆಂದೇ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಪಂಚಾಯತ್ ಅಧಿಕಾರಿಗಳು ಕೂಲಿದಾರರಿಂದ ಕೆಲಸವನ್ನೇ ಮಾಡಿಸದೆ, ನರೇಗಾ ಯೋಜನೆಯ ದುಡ್ಡನ್ನು ಪಡೆಯುತ್ತಿದ್ದಾರೆ. ದುಡ್ಡು ಮಾತ್ರ ಕೂಲಿದಾರರ ಖಾತೆಗೆ ಜಮೆಯಾಗುತ್ತಿದ್ದರೂ, ಅದನ್ನು ಬಲವಂತವಾಗಿ ದಬಾಯಿಸಿ ಪೀಕಿಸುತ್ತಿದ್ದಾರೆ.
ಎಕ್ಕಾರು ಪಂಚಾಯಿತಿಯಲ್ಲಿ ಈ ಬಾರಿ ಬಿಜೆಪಿ ಬೆಂಬಲಿತರ ಆಡಳಿತ ಇದ್ದು, ಅಧ್ಯಕ್ಷೆಯಾಗಿ ಸುರೇಖಾ ರೈ ಆಯ್ಕೆಯಾಗಿದ್ದರು. ಎಕ್ಕಾರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಜಿಲ್ಲೆಯ ಪ್ರಮುಖರು ಸುರೇಖಾ ರೈಗೆ ಶುಭಕೋರಿ ಬ್ಯಾನರನ್ನೂ ಹಾಕಿದ್ದಾರೆ. ಆದರೆ, ಬಿಜೆಪಿ ಅಧ್ಯಕ್ಷೆಯಾಗಿರುವ ಸುರೇಖಾ ರೈ ಮಾತ್ರ ಬಡವರ ಖಾತೆಗೆ ಬಂದ ಕೂಲಿಯನ್ನೇ ಪೀಕಿಸುತ್ತಿದ್ದಾರೆಂಬ ಆರೋಪಕ್ಕೆ ಒಳಗಾಗಿದ್ದಾರೆ. ಫಲಾನುಭವಿಯೊಂದಿಗೆ ಬ್ಯಾಂಕಿಗೆ ತೆರಳಿ ಹಣವನ್ನು ಬಲವಂತವಾಗಿ ಪಡೆಯುತ್ತಿರುವ ಹಿಡನ್ ವಿಡಿಯೋ ಲಭ್ಯವಾಗಿದ್ದು, ಪಂಚಾಯಿತಿ ಅಧ್ಯಕ್ಷರ ಕಾರುಬಾರಿಗೆ ಸಾಕ್ಷಿಯಾಗಿದೆ.
Video:
Mangalore Nrega Job yojana Money allotted is being looted by Ekaru Grama Panchyath President has been exposed in the Video by Headline Karnataka.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm