ಬ್ರೇಕಿಂಗ್ ನ್ಯೂಸ್
15-03-21 06:11 pm Mangalore Correspondent ಕರಾವಳಿ
ಉಳ್ಳಾಲ, ಮಾ.15: ಕಳೆದೊಂದು ವಾರ ಜವರಾಯ ಉಳ್ಳಾಲದ ಕುಂಪಲದಲ್ಲಿ ಕಂಬಳಿ ಹೊದ್ದು ಮಲಗಿದ್ದನೋ ಏನೋ.. ಯಾಕಂದ್ರೆ, ಒಂದೇ ವಾರದಲ್ಲಿ ಕುಂಪಲ ಪ್ರದೇಶದಲ್ಲಿ ಸರಣಿಯಂತೆ ಮೂವರು ಅಕಾಲಿಕವಾಗಿ ಸಾವು ಕಂಡಿದ್ದಾರೆ. ಕಳೆದ ಸೋಮವಾರದಿಂದ ಶುಕ್ರವಾರದ ನಡುವೆ ಕುಂಪಲದಲ್ಲಿ ಮೂವರು ಅಕಾಲಿಕ ಸಾವನ್ನಪ್ಪಿದ್ದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.


ಮಾ.10ರ ಬುಧವಾರ ಆಶ್ರಯ ಕಾಲನಿ ನಿವಾಸಿ ಯುವತಿ ರೂಪದರ್ಶಿ ಪ್ರೇಕ್ಷಾ(17) ಅಸಹಜ ಆತ್ಮಹತ್ಯೆ ಪ್ರಕರಣ ಬಹಳಷ್ಟು ಸುದ್ದಿಯಾಗಿತ್ತು. ಪ್ರಕರಣದಲ್ಲಿ ಪ್ರೇಕ್ಷಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಆಕೆಯ ಗೆಳೆಯ ಮುಂಡೋಳಿ ನಿವಾಸಿ ಯತಿನ್ ರಾಜ್ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇದೀಗ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಯತಿನ್ ರಾಜ್ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರೂ ಪ್ರೇಕ್ಷಾ ಸಾವಿನ ಬಗ್ಗೆ ಇರುವ ನಿಗೂಢತೆ ಇನ್ನೂ ಹಾಗೆಯೇ ಉಳಿದಿದೆ. ಅಲ್ಲದೆ ಯುವತಿಯ ಸಾವಿಗೆ ಸ್ಥಳೀಯವಾಗಿ ಬೇರೂರಿರುವ ಗಾಂಜಾ ಮಾಫಿಯಾವೇ ಕಾರಣವೆಂದು ಗಾಂಜಾ ವ್ಯಸನಿಗಳ ವಿರುದ್ದ ಕುಂಪಲ ನಿವಾಸಿಗಳು ಅಭಿಯಾನ ಆರಂಭಿಸಿದ್ದಾರೆ.

ಪ್ರೇಕ್ಷಾ ಸಾವಿಗೂ ಎರಡು ದಿನದ ಹಿಂದೆ ಅಂದರೆ, ಮಾ.8ರ ಸೋಮವಾರ ರಾತ್ರಿ ಕುಂಪಲ ಬಾರ್ದೆ ನಿವಾಸಿ ನವ ವಿವಾಹಿತ ಲವಿತ್ ಕುಮಾರ್(34) ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಭವಿಷ್ಯದ ಕನಸುಗಳನ್ನು ಹೊತ್ತು ಕಳೆದ ಜನವರಿ ಅಂತ್ಯದಲ್ಲಿ ಹಸೆಮಣೆ ಏರಿದ್ದ ಲವಿತ್ ಅಕಾಲಿಕವಾಗಿ ಸಾವನ್ನಪ್ಪಿದ್ದು ಈ ಭಾಗದ ಜನರನ್ನು ಶೋಕದಲ್ಲಿ ಮುಳುಗಿಸಿತ್ತು. ನಂತರ ಎರಡೇ ದಿನದಲ್ಲಿ ಪ್ರೇಕ್ಷಾ ಅಸಹಜ ಸಾವನ್ನಪ್ಪಿದ್ದಳು.

ತಂದೆಯಾಗಬೇಕಿದ್ದ ನವವಿವಾಹಿತನ ಸಾವು !
ವಾರಾಂತ್ಯದ ಮಾ.12 ರ ಶುಕ್ರವಾರ ರಾತ್ರಿ ಮತ್ತೊಬ್ಬರು ಅಸಹಜ ಸಾವು ಕಂಡಿದ್ದಾರೆ. ಕುಂಪಲ ಮೂರುಕಟ್ಟೆಯ ಬಾಡಿಗೆ ಮನೆ ನಿವಾಸಿ ಮೂಲತಃ ಕಡಬ ಮರ್ದಾಳ ನಿವಾಸಿ ರಾಧಾಕೃಷ್ಣ (40) ಮನೆಯಲ್ಲಿ ಏಕಾಂಗಿ ಇದ್ದ ಸಂದರ್ಭ ಅಧಿಕ ರಕ್ತದೊತ್ತಡದಿಂದ ಬಳಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಎರಡು ವಾರಗಳ ಹಿಂದಷ್ಟೆ ಪತ್ನಿ ಜಯಂತಿಯನ್ನ ಸೀಮಂತ ಶಾಸ್ತ್ರ ಮುಗಿಸಿ ತವರು ಮನೆಗೆ ಕಳಿಸಿಕೊಟ್ಟಿದ್ದ ರಾಧಾಕೃಷ್ಣ ತನ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಕಾಲಿಕ ಸಾವು ಕಂಡಿದ್ದಾರೆ. ಮಧ್ಯರಾತ್ರಿಯಲ್ಲಿ ಬಿಪಿ ಏರಿಳಿತ ಆಗಿದ್ದೇ ಸಾವಿಗೆ ಕಾರಣ ಎನ್ನಲಾಗಿತ್ತು. ಈ ಸಾವು ಕೂಡ ಬೆಳಕಿಗೆ ಬಂದಿದ್ದು ಮರುದಿನವಾಗಿತ್ತು.

ಹೀಗಾಗಿ ಕುಂಪಲ ಪ್ರದೇಶದ ನಿವಾಸಿಗಳಿಗೆ ಕಳೆದ ವಾರವಿಡೀ ಶೋಕದ ದಿನಗಳು. ನೋವು, ವೇದನೆಗಳನ್ನು ಕೊಟ್ಟ ವಾರ. ಇದೇ ವೇದನೆಯ ನಡುವೆ, ಇಲ್ಲಿನ ನಿವಾಸಿಗಳು ಗಾಂಜಾ ವ್ಯಸನಿಗಳ ವಿರುದ್ಧ ಹೋರಾಟವನ್ನೂ ಆರಂಭಿಸಿದ್ದಾರೆ. ಆದರೆ, ಅವರಲ್ಲಿನ ಭೀತಿ ಇನ್ನೂ ತೊಲಗಿಲ್ಲ. ಅಸಹಜ ಸಾವುಗಳೇ ಹಾಗೆ. ಅನಿರೀಕ್ಷಿತ ಆಗಿ ಒದಗುವ ಅಪಘಾತಗಳಂತೆ. ಜೊತೆಗಿದ್ದವರೇ ಇನ್ನಿಲ್ಲವಾಗುತ್ತಾರೆ.. ಕುಂಪಲದ ಜನ ತಮ್ಮ ಒಡನಾಡಿಗಳನ್ನು ಕಳಕೊಂಡಿದ್ದಾರೆ.
Mangalore, Kampala reports three suspicious death in one week. Death of a Model, death of a Man at home and death of a newly married bride groom.
09-11-25 03:47 pm
Bangalore Correspondent
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm