ಬ್ರೇಕಿಂಗ್ ನ್ಯೂಸ್
16-03-21 06:12 pm Mangalore Correspondent ಕರಾವಳಿ
ಮಂಗಳೂರು, ಮಾ.16: ವರದಕ್ಷಿಣೆ ಕಿರುಕುಳ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಸ್ಥಳ ಮಹಜರು ತನಿಖೆಗೆ ಆಗಮಿಸಿದ್ದ ಹಾಸನ ಮಹಿಳಾ ಠಾಣೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಮಹಿಳಾ ಠಾಣೆ ಇನ್ ಸ್ಪೆಕ್ಟರ್ ಸ್ಥಳ ತನಿಖೆಗೆಂದು ಮಂಗಳೂರಿನ ಬೆಂದೂರುವೆಲ್ ಬಳಿಯ ಅಭಿಮಾನ್ ಟೆಕ್ಸಾಸ್ ಅಪಾರ್ಟ್ ಮೆಂಟಿಗೆ ತನ್ನ ಸಿಬಂದಿ ಜೊತೆಗೆ ಬಂದಿದ್ದರು. ಈ ವೇಳೆ, ಇನ್ ಸ್ಪೆಕ್ಟರ್ ಮಫ್ತಿಯಲ್ಲಿದ್ದುದರಿಂದ ಆಕೆಯನ್ನು ಆರೋಪಿ ಪರ ಲಾಯರ್ ಪ್ರಶ್ನೆ ಮಾಡಿದ್ದಾರೆ. ತಾವು ಸ್ಪಾಟ್ ಮಹಜರಿಗೆ ಬಂದ ವೇಳೆ ಮಫ್ತಿಯಲ್ಲಿದ್ದೀರಿ, ಜೊತೆಗೆ ಎಫ್ಐಆರ್ ಆಗಿರುವ ಬಗ್ಗೆ ನಿಮ್ಮಲ್ಲಿ ಕಾಪಿಯೇ ಇಲ್ಲ. ಹೇಗೆ ಮತ್ತೆ ನಿಮ್ಮನ್ನು ನಂಬುವುದು ಎಂದು ಪ್ರಶ್ನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಮನೆಯವರ ನಡುವೆ ವಾಗ್ವಾದ ಆಗಿದೆ.
ಹಾಸನ ಮೂಲದ ಜಾಸ್ಮಿನ್ ರೋಡ್ರಿಗಸ್ ಎಂಬಾಕೆ ಮಂಗಳೂರಿನ ಮರ್ವಿನ್ ಜೆರಾರ್ಡ್ ಸಿಕ್ವೇರಾ ಎಂಬಾತನ ಜೊತೆ ಮದುವೆಯಾಗಿದ್ದು, ವರ್ಷದ ಹಿಂದೆ ಯಾವುದೋ ಮನಸ್ತಾಪದಲ್ಲಿ ಪತ್ನಿ ತವರು ಮನೆಗೆ ತೆರಳಿದ್ದಳು. ಆನಂತರ ಜಾಸ್ಮಿನ್ ಹಾಸನದ ಮಹಿಳಾ ಠಾಣೆಯಲ್ಲಿ ವರದಕ್ಷಿಣೆ ಮತ್ತು ಗಂಡನ ಮನೆಯವರು ಕೊಲೆಗೆ ಯತ್ನಿಸಿದ್ದಾಗಿ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ.
ಘಟನೆ ಬಗ್ಗೆ ಸ್ಥಳ ಮಹಜರು ನಡೆಸುವ ಹಿನ್ನೆಲೆಯಲ್ಲಿ ಸ್ಥಳೀಯ ಕದ್ರಿ ಠಾಣೆಯ ಇಬ್ಬರು ಸಿಬಂದಿಯ ಜೊತೆಗೆ ಹಾಸನ ಪೊಲೀಸರು ಮರ್ವಿನ್ ಸಿಕ್ವೇರಾ ಇದ್ದ ಅಪಾರ್ಟ್ಮೆಂಟಿಗೆ ಆಗಮಿಸಿದ್ದಾರೆ. ಮೊದಲಿಗೆ, ಮನೆಯ ಒಳಗೆ ತೆರಳಿ ಪರಿಶೀಲನೆ ನಡೆಸಿದ್ದು, ಮನೆಯವರು ಪ್ರಶ್ನೆಯನ್ನೂ ಮಾಡಿದ್ದಾರೆ. ಇದೇ ವೇಳೆ, ಮರ್ವಿನ್ ಸಿಕ್ವೇರಾ ತನ್ನ ವಕೀಲ ಪ್ರವೀಣ್ ಪಿಂಟೋಗೆ ವಿಷಯ ತಿಳಿಸಿದ್ದು, ಸ್ವಲ್ಪ ಹೊತ್ತಿನಲ್ಲಿ ಅವರು ಬಂದಿದ್ದಾರೆ. ಸ್ಥಳಕ್ಕೆ ಬಂದ ಸಂದರ್ಭದಲ್ಲಿ ಮಹಿಳಾ ಠಾಣೆ ಎಸ್ ಐ ಮಫ್ತಿಯಲ್ಲಿರುವುದನ್ನು ವಕೀಲರು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಎಫ್ಐಆರ್ ನಲ್ಲಿ ಏನೇನಿದೆ, ಅದರ ಪ್ರತಿಯನ್ನು ಕೊಡುವಂತೆ ಕೇಳಿದ್ದಾರೆ. ಕೋರ್ಟ್ ವಾರಂಟ್ ಇದೆಯಾ ಎಂದು ಪ್ರಶ್ನಿಸಿದ್ದಾರೆ.
ಈ ವೇಳೆ, ಮರುತ್ತರ ಕೊಟ್ಟ ಮಹಿಳಾ ಸಿಬಂದಿಯಲ್ಲಿ ನಿಮ್ಮನ್ನು ಸಸ್ಪೆಂಡ್ ಮಾಡಿಸುತ್ತೇನೆ. ಬಾಯಿ ಮುಚ್ಚಿ ಎಂದು ಜೋರು ಧ್ವನಿಯಲ್ಲಿ ಹೇಳಿದ್ದು ಪೊಲೀಸರ ಮೊಬೈಲ್ ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಇದರಂತೆ, ಕರ್ತವ್ಯಕ್ಕೆ ಅಡ್ಡಿ ಮತ್ತು ಸಾರ್ವಜನಿಕರ ನಡುವೆ ತಮ್ಮನ್ನು ನಿಂದಿಸಿದ ಬಗ್ಗೆ ಕದ್ರಿ ಠಾಣೆಯಲ್ಲಿ ಹಾಸನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಬಗ್ಗೆ ವಕೀಲ ಪ್ರವೀಣ್ ಪಿಂಟೋರಲ್ಲಿ ಕೇಳಿದಾಗ, ನಾನು ಬರುವ ಮೊದಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಅಲ್ಲದೆ, ಮನೆಯ ಒಳಗೆ ಪರಿಶೀಲನೆ ನಡೆಸಿರುವುದಕ್ಕೆ ವಿಡಿಯೋ ದಾಖಲೆ ಇದೆ. ಮನೆಯಲ್ಲಿರುವ ಸಿಸಿಟಿವಿಯಲ್ಲಿ ಪೊಲೀಸರು ಪರಿಶೀಲನೆ ನಡೆಸುವುದು ಮತ್ತು ಮನೆಯವರನ್ನು ಪ್ರಶ್ನೆ ಮಾಡುವುದು ಅರ್ಧ ಗಂಟೆ ಸಮಯದ ವಿಡಿಯೋ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿ ಅನ್ನುವುದಾದರೆ, ಪೊಲೀಸರು ಮನೆಯ ಒಳಗೇನು ಮಾಡಿದ್ದಾರೆ. ಮನೆಯ ಹೊರಗಿದ್ದ ಪೊಲೀಸರನ್ನು ಪ್ರಶ್ನೆ ಮಾಡಿದ್ದು ಹೌದು ಎಂದು ಹೇಳಿದ್ದಾರೆ.
ವಕೀಲನೆಂಬ ನೆಪದಲ್ಲಿ ಪೊಲೀಸ್ ಅಧಿಕಾರಿಯ ಮುಂದೆ ದರ್ಪ ತೋರಿದ್ದು, ಪೊಲೀಸರ ವಿಡಿಯೋದಲ್ಲಿ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಪೊಲೀಸರು ಹೇಳಿದ್ದಕ್ಕೆ ಮನೆಯ ಒಳಗೆ ಹೋಗಿ ಪರಿಶೀಲನೆ ನಡೆಸಿರುವ ವಿಡಿಯೋವನ್ನು ವಕೀಲರು ಬಿಡುಗಡೆ ಮಾಡಿದ್ದಾರೆ.
Video:
Mangalore Advocate Praveen Pinto accused of obstructing a woman police inspector from Hassan. An advocate speaks to Headline Karnataka about the fact of the video which went viral.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm